ಮಡಿಕೇರಿ, ಸೆ. ೧೩: ಕೊಡಗು ಜಿಲ್ಲಾ ಮಹಿಳಾ ಬ್ಯಾಂಕಿನ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ.೧೮ರಂದು ನಗರದ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷೆ ಅರವಿಂದ ಅಣ್ಣಪ್ಪ ತಿಳಿಸಿದರು.

ಜಿಲ್ಲೆಯ ಏಕೈಕ ಮಹಿಳಾ ಬ್ಯಾಂಕ್ ಇದಾಗಿದ್ದು, ೧೯೯೭ರಲ್ಲಿ ಸ್ಥಾಪನೆ ಮಾಡಲಾಯಿತು. ಜಿಲ್ಲೆಯ ಹಿರಿಯ ಮಹಿಳೆ ಗಂಗಮ್ಮ ಬೋಪಯ್ಯ ಮತ್ತು ಪ್ರೇಮ ಸೋಮಯ್ಯ ಅವರು ಅಂದು ಬ್ಯಾಂಕ್ ಸ್ಥಾಪನೆ ಮಾಡಿದರು.

ಬ್ಯಾಂಕ್ ೨೦೨೪-೨೫ನೇ ಸಾಲಿನಲ್ಲಿ ೯.೪೫ ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು, ಬ್ಯಾಂಕಿನಲ್ಲಿ ಒಟ್ಟು ೨,೩೭೬ ಸದಸ್ಯರಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನಿಡಿದರು.

ಪಾಲುಬಂಡವಾಳ ರೂ.೪೪.೦೬ ಲಕ್ಷ ಇದೆ. ಬ್ಯಾಂಕ್‌ನ ನಿಧಿಗಳು ರೂ.೩೨.೩೧ ಲಕ್ಷ, ಒಟ್ಟು ಠೇವಣಿ ರೂ.೧೦.೦೭ ಕೋಟಿ ಆಗಿದೆ. ಒಟ್ಟು ಸಾಲ ರೂ.೭.೨೭ ಕೋಟಿ ಬಾಕಿ ಆಗಿದ್ದು, ಪ್ರಸಕ್ತ ಸಾಲಿನಲ್ಲಿ ಶೇ.೯೮.೬೭ ರಷ್ಟು ಸಾಲ ವಸೂಲಾತಿಯಾಗಿದೆ. ಅಲ್ಲದೇ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿAದ ನೀಡಲಾಗುವ ಅತ್ಯತ್ತಮ ಪಟ್ಟಣ ಬ್ಯಾಂಕ್ ಪ್ರಶಸ್ತಿಯನ್ನು ನಮ್ಮ ಬ್ಯಾಂಕ್ ೩ ಬಾರಿ ಪಡೆದ ಹೆಮ್ಮೆಗೆ ಪಾತ್ರವಾಗಿದೆ ಎಂದರು.

ಪ್ರಸ್ತುತ ಬ್ಯಾಂಕ್‌ನಲ್ಲಿ ನಿರಖು ಠೇವಣಿ, ಮಾಸಿಕ ಠೇವಣಿ, ಉಳಿತಾಯ ಠೇವಣಿ, ಪಿಗ್ಮಿ ಠೇವಣಿ ವ್ಯವಸ್ಥೆಯಿದೆ. ಜತೆಗೆ ಬ್ಯಾಂಕಿನ ಅಭಿವೃದ್ಧಿಗಾಗಿ ನಮ್ಮಲ್ಲಿ ಜಾಮೀನು ಸಾಲ, ಆಭರಣ ಸಾಲ, ಸ್ವ-ಸಹಾಯ ಸಂಘ ಸಾಲ, ವಾಹನ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಬ್ಯಾಂಕಿನ ಅಭಿವೃದ್ಧಿಗಾಗಿ ಆರ್.ಬಿ.ಐ ನಿರ್ದೇಶನದಂತೆ ಕೋರ್ ಬ್ಯಾಂಕಿAಗ್ ಅಳವಡಿಸಿ ಗಣಕೀಕೃತಗೊಳಿಸಲಾಗಿದೆ. ಬ್ಯಾಂಕಿನಲ್ಲಿ ಒಟ್ಟು ೬೪ ಸ್ವ-ಸಹಾಯ ಗುಂಪುಗಳು ರಚಿಸಲಾಗಿದ್ದು, ರೂ.೩೧ ಲಕ್ಷ ಠೇವಣಿ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಪಿ.ಶೈಲಿ, ನಿರ್ದೇಶಕರಾದ ಸಿ.ಲೀಲಾ ಮೇದಪ್ಪ, ಎಂ.ಎA ಶ್ಯಾಮಲ ದಿನೇಶ್, ಆಶಾ ಚಿಣ್ಣಪ್ಪ, ಪಿ.ಪ್ರೇಮ ಕರುಂಬಯ್ಯ ಉಪಸ್ಥಿತರಿದ್ದರು.