ಮಡಿಕೇರಿ: ಕತ್ತಲೆಕಾಡು ಗ್ರಾಮದ ಶ್ರೀ ವಿನಾಯಕ ಸೇವಾ ಟ್ರಸ್ಟ್ ವತಿಯಿಂದ ೧೯ನೇ ವರ್ಷದ ಗೌರಿ ಗಣೇಶೋತ್ಸವ ಆಚರಣೆ ಗಮನ ಸೆಳೆಯಿತು. ಮೂರು ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಆ.೨೭ರಂದು ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಿದವು. ಅದೇ ದಿನ ಸಂಜೆ ಸಂಗೀತ ರಸಮಂಜರಿ ಹಮ್ಮಿಕೊಳ್ಳಲಾಗಿತ್ತು. ಸೋಮವಾರಪೇಟೆಯ ವಿಶ್ವರೂಪ ವಾದ್ಯಗೋಷ್ಠಿ ಕಲಾತಂಡದ ಪುರುಷೋತ್ತಮ್, ಕವಿತಾ, ಸುಭಾಷ್, ಜನಾರ್ದನ್ ಭಕ್ತಿಗೀತೆ, ಜಾನಪದ ಗೀತೆಗಳನ್ನು ಹಾಡಿದರು. ೨೮ರಂದು ಸಂಜೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರುಗಿತು. ಬಳಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ೨೯ರಂದು ಮಧ್ಯಾಹ್ನ ಮಹಾಪೂಜೆ, ಅನ್ನದಾನ ನಡೆಯಿತು. ವಾರ್ಷಿಕ ಹುಂಡಿ ಹಣ ಸಂಗ್ರಹದಲ್ಲಿ ವಿಜೇತರಾದ ಉದಯ್ ಜೇನುಕೊಲ್ಲಿ, ಬ್ರಿಜೇಶ್ ರೈ, ಲೋಕೇಶ್ ರೈ, ಪುಷ್ಪ ಜನಾರ್ದನ್ ಅವರಿಗೆ ಬಹುಮಾನ ವಿತರಿಸಲಾಯಿತು.
ಬಳಿಕ ವಿನಾಯಕನ ಮೂರ್ತಿಯ ವೈಭವೋಪೇತ ಮೆರವಣಿಗೆ ಗ್ರಾಮದ ಮುಖ್ಯಬೀದಿಯಲ್ಲಿ ಸಾಗಿತು. ಮಳೆಯನ್ನೂ ಲೆಕ್ಕಿಸದೆ ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಾಂಪ್ರದಾಯಿಕ ವಾದ್ಯಗೋಷ್ಠಿಯೊಂದಿಗೆ ಸಾಗಿದ ಮೆರವಣಿಗೆಯಲ್ಲಿ ವಿನಾಯಕ ಸೇವಾ ಸಮಿತಿಯ ವಿದ್ಯಾರ್ಥಿ ಘಟಕದ ಸದಸ್ಯರು ಕುಣಿತ ಭಜನೆಯ ಮೂಲಕ ಗಮನ ಸೆಳೆದರು. ಮಂಗಳೂರಿನ ಬೊಂಬೆ ಕುಣಿತ ಕಲಾವಿದರ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.
