ವೀರಾಜಪೇಟೆ, ಸೆ. ೧೩: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಟ್ಟಿಯಲ್ಲಿನ ಬಿಲ್ಲವ ಸಮಾಜದಲ್ಲಿ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಬಿಲ್ಲವ ಸೇವಾ ಸಮಾಜದ ತಾಲೂಕು ಅಧ್ಯಕ್ಷ ಬಿ.ಎಂ. ಗಣೇಶ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಎಸ್.ಎಸ್.ಎಲ್.ಸಿ ಹಾಗು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಈ ಬಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಾಕತ್ತೂರು ಪ್ರೌಢÀಶಾಲೆಯ ಬಿ.ಎಸ್. ವನಜಾ, ವೀರಾಜಪೇಟೆ ಕಾವೇರಿ ಶಾಲೆಯ ಬಿ.ಎಸ್ ಸುದೇಶ್, ಚೆನ್ನಯ್ಯನಕೋಟೆ ಸರಕಾರಿ ಪ್ರಾಥಮಿಕ ಶಾಲೆಯ ಬಿ.ಬಿ ಜಾಜಿ (ಕ್ರೀಡೆ), ಆಟೋ ಚಾಲಕಿ ಎಸ್.ಸಿ ಸುಜಾತ (ಸಮಾಜಸೇವೆ) ಇವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಪುರುಷೋತ್ತಮ್, ಕಾರ್ಯದರ್ಶಿ ಜನಾರ್ಧನ್, ಖಜಾಂಚಿ ಬಿ.ಎಂ ಸತೀಶ್, ವಿಗ್ರಹ ದಾನಿಗಳಾದ ನಾಗರಾಜು ಹಳ್ಳಿಗಟ್ಟು, ಗೌರವಾಧ್ಯಕ್ಷ ಬಿ.ಆರ್ ರಾಜಾ, ಹಿರಿಯರಾದ ಮುಕುಂದ, ಬಿ. ಆರ್ ಬೋಜಪ್ಪ ಮತ್ತಿತರರು ಉಪಸ್ಥಿತರಿದ್ದರು.