ಸಿದ್ದಾಪುರ, ಸೆ. ೧೩: ಕರಡಿಗೋಡು ಗೆಳೆಯರ ಬಳಗ ವತಿಯಿಂದ ಮೊದಲ ವರ್ಷದ ಓಣಂ ಪುಷ್ಪ ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಬಗೆಯ ಮನರಂಜನಾ ಕ್ರೀಡಾಕೂಟ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಕೃಷ್ಣ ಗ್ರಾಮದಲ್ಲಿ ಹೆಚ್ಚು, ಹೆಚ್ಚು ಕ್ರೀಡಾ ಚಟುವಟಿಕೆಗಳು ಆಯೋಜನೆಗೊಳ್ಳುತ್ತಿದ್ದರೆ ಸ್ನೇಹ, ಸೌಹಾರ್ದತೆ, ಐಕ್ಯತೆ ಗಟ್ಟಿಗೊಳ್ಳುತ್ತದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯೆ ಧನಲಕ್ಷಿö್ಮ ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತಾಗಬೇಕೆAದರು.
ಉದ್ಯಮಿ ಕುಕ್ಕೂನೂರು ದೇವಿ ಪ್ರಕಾಶ್ ಮಾತನಾಡಿ ಗ್ರಾಮಸ್ಥರನ್ನು ಒಗ್ಗೂಡಿಸಿ ಹಬ್ಬ ಆಚರಿಸಲು ಮುಂದಾದ ಯುವಕರ ಕಾರ್ಯ ಶ್ಲಾಘನೀಯ ಎಂದರು.
ಇದೇ ಸಂದರ್ಭ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಪುಟಾಣಿ ಮಕ್ಕಳಿಗೆ ಬಲೂನ್ ಒಡೆಯುವುದು, ಮಿಠಾಯಿ ಎಕ್ಕುವುದು, ಮಹಿಳೆಯರಿಗೆ, ಪುರುಷರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆಯುವುದು, ಸಂಗೀತ ಕುರ್ಚಿ, ಮಡಿಕೆ ಒಡೆಯುವುದು ಸೇರಿದಂತೆ ಗ್ರಾಮೀಣ ಕ್ರೀಡಾಕೂಟಗಳು ನಡೆದವು. ಕರಡಿಗೋಡು ಗೆಳೆಯರ ಬಳಗದ ಅಧ್ಯಕ್ಷ ಸುದೀಶ್, ಕಾರ್ಯದರ್ಶಿ ವಿಷ್ಣು ಚಾಮಿ, ಸದಸ್ಯರು, ಮುಂತಾದವರು ಹಾಜರಿದ್ದರು.
ಸಾಮೂಹಿಕ ಓಣಂ ಸದ್ಯದಲ್ಲಿ ಗ್ರಾಮಸ್ಥರು ಪಾಲ್ಗೊಂಡು ಹಬ್ಬದ ಊಟ ಸವಿದರು. ಕ್ರೀಡಾಕೂಟ ವಿಜೇತರಿಗೆ ಹಾಗೂ ಪುಷ್ಪ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಿತು.