ಮಡಿಕೇರಿ, ಸೆ. ೧೨ : ಜೆ ಸಿ ಐ ಬಾಳೆಹೊನ್ನೂರು ಕ್ಲಾಸಿಕ್ ಹಾಗೂ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ
ರೂ. ೩೦,೦೦೦ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿ ಕೊಂಡಿದೆ.
ಸ್ಪರ್ಧೆಯ ತೀರ್ಪುಗಾರರಾಗಿ ಡ್ಯಾನ್ಸ್ ಮಾಸ್ಟರ್ ಅವಿನಾಶ್ ಹಾಗೂ ಪ್ರಶಾಂತ್ ಕಾಯ ðನಿರ್ವಹಿಸಿದರು. ಸಕಲೇಶಪುರದಲ್ಲಿ ರಿಧಮ್ ಕಿಪೇಜ್ ಡಾನ್ಸ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತಂಡದ ಕೊರಿಯೋಗ್ರಾಫರ್ ಮಹೇಶ್ ಹಾಗು ಕಿರಣ್ ನೇತೃತ್ವದಲ್ಲಿ ವರುಣವಿ, ಪ್ರಜ್ಞಾ, ಯಶ್ವಿತ, ದೀಪಿಕ್ಷಾ, ಹುಂಶಿಕ, ವರ್ಷಿಣಿ ಶೆಟ್ಟಿ, ತ್ರಿಶ, ಸೋನಾಕ್ಷಿ, ತನಿಶ್, ವಿವೇಕ್, ಅಕ್ಷರ, ಒಶಿನ್ ಮುತ್ತಮ್ಮ, ಮೊನಾಲಿ, ಯಶಸ್, ತುಷಾರ್, ಹಿಮಾನಿ, ಅಭಿ, ಸಿಂಚನ, ಪ್ರಾಣಮ್ಯ, ಶಶಾಂಕ್ ಪೊನ್ನಪ್ಪ, ಈಶಾಂತ್, ಕನ್ನಿಕೆ, ಕಿಶನ್, ವಿವೇಕ್, ಸುಧಾರ್ಮ, ಗೌತಮ್, ಚೋಟು ಭಾಗವಹಿಸಿದ್ದರು.