ಮಡಿಕೇರಿ, ಸೆ. ೧೨ : ಯಶೋಮಾರ್ಗ ಸೇವಾ ಫೌಂಡೇಶನ್ ಮತ್ತು ಕನ್ನಡ ಸ್ವಯಂ ಸೇವಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನೀಡಲಾಗುವ ೨೦೨೩-೨೪ನೇ ಸಾಲಿನ ಕೆ.ಪಿ. ಪೂರ್ಣಚಂದ್ರ ತೇಜಸ್ವಿ (ಪೂಚಂತೆ) ಸಾಹಿತ್ಯ ಪ್ರಶಸ್ತಿಗೆ ಕೊಡಗಿನ ಲೇಖಕಿ ಉಳುವಂಗಡ ಕಾವೇರಿ ಉದಯ ಅವರು ಆಯ್ಕೆಯಾಗಿದ್ದಾರೆ. ಇವರು ಬರೆದಿರುವ ಪವಿತ್ರ ಪ್ರೀತಿ ಪ್ರಾಪ್ತಿ ಕಾದಂಬರಿಯನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಹಲವು ಪ್ರಾಕಾರಗಳ ೫೦ಕ್ಕೂ ಹೆಚ್ಚು ಪುಸ್ತಕಗಳು ಸ್ಪರ್ಧೆಯಲ್ಲಿದ್ದು ಈ ಪೈಕಿ ಐವರು ಲೇಖಕರ ಕೃತಿಯನ್ನು ಸಮಿತಿ ಆಯ್ಕೆ ಮಾಡಿದ್ದು ಇವರಲ್ಲಿ ಟಿ.ಶೆಟ್ಟಿಗೇರಿಯವರಾದ ಕಾವೇರಿ ಉದಯ ಅವರು ಒಬ್ಬರಾಗಿದ್ದಾರೆ.