ಸ್ಪರ್ಧೆ ವಿಜೇತರ ವಿವರ
ಮಕ್ಕಳ ವಿಭಾಗದಲ್ಲಿ ಬಕೆಟ್‌ಗೆ ಬಾಲ್ ಹಾಕುವ ಸ್ಪರ್ಧೆ - ಅದ್ವಿಕ ರೈ(ಪ್ರ), ಪೂರ್ವಿಕ(ದ್ವಿ), ತೇಜಸ್ವಿ ರೈ(ತೃ). ಪಿರಮಿಡ್ ರಚನೆ: ಶ್ರಾವ್ಯ(ಪ್ರ), ಕೌಶಿಕ(ದ್ವಿ), ತರುಣ್(ತೃ). ಬಾಟಲ್‌ಗೆ ಚೆಂಡು ಎಸೆತ: ಪ್ರಜಿತ್(ಪ್ರ), ದಿಲನ್(ದ್ವಿ), ಕಿರಣ್(ತೃ). ಮಹಿಳೆಯರ ವಿಭಾಗದಲ್ಲಿ ಸಂಗೀತ ಕುರ್ಚಿ: ವನಿತ(ಪ್ರ), ಶೋಭಾ(ದ್ವಿ), ಕಲ್ಯಾಣಿ(ತೃ). ಬಾಟಲ್‌ಗೆ ಚೆಂಡು ಎಸೆತ: ಜಯಶ್ರೀ(ಪ್ರ), ಪೂರ್ಣಿಮ(ದ್ವಿ), ಕಲ್ಯಾಣಿ(ತೃ). ಪುರುಷರ ವಿಭಾಗದಲ್ಲಿ ಬಾಟಲ್‌ಗೆ ಎಸೆತ: ರಾಜೇಶ್ ಪೊನ್ನು(ಪ್ರ), ನವೀನ್ ಆಚಾರ್ಯ(ದ್ವಿ), ದಯಾನಂದ ಪೂಜಾರಿ(ತೃ) ಬಹುಮಾನ ಪಡೆದರು.
ವೀರಾಜಪೇಟೆ: ವೀರಾಜಪೇಟೆ ಹೊರವಲಯದ ಪೆರುಂಬಾಡಿಯ ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿಯ ಮೂವತ್ತನೇ ವರ್ಷದ ಗೌರಿ ಗಣೇಶ ಪ್ರತಿಷ್ಠಾಪನೆಯನ್ನು ಅದ್ದೂರಿಯಾಗಿ ನಡೆಸಲಾಯಿತು.
ಗೌರಿ ಗಣೇಶ ಪ್ರತಿಷ್ಠಾಪನೆ ಅಂಗವಾಗಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಆರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಮಾತನಾಡಿ, ಗಣೇಶ ಆಚರಣೆ ಮಾಡುತ್ತಿರುವ ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಗ್ರಾಮಕ್ಕೆ ಹಿಂದೂ ಸ್ಮಶಾನ ಜಾಗದಲ್ಲಿ ಶಾಶ್ವತ ಕಟ್ಟಡÀ ನಿರ್ಮಾಣ ಮಾಡಲು ಸದಸ್ಯರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುವುದಾಗಿ ಮಾಹಿತಿ ನೀಡಿದರು.
ಶ್ರೀ ವಿದ್ಯಾ ವಿನಾಯಕ ಸಮಿತಿಯು ಗಣಪತಿ ಪ್ರತಿಷ್ಠಾಪನೆ ಮಾಡಲು ಸ್ವಂತ ಕಟ್ಟಡವನ್ನು ನಿರ್ಮಿಸಲು ಹತ್ತು ಲಕ್ಷದ ಐವತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ಸ್ವಂತ ಜಾಗವನ್ನು ಖರೀದಿಸಿದ್ದು ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲು ಬಿ.ಎಂ.ಗಣೇಶ ಅವರು ಮೊದಲ ಕಂತಿನ ಐವತ್ತು ಸಾವಿರ ರೂಪಾಯಿಯನ್ನು ತಮ್ಮ ತಂದೆ ಬಿ.ಆರ್. ಮಂಜಪ್ಪ ಅವರ ಮುಖಾಂತರ ಸಮಿತಿ ಅಧ್ಯಕ್ಷರಿಗೆ ನೀಡಿದರು.
ಗ್ರಾಮದ ಮಾಜಿ ಸೈನಿಕರಾದ ರಮೇಶ್ ಟಿ.ಎಸ್., ಗಿರೀಶ್ ಎ.ಆರ್. ಮತ್ತು ಸಮಿತಿಯ ಮಾಜಿ ಅಧ್ಯಕ್ಷ ಬಿ.ಎಂ. ಗಣೇಶ್, ಗ್ರಾಮದ ಪ್ರತಿಭಾನ್ವಿತ ಹಾಗೂ ಹೆಚ್ಚು ಅಂಕ ಗಳಿಸಿದ ಪಿಯುಸಿ ಹಾಗೂ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯರು ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಸಮಿತಿ ಅಧ್ಯಕ್ಷ ಬಿ.ಎಂ. ಗಿರಿ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು. ನಂತರ ಸ್ಥಳೀಯ ಮಕ್ಕಳಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆದವು.
