ನಾಪೋಕ್ಲು, ಸೆ. ೧೨: ನಾಪೋಕ್ಲು ಪ್ರಾಥಮಿಕ ಕೃಪಿ ಪತ್ತಿನ ಸಹಕಾರ ಸಂಘ ೨೦೨೪-೨೫ ನೇ ಸಾಲಿನಲ್ಲಿ ರೂ.೫೧,೨೪,೩೭೬ ನಿವ್ವಳ ಲಾಭಗಳಿಸಿ ಎ ಶ್ರೇಣಿಯಲ್ಲಿದೆ ಎಂದು ಸಂಘದ ಅಧ್ಯಕ್ಷ ಕೇಟೋಳಿರ ಎಸ್. ಹರೀಶ್ ಪೂವಯ್ಯ ತಿಳಿಸಿದರು.
ಸಂಘದ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಘದಲ್ಲಿ ಒಟ್ಟು ೨,೫೪೯ ಸದಸ್ಯರಿದ್ದಾರೆ. ಸಂಘದಲ್ಲಿ ಪಾಲು ಬಂಡವಾಳ ರೂ.೧,೪೪,೦೬,೨೮೦ ಒಟ್ಟು ನಿಧಿ ರೂ.೨,೪೬,೧೯,೫೪೩ ಇದೆ ಎಂದ ಅವರು ಸದಸ್ಯರು ರೂ.೪೭,೧೪,೦೯,೮೯೬ ಠೇವಣಿ ಇರಿಸಿದ್ದು ಸದಸ್ಯರಿಗೆ ರೂ.೪೭,೦೩,೦೯,೨೨೫ ಸಾಲ ರೂಪದಲ್ಲಿ ನೀಡಲಾಗಿದೆ. ದುಡಿಯುವ ಬಂಡವಾಳ ರೂ. ೬೩,೧೯,೦೨,೫೬೯ ಇದೆ ಎಂದರು. ಸದಸ್ಯರಿಗೆ ಈ ವರ್ಷ ೧೫% ಡಿವಿಡೆಂಡ್ ನೀಡಲಾಗುವುದು. ಹಿರಿಯ ನಾಗರಿಕರಿಗೆ ಶೇ.೮ ಹಾಗೂ ಮಾಜಿ ಸೈನಿಕರಿಗೆ ಶೇ.೮.೧ ಬಡ್ಡಿ ನೀಡಲಾಗುವುದು ಎಂದು ತಿಳಿಸಿದರು. ಸದಸ್ಯರ ಅನುಕೂಲಕ್ಕಾಗಿ ಆಧುನಿಕ ಅಕ್ಕಿ ಗಿರಣಿ, ಟ್ರಾಕ್ಟರ್, ರಾಸಾಯನಿಕ ಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ.
ಅದರೊಂದಿಗೆ ಇ-ಸ್ಟಾಂಪ್ ಸೇರಿದಂತೆ ಇನ್ನಿತರ ಸೌಲಭ್ಯವನ್ನೂ ಒದಗಿಸಲಾಗಿದೆ ಎಂದರು. ಸಂಘದ ವಾರ್ಷಿಕ ಮಹಾಸಭೆಯು ತಾ.೧೪ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ನಾಪೋಕ್ಲು ಕೊಡವ ಸಮಾಜದಲ್ಲಿ ಸಂಘದ ಅಧ್ಯಕ್ಷ ಕೇಟೋಳಿರ ಎಸ್.ಹರೀಶ್ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಕುಂಡ್ಯೋಳAಡ ಎಂ.ಕವಿತಾ, ಚೀಯಕಪೂವಂಡ ಎನ್. ದೇವಯ್ಯ, ಚೋಕಿರ ಬಿ. ಪೂವಪ್ಪ, ಕೇಲೇಟಿರ ಬಿ. ಮುತ್ತಮ್ಮ, ಶಿವಚಾಳಿಯಂಡ ಎಂ. ಕಾರ್ಯಪ್ಪ, ಅರೆಯಡ ಎಂ. ಪೆಮ್ಮಯ್ಯ, ಹೆಚ್.ಎ. ಬೊಳ್ಳು, ಕುಂಡ್ಯೋಳAಡ ಸಿ ಪೂವಯ್ಯ, ಚೋಕಿರ ಎಸ್ ಚಿಣ್ಣಪ್ಪ , ಅಪ್ಪಚ್ಚಿರ ರೀನಾ ನಾಣಯ್ಯ, ಯನ್.ಕೆ ಪುಷ್ಪ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಚಾಳಿಯಂಡ ಎ ಪೂಣಚ್ಚ ಉಪಸ್ಥಿತರಿದ್ದರು.