ಮೂರ್ನಾಡು, ಸೆ. ೫: ಮೂರ್ನಾಡಿನ ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳಿAದ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಅದ್ದೂರಿಯಾಗಿ ನೆರವೇರಿತು.

೭ ದಿನಗಳವರೆಗೆ ಪೂಜಾ ಕಾರ್ಯಗಳು ನಡೆದು ಮಂಗಳವಾರ ರಾತ್ರಿ ಬಲಮುರಿಕಾವೇರಿ ನದಿಯಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಮೂರ್ನಾಡಿನ ವೆಂಕಟೇಶ್ವರ ಕಾಲೋನಿಯ ವಿನಾಯಕ ಯುವಕ ಮಂಡಳಿ, ಗಾಂಧಿನಗರದ ಶ್ರೀರಾಮ ಮಂದಿರ ಸೇವಾ ಸಮಿತಿ, ವಿಘ್ನೇಶ್ವರ ಸೇವಾ ಸಮಿತಿ, ಗಜೇಂದ್ರ ಯುವ ಶಕ್ತಿ ಸಂಘ, ಅಯ್ಯಪ್ಪ ಗೆಳೆಯರ ಬಳಗ, ಕೊಡಂಬೂರಿನ ವಿಘ್ನೇಶ್ವರ ಗೆಳೆಯರ ಬಳಗದ ಮೂರ್ತಿಗಳ ಮೆರವಣಿಗೆ ಮಂಟಪದಲ್ಲಿ ಸಾಗಿತು. ಪ್ರತಿ ಮಂಟಪವೂ ಆಕರ್ಷಕವಾಗಿ ಮೂಡಿಬಂತು. ಡಿಜೆ ಅಬ್ಬರ ಸಂಭ್ರಮವನ್ನು ದುಪ್ಪಟ್ಟುಗೊಳಿಸಿತು.

ವಿಶೇಷತೆ

ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ ಮೂರ್ನಾಡು ಪಟ್ಟಣದ ಟಿ ಜಂಕ್ಷನ್‌ನಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಯನ್ನು ಸಂಘದ ಸದಸ್ಯ ಮದನ್ ತಯಾರು ಮಾಡಿ ಗಮನ ಸೆಳೆದರು. ತನ್ನ ಮನೆಯಲ್ಲಿಯೆ ಒಂದು ತಿಂಗಳ ಹಿಂದೆಯ ಮೂರ್ತಿ ಮಾಡಲು ಯೋಗ್ಯವಾದ ಮಣ್ಣನ್ನು ಮಂಗಳೂರಿನಿAದ ತರಿಸಿ, ಪರಿಸರ ಸ್ನೇಹಿ ಗಣಪತಿಯನ್ನು ತಯಾರು ಮಾಡಿರುವುದು ಮೂರ್ನಾಡಿನ ಸುತ್ತಮುತ್ತಲಿನ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಯಿತು. - ಟಿ.ಸಿ. ನಾಗರಾಜ್