ಮುಳ್ಳೂರು: ಸಮೀಪದ ಕಣಿವೆಬಸವನಹಳ್ಳಿ ಗ್ರಾಮದಲ್ಲಿ ಗೌರಿ ಗಣೇಶ ಸೇವಾ ಸಮಿತಿ ವತಿಯಿಂದ ೧೫ನೇ ವರ್ಷದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿ ವಿಸರ್ಜನೋತ್ಸವ ಸಾಂಪ್ರದಾಯಕವಾಗಿ ನೆರವೇರಿತು. ಪ್ರತಿಷ್ಠಾಪಿಸಿದ ಗೌರಿ-ಗಣೇಶ ಮೂರ್ತಿಗೆ ಅರ್ಚಕ ಲಿಂಗರಾಜು ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು. ನಂತರ ಗೌರಿ-ಗಣೇಶ ಮೂರ್ತಿಯನ್ನು ಅಲಂಕರಿಸಿದ ವಾಹನದಲ್ಲಿ ಕೂರಿಸಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ತೆರಳಲಾಯಿತು.
ಗೌರಿ ಗಣೇಶ ವಿಸರ್ಜನೋತ್ಸವದ ಅಂಗವಾಗಿ ಗ್ರಾಮದ ಪ್ರತಿ ಮನೆ ಮುಂಭಾಗ ತಳಿರು ತೋರಣ ಮತ್ತು ರಂಗೋಲಿ ಹಾಕಿ ಸಾಂಪ್ರದಾಯಿಕವಾಗಿ ಮೆರವಣಿಗೆಯನ್ನು ಬರ ಮಾಡಿಕೊಂಡು ಗೌರಿ-ಗಣೇಶ ಮೂರ್ತಿಗೆ ಸ್ಥಳೀಯರು ಪೂಜೆ ಸಲ್ಲಿಸಿದರು. ಮಾಲಂಬಿ-ಗಣಗೂರು-ಕೂಡು ರಸ್ತೆವರೆಗೆ ವಿಸರ್ಜನೋತ್ಸವ ಮೆರವಣಿಗೆಯನ್ನು ನಡೆಸಲಾಯಿತು, ನಂತರ ಸಂಜೆ ಗ್ರಾಮದ ಕೆರೆಯಲ್ಲಿ ಗೌರಿ-ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಮೆರವಣಿಗೆ ಸಂದರ್ಭ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಮೆರವಣಿಗೆಯಲ್ಲಿ ಶಬ್ಧ ನಿಯಂತ್ರಣ ಸಾಮಾನ್ಯ ಧ್ವನಿವರ್ಧಕ ಬಳಕೆ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಪುರುಷರು, ಮಹಿಳೆಯರು, ಯುವಕ ಯುವತಿಯರು, ಮಕ್ಕಳು ಬೇದ ಭಾವ ಇಲ್ಲದೆ ಪಾಲ್ಗೊಂಡಿದ್ದರು.
ನೆಲ್ಲಿಹುದಿಕೇರಿ: ಒಂದೆಡೆ ಜಾತಿ-ಧರ್ಮಗಳ ನಡುವೆ ವೈಷಮ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜಕೀಯ ಲಾಭಕ್ಕೋಸ್ಕರ ಆಳುವವರು ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸಿ ಒಡೆದಾಳುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಏತನ್ಮಧ್ಯೆ ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯ ವಿವಿಧೆಡೆ ಗೌರಿ-ಗಣೇಶೋತ್ಸವದ ಅಂಗವಾಗಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತ್ತೇಕರೆ ಮತ್ತು ನೆಲ್ಲಿಹುದಿಕೇರಿಯ ಸ್ಕೂಲ್ ಪೈಸಾರಿಯಲ್ಲಿ ಸರ್ವ ಧರ್ಮೀಯ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸ್ನೇಹ ಸೌಹಾರ್ದತೆ, ಏಕತೆ ಸಾರುತ್ತಿರುವ ಯುವಕರ ತಂಡ ಎಲ್ಲರಿಗೂ ಮಾದರಿಯಾಗಿದೆ.
