ಮಡಿಕೇರಿ, ಸೆ. ೧೨: ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಮರುಪರಿಷ್ಕರಣೆಯ ಉದ್ದೇಶದಿಂದ ಸರಕಾರ ಸಮೀಕ್ಷೆ ಕಾರ್ಯ ಕೈಗೊಂಡಿದ್ದು, ತಾ. ೨೨ ರಿಂದ ಈ ಕಾರ್ಯ ಆರಂಭಗೊಳ್ಳಲಿದೆ. ಈ ಸಂಬAಧ ಕೊಡಗು ಜಿಲ್ಲೆಯಲ್ಲಿಯೂ ಅಗತ್ಯ ತಯಾರಿಗಳನ್ನು ಜಿಲ್ಲಾಡಳಿತದಿಂದ ಮಾಡಿಕೊಳ್ಳಲಾಗುತ್ತಿದೆ.

ಈಗಾಗಲೇ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಕಾರ್ಯಚಟುವಟಿಕೆಯ ಕುರಿತು ಅಧಿಕಾರಿಗಳಿಗೆ ತಿಳಿ ಹೇಳಲಾಗಿದೆ. ೨೦೧೧ರ ಸಮೀಕ್ಷೆ ನಡೆದ ಬಳಿಕ ಇದುವರೆಗೂ ಈ ಪ್ರಕ್ರಿಯೆ ನಡೆದಿರಲಿಲ್ಲ. ಈ ಹಿನ್ನೆಲೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಗೆ ಸರಕಾರ ಮುಂದಾಗಿದೆ.

ಏನಿದರ ಉದ್ದೇಶ?

ರಾಜ್ಯದ ಎಲ್ಲಾ ನಾಗರಿಕರ, ವರ್ಗ, ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿ ಕುರಿತು ಸಮೀಕ್ಷೆ ನಡೆಸಿ ಸಮಗ್ರ ಅಂಕಿ-ಅAಶಗಳನ್ನು ಸಂಗ್ರಹಿಸಿ ದತ್ತಾಂಶ ತಯಾರಿಸಿ ಸರಕಾರಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವುದು ಈ ಗಣತಿಯ ಉದ್ದೇಶವಾಗಿದೆ.

ಸುಮಾರು ೬೫ ವಿಧದ ಪ್ರಶ್ನೆಗಳನ್ನು ಗಣತಿದಾರರು ಜನರನ್ನು ಕೇಳಲಿದ್ದು, ಆದಾಯ, ಜಾತಿ, ವೃತ್ತಿ ಹೀಗೆ ಅಗತ್ಯ ಮಾಹಿತಿಯನ್ನು ಕೇಳಿ ಡಿಜಿಟಲ್ ಮೂಲಕ ದಾಖಲೀಕರಣಗೊಳಿಸಲಾಗುವುದು ಈ ಕಾರ್ಯಕ್ರಮದ ಧ್ಯೇಯವಾಗಿದೆ.

