ಮಡಿಕೇರಿ, ಸೆ. ೧೩: ಕೊಡಗು ಜಿಲ್ಲಾ ಲೀಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೋಮ ವಾರಪೇಟೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹಯೋಗದೊಂದಿಗೆ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮ ಪಂಚಾಯಿತಿ ವತಿಯಿಂದ ಕೇಂದ್ರ ಸರ್ಕಾರದ ಆದೇಶದಂತೆ ಆಯಾ ಗ್ರಾಮದ ಬ್ಯಾಂಕ್ ಶಾಖೆ ಮುಖಾಂತರ ಪ್ರತಿ ವರ್ಷವೂ ನಡೆಸುವ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮವನ್ನು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ ಲಕ್ಷ್ಮೀಕಾಂತ್ ಜಿ.ಕೆ, ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆಯುವಂತೆ ಸಲಹೆ ನೀಡಿದರು.

ರಿ-ಕೆವೈಸಿ ಮಾಡಿಸುವಂತೆ ತಿಳಿಸಲಾಯಿತು. ಅಟಲ್ ಪಿಂಚಣಿ ರೂಪದಲ್ಲಿ ರೂ.೧,೦೦೦ ದಿಂದÀ ರೂ.೫,೦೦೦ ವರೆಗಿನ ಪಿಂಚಣಿ ಹಣ ಗಳಿಸಬೇಕಾದರೆ ೧೮ ರಿಂದ ೪೦ ವರ್ಷ ಒಳಗಿನವರು ಪಿಂಚಣಿ ಮಾಡಿಸುವಂತೆತ ತಿಳಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ವಿವೇಕ್ ಸಿಂಗ್ ಮಾರ್ಕರಂ ಪ್ರಧಾನಮಂತ್ರಿ ಭೀಮ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ವಾರ್ಷಿಕವಾಗಿ ರೂ.೪೩೬ ಪಾವತಿಸಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮೆಯನ್ನು ಮಾಡಿಸಿಕೊಂಡು ಯಾವುದೇ ರೀತಿಯಲ್ಲಿ ಮರಣ ಹೊಂದಿದರೆ ಅಂತವರ ನಾಮಿನಿಗೆ ರೂ.ಎರಡು ಲಕ್ಷ ದೊರಕುವ ಸೌಲಭ್ಯದ ಬಗ್ಗೆ ತಿಳಿಸಿದರು. ಆರ್ಥಿಕ ಸಮಾಲೋಚಕರಾದ ಶ್ಯಾಮಲ, ಸೈಬರ್ ಕ್ರೆöÊಂ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಡಿಕೇರಿ ಎಫ್.ಐ ವ್ಯವಸ್ಥಾಪಕರಾದ ಅನಿಲ್ ಟೆಕ್ಕಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತಾ ಸಿ.ಎ ಹಾಗೂ ಉಪಾಧ್ಯಕ್ಷರಾದ ನತೀಶ್ ಎಚ್.ಎಂ. ಹಾಜರಿದ್ದರು.