ಗೋಣಿಕೊಪ್ಪ ವರದಿ, ಸೆ. ೧೩: ಗೋಣಿಕೊಪ್ಪ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ರೂ. ೧.೪೫ ಕೋಟಿ ಲಾಭ ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಕುಪ್ಪಂಡ ಎಂ. ಚಿಟ್ಯಪ್ಪ ತಿಳಿಸಿದ್ದಾರೆ.
ರೂ. ೪೨೫.೨೩ ಕೋಟಿ ವ್ಯವಹಾರ ನಡೆಸಿ ಲಾಭ ಮಾಡಿಕೊಂಡಿದೆ. ಸಂಘದ ಸದಸ್ಯರಿಗೆ ಶೇ. ೨೫ ರಷ್ಟು ಡಿವಿಡೆಂಡ್ ನೀಡಲು ಕಾರ್ಯಕಾರಿ ಮಂಡಳಿ ಶಿಫಾರಸ್ಸು ಮಾಡಿದ್ದು, ಮಹಾಸಭೆ ಮಂಜೂರಾತಿ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಸಂಘ ೭೧ನೇ ಮಹಾಸಭೆ ನಡೆಸಿ, ಉನ್ನತಿಯಲ್ಲಿ ಮುಂದುವರಿದಿದೆ. ೨.೧೧ ಕೋಟಿ ಪಾಲು ಬಂಡವಾಳದೊAದಿಗೆ ೨,೧೯೩ ಎ ತರಗತಿ ಸದಸ್ಯರನ್ನು ಹೊಂದಿದೆ. ರೂ. ೮೮.೮೭ ಕೋಟಿ ಠೇವಣಿ ಸಂಗ್ರಹಿಸಿ ಸದಸ್ಯರುಗಳಿಗೆ ರೂ. ೬೭.೦೨ ಕೋಟಿ ಸಾಲ ವಿತರಣೆ ಮಾಡಿದೆ. ಶೇ. ೯೭ ರಷ್ಟು ಸಾಲ ಮರುಪಾವತಿ ಮೂಲಕ ಮುನ್ನಡೆಯುತ್ತಿದೆ. ವ್ಯಾಪಾರ ವಿಭಾಗದಲ್ಲಿ ೮.೯೩ ಲಕ್ಷ ಲಾಭ ಪಡೆದುಕೊಂಡಿದೆ. ಗೊಬ್ಬರ, ಹತ್ಯಾರು ಸಾಮಗ್ರಿ ಸಂಘದಿAದಲೇ ಖರೀದಿಸಲು ಮುಂದೆ ಬರಬೇಕು ಎಂದು ತಿಳಿಸಿದರು.
ಗೋದಾಮಿನಲ್ಲಿ ಕಾಫಿ, ಕರಿಮೆಣಸು ಸಂಗ್ರಹಿಸಲಾಗಿದೆ. ಠೇವಣಿ ಸಾಲ ನೀಡಲಾಗಿದೆ. ಜಾಮೀನು ಸಾಲ ೨ ಲಕ್ಷ, ಮನೆ ನಿರ್ಮಾಣಕ್ಕೆ ೩೦ ಲಕ್ಷ, ಸದಸ್ಯರ ತುರ್ತು ಸಂದರ್ಭದಲ್ಲಿ ಮದುವೆ, ಆಸ್ಪತ್ರೆ ಖರ್ಚು ಭರಿಸಲು ೫ ಲಕ್ಷದವರೆಗೆ ಸಾಲ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೆಸಿಸಿ ಫಸಲು ಸಾಲವನ್ನು ೫ ಲಕ್ಷದವರೆಗೆ ಶೂನ್ಯ ಬಡ್ಡಿಯಲ್ಲಿ ನೀಡಲಾಗುತ್ತಿದೆ. ಜಂಟಿ ಪಹಣಿ ಹೊಂದಿರುವ ೬೫ ಸದಸ್ಯರು ಸಾಲ ಮನ್ನಾ, ಬಡ್ಡಿ ಮನ್ನಾ ಯೋಜನೆಯಿಂದ ವಂಚಿತರಾಗಿರುವುದು ಹಿನ್ನಡೆಯಾಗಿದೆ. ರೂ. ೪.೬೯ ಕೋಟಿ ವೆಚ್ಚದಲ್ಲಿ ಸಂಘದ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದ್ದಾರೆ.
ಉಪಾಧ್ಯಕ್ಷ ಕಬ್ಬಚ್ಚೀರ ಎಂ. ಸುಬ್ರಮಣಿ, ನಿರ್ದೇಶಕರುಗಳಾದ ಜಮ್ಮಡ ಸಿ. ಮೋಹನ್, ಬೆಲ್ಲತಂಡ ಸಿ ಮಾದಯ್ಯ, ಚೆಪ್ಪುಡೀರ ಟಿ. ಗಣಪತಿ, ಕುಲ್ಲಚಂಡ ಪ್ರಮೋದ್ ಗಣಪತಿ, ಕಾಡ್ಯಮಾಡ ಪಿ. ದೇವಯ್ಯ, ಜಮ್ಮಡ ಬಿ. ಪ್ರಮೀಳ, ಜಮ್ಮಡ ಎ. ಸೌಮ್ಯ, ವೇದಪಂಡ ಬಿ. ಕಿರಣ್, ಪಿ.ವಿ. ಶೋಭಿತ್, ಹೆಚ್.ಎಸ್. ಗಣೇಶ್, ವೈ.ಜಿ. ಗಪ್ಪು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಕೆ. ಪ್ರತಾಪ್ ಇದ್ದರು.