ಕೂಡಿಗೆ, ಸೆ. ೧೨: ತೊರೆನೂರು ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಟಿ. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಮಾತನಾಡಿ, ಒಕ್ಕೂಟದ ವತಿಯಿಂದ ಹೈನುಗಾರಿಕೆ ಸಂಬAಧಿಸಿದAತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅದರ ಸಮರ್ಪಕವಾದ ಬಳಕೆಯನ್ನು ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಮಾಡಿಕೊಳ್ಳಬೇಕು.
ಅಲ್ಲದೆ ಹಸುಗಳಿಗೆ ಒಕ್ಕೂಟದ ನಿಯಮಾನುಸಾರ ಚಿಕಿತ್ಸೆ ಮತ್ತು ಗರ್ಭಧಾರಣೆಗೆ ಸಂಬAಧಿಸಿದAತೆ ಎಲ್ಲಾ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಆದ್ಯತೆಗೆ ಅನುಗುಣವಾಗಿ ನೂತನ ಕಟ್ಟಡಕ್ಕೆ ಒಕ್ಕೂಟದ ವತಿಯಿಂದ ಅನುದಾನವನ್ನು ನೀಡಲಾಗುವುದು ಎಂದರು.
ಒಕ್ಕೂಟದ ವಿಸ್ತಾರಣಾಧಿಕಾರಿ ಬಿ.ಬಿ. ವೀಣಾ, ಪಶು ಸಂರಕ್ಷಣೆಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಟಿ.ಡಿ. ಉದಯಕುಮಾರ್, ನಿರ್ದೇಶರಾದ ಎ.ಎನ್ ಅಣ್ಣಯ್ಯ, ಟಿ.ಎನ್ ಗಿರೀಶ್, ಟಿ.ಎಂ ಚಂದ್ರು, ಟಿ.ಎಲ್ ಪುಟ್ಟಸ್ವಾಮಿ, ಹನುಮಪ್ಪ, ಕುಮಾರಿ, ನಾಗಮ್ಮ, ಕಾರ್ಯದರ್ಶಿ ಟಿ.ಎಸ್, ಶಿವರಾಜ್ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.