ಆರ್.ಆರ್.ನಂಬರ್ ಅಡಿ ಮನೆ ಗುರುತು

ಪ್ರತಿ ಮನೆಯ ವಿದ್ಯುತ್ ಬಿಲ್‌ನ ಆರ್.ಆರ್. ಸಂಖ್ಯೆಯ ಅಡಿ ಈಗಾಗಲೇ ಮನೆಗಳ ಗುರುತು ಮಾಡುವ ಕಾರ್ಯವನ್ನು ನಡೆಸಲಾಗಿದೆ. ಯಾವುದೇ ಕುಟುಂಬವು ಸಮೀಕ್ಷೆಯಿಂದ ಹೊರಗುಳಿಯಬಾರದೆಂಬ ದೃಷ್ಟಿಯಲ್ಲಿ ಎಲ್ಲಾ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕ ಇರುವುದರಿಂದ ವಾಸದ ಮನೆಗಳ ವಿದ್ಯುತ್ ಬಿಲ್ಲಿನ ಆರ್‌ಆರ್ ಸಂಖ್ಯೆ ಆಧಾರದ ಮೇಲೆ ಮನೆಗಳನ್ನು ಗುರುತಿಸಿ ಅಲ್ಲಿಗೆ ಜಿಯೋ ಟ್ಯಾಗ್ ಸ್ಟಿಕರಿಂಗ್ ಮಾಡಿ ಅಲ್ಲಿರುವ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮಾಡಲು ಯೋಚಿಸಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೂ ಸಹ ಅಧಿಕಾರಿಗಳ ಮುಖಾಂತರ ಜಿಯೊ ಮ್ಯಾಪಿಂಗ್ ಮಾಡಲಾಗುತ್ತಿದೆ. ೭ನೇ ಪುಟ (ಮೊದಲ ಪುಟದಿಂದ) ಇದರಿಂದ ಸಮೀಕ್ಷೆ ವ್ಯಾಪ್ತಿಯಿಂದ ಯಾರೂ ಹೊರಗುಳಿಯುವುದಿಲ್ಲ ಎಂದು ಅಧಿಕಾರಿಗಳ ಅಭಿಪ್ರಾಯವಾಗಿದ್ದು, ಈ ನಿಟ್ಟಿನಲ್ಲಿ ಇಂಧನ ಇಲಾಖೆಯ ಸಹಕಾರವನ್ನು ಪಡೆಯಲಾಗುತ್ತಿದೆ.

ಅ. ೭ ರ ತನಕ ಸಮೀಕ್ಷೆ

ಸೆ. ೨೨ ರಿಂದ ಅ. ೭ ರ ತನಕ ರಾಜ್ಯವ್ಯಾಪಿ ಈ ಸಮೀಕ್ಷೆ ಕಾರ್ಯ ನಡೆಯಲಿದೆ. ಇದಕ್ಕಾಗಿ ವಿಶೇಷ ಆ್ಯಪ್ ಸಿದ್ಧವಾಗಿದ್ದು, ಇದನ್ನು ಬಳಸಿಕೊಂಡು ದಾಖಲೀಕರಣ ಮಾಡಲಾಗುತ್ತದೆ. ಸುಮಾರು ೬೫ ಪ್ರಶ್ನಾವಳಿಗಳು ಇದ್ದು, ಕುಟುಂಬಗಳಿAದ ಮಾಹಿತಿ ಪಡೆದು ಆ್ಯಪ್ ಮೂಲಕವೇ ಸಮೀಕ್ಷೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿನ ಒಟ್ಟು ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ ಪ್ರತೀ ಸಮೀಕ್ಷೆದಾರರು ಎಲ್ಲಾ ಮನೆಗಳಿಗೆ ಖುದ್ದು ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ.

ಸಿಬ್ಬಂದಿಗಳ ನಿಯೋಜನೆ

ಸಮೀಕ್ಷೆ ಕಾರ್ಯಕ್ಕಾಗಿ ೧೨೦೦ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಅವರುಗಳಿಗೆ ತರಬೇತಿ ನೀಡುವ ಕಾರ್ಯವೂ ನಡೆದಿದೆ.

ಸಮೀಕ್ಷೆ ಕಾರ್ಯ ಸುಗಮ ಹಾಗೂ ವ್ಯವಸ್ಥಿತವಾಗಿ ನಡೆಯುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಯನ್ನು ಅಧ್ಯಕ್ಷರನ್ನಾಗಿ ಮಾಡಿ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಅದೇ ರೀತಿ ಉಪವಿಭಾಗಾಧಿಕಾರಿಯನ್ನು ತಾಲೂಕು ಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಹೆಚ್ಚಿನ ಪ್ರಮಾಣದ ಶಿಕ್ಷಕರು ಇದಕ್ಕಾಗಿ ಶ್ರಮಿಸಲಿದ್ದಾರೆ. ಇವರೊಂದಿಗೆ ಇತರ ಇಲಾಖೆ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸರ್ಕಾರದ ಆದೇಶದಂತೆ ಸಮೀಕ್ಷೆಯ ಮೇಲ್ವಿಚಾರಣೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರು ಮತ್ತು ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.