ಕುಶಾಲನಗರ, ಸೆ. ೫: ಪಟ್ಟಣದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟಿçÃಸ್ ವತಿಯಿಂದ ಇದೇ ಪ್ರಥಮ ಬಾರಿಗೆ ತಾ.೬ ರಂದು (ಇಂದು) ಕುಶಾಲನಗರದ ಎಸ್‌ಎಲ್‌ಎನ್ ಟೈಮ್ ಸ್ಕೆ÷್ವÃರ್ ಆವರಣದಲ್ಲಿ ಬೃಹತ್ ಗ್ರಾಹಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಎಸ್.ನಾಗೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆಯುತ್ತಿರುವ ಬೃಹತ್ ಮೇಳದಲ್ಲಿ ವಿವಿಧ ಕಾರು ಹಾಗೂ ಬೈಕ್ ಕಂಪನಿಗಳು ಭಾಗವಹಿಲಿವೆ.

ಜೊತೆಗೆ ಹೋಂ ಅಪ್ಲೆöÊಯನ್ಸ್ ಸೇರಿದಂತೆ ಸುಮಾರು ೭೦ಕ್ಕೂ ಅಧಿಕ ವಿವಿಧ ಕಂಪೆನಿಗಳ ಸ್ಟಾಲ್ ಗಳು ಇರಲಿವೆ.

ಈ ಒಂದು ದಿನ ಮೇಳ ಕುಶಾಲನಗರ ಮಾರುಕಟ್ಟೆಗೆ ಶಕ್ತಿ ಪ್ರದರ್ಶನವಾಗಲಿದೆ. ಜೊತೆಗೆ ಇದು ಯಶಸ್ವಿಯಾದರೆ ಕುಶಾಲನಗರದ ಆರ್ಥಿಕ ಶಕ್ತಿ ವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಂದು ಬೆಳಿಗ್ಗೆ ೧೦ ಗಂಟೆಗೆ ಅದ್ವೆöÊತ್ ಹುಂಡೈ ಕಂಪನಿಯ ವ್ಯಾಪಾರ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಎಲ್.ಎನ್.ಅಜಯ್ ಸಿಂಗ್ ಮೇಳವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಶಾಸಕ ಎ.ಎಸ್.ಪೊನ್ನಣ್ಣ, ಶಾಸಕ ಡಾ.ಮಂತರ್ ಗೌಡ, ಎಸ್.ಎಲ್.ಎನ್.ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥನ್, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು, ಮಡಿಕೇರಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕುಶಾಲನಗರ ವರ್ತಕರು ಮಧ್ಯಾಹ್ನ ಅರ್ಧ ದಿನ ಅಂಗಡಿ ಮುಂಗಟ್ಟು ಬಂದ್ ಮಾಡಿ ಮೇಳದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಜಿಲ್ಲೆಯ ವಿವಿಧ ಬ್ಯಾಂಕ್‌ಗಳು ಭಾಗವಹಿಸಲಿವೆ. ಜೊತೆಗೆ ಮೈಸೂರು ನಾರಾಯಣ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಕೂಡ ನಡೆಯಲಿದೆ.

ಗೋಷ್ಠಿಯಲ್ಲಿ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಚಿ ಎನ್.ವಿ.ಬಾಬು, ಉಪಾಧ್ಯಕ್ಷ ಎಂ.ಡಿ.ರAಗಸ್ವಾಮಿ,

ನಿರ್ದೇಶಕರಾದ ಪೊನ್ನಚ್ಚನ ಮೋಹನ್, ಎಂ.ಕೆ.ದಿನೇಶ್, ಅಬ್ದುಲ್ ರಶೀದ್ ಭಾಗವಹಿಸಿದ್ದರು.