ಕುಶಾಲನಗರ, ಸೆ. ೧೨: ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘ ಈ ಸಾಲಿನಲ್ಲಿ ರೂ.೨೪,೫೯,೦೦೦ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಎಂ.ಕೆ ದಿನೇಶ್ ತಿಳಿಸಿದರು.

ಸಂಘದ ಕಚೇರಿ ಸಭಾಂಗಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಸಂಘವು ಪ್ರಾರಂಭಗೊAಡು ಹತ್ತು ವರ್ಷ ಸಂದಿದ್ದು, ರೂಪಾಯಿ ನಾಲ್ಕು ಕೋಟಿ ಒಂದು ಲಕ್ಷದ ಐವತ್ತಾರು ಸಾವಿರ ದುಡಿಯುವ ಬಂಡವಾಳ ಹೊಂದಿದೆ. ಸಂಘವು ಸದಸ್ಯರ ಬೇಡಿಕೆಗೆ ತಕ್ಕಂತೆ ಜಾಮೀನು ಸಾಲ, ಆಭರಣ ಸಾಲ, ಪಿಗ್ಮಿ ಸಾಲ ಸೇರಿದಂತೆ ಇತರ ಸಾಲಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ನೀಡುತ್ತಿದೆ. ಸದಸ್ಯರಿಗೆ ಕೈಗೆಟಕುವ ಬಡ್ಡಿ ದರದಲ್ಲಿ ಸಾಲ ವಿತರಣೆ ನಡೆಯುತ್ತಿದೆ ಎಂದು ತಿಳಿಸಿದರು. ದಾನಿಗಳು ನೀಡಿದ ಉಚಿತ ನಿವೇಶನದಲ್ಲಿ ಸುಸಜ್ಜಿತವಾದ ಎರಡು ಅಂತಸ್ತಿನ ಕಟ್ಟಡವನ್ನು ಅಂದಾಜು ರೂ.೬೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಂಘದ ಮಹಾಸಭೆ ತಾ.೧೩ ರಂದು (ಇಂದು) ಕುಶಾಲನಗರ ಎ.ಪಿ.ಸಿ.ಎಂ.ಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ ಎಂದು ಅವರು ತಿಳಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಜಿ.ಬಿ ಜಗದೀಶ್, ನಿರ್ದೇಶಕರಾದ ಕೆ.ಪಿ ರಾಜು, ಎಂ.ಡಿ ರವಿಕುಮಾರ್, ಕೆ.ಆರ್ ಕಸ್ತೂರಿ, ರೇಖಾ, ಎಂ.ಡಿ ರಮೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಕೆ ಸುನಿತಾ ಇದ್ದರು.