ಇಲ್ಲಿನ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ೩೨ನೇ ವರ್ಷದ ಆಚರಣೆ ಅಂಗವಾಗಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾನೆ ಮಾಡಲಾಗಿದೆ. ವಿಶೇಷವೆಂದರೆ ಹಲವು ವರ್ಷಗಳಿಂದ ಸರ್ವಧರ್ಮಿಯರೂ ಒಳಗೊಂಡAತೆ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮುಸ್ಲಿಂ ಸಮುದಾಯದವರೂ ಸೇರಿ ನಡೆಸುವ ಹಬ್ಬ ಆಚರಣೆ ಗಮನ ಸೆಳೆದಿದೆ. ವಿಸರ್ಜನೋತ್ಸವ ಮೆರವಣಿಗೆ ಇಲ್ಲಿಯ ಮಸೀದಿ ತಲುಪುತ್ತಿದ್ದಂತೆ ಭಕ್ತಾದಿಗಳಿಗೆ ಪಾನಕ, ಹಣ್ಣು, ಸಿಹಿ ತಿನಿಸು ನೀಡಿ ಸ್ವಾಗತಿಸುವುದು ವಾಡಿಕೆ.
ಪ್ರತಿ ವರ್ಷ ಗಣೇಶ ಉತ್ಸವ, ಈದ್ ಮಿಲಾದ್ ಆಚರಣೆಯು ಜೊತೆಗೇ ಬರುವುದರಿಂದ ಇಲ್ಲಿ ಎರಡೂ ಧರ್ಮದವರು ಜೊತೆಗೂಡಿ ಆಚರಿಸುತ್ತಾರೆ. ಈದ್ ಮಿಲಾದ್ ಸಂದರ್ಭದಲ್ಲಿ ಮಹಮದ್ ಪೈಗಂಬರರ ಶಾಂತಿ ಸಂದೇಶ ಸಾರುವ ಸೌಹಾರ್ದತೆಯ ಜಾಥಾ ಬರುವಾಗ ಶ್ರೀ ಸಿದ್ದಿವಿನಾಯಕ ಮಿತ್ರ ಮಂಡಳಿ ಸಾಂಪ್ರದಾಯಿಕ ಉಡುಗೆ ತೊಟ್ಟು ಮುಸ್ಲಿಮರಿಗೆ ಪಾನಕ ನೀಡಿ ಸ್ವಾಗತಿಸುತ್ತಾರೆ. ಈ ಸಂದರ್ಭದಲ್ಲಿ ಸರ್ವ ಧರ್ಮಿಯ ಪ್ರಾರ್ಥನೆ ಪಠಿಸಿ ತೆರಳುವುದು ಕೂಡ ವಾಡಿಕೆಯಾಗಿದೆ. ಹಬ್ಬದ ಸಂದರ್ಭಕ್ಕೆ ಮಾತ್ರ ಸೀಮಿತವಾಗದ ಈ ಆಚರಣೆ, ಉತ್ಸವದಲ್ಲಿ ಸಂಗ್ರಹವಾಗುವ ದೇಣಿಗೆಯನ್ನು ಶೈಕ್ಷಣಿಕ ಸಹಾಯ, ನಿರ್ಗತಿಕರಿಗೆ ಆರೋಗ್ಯ ವೆಚ್ಚ ಭರಿಸುವುದು, ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಸೇರಿದಂತೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ.
ನೆಲ್ಲಿಹುದಿಕೇರಿಯ ಸ್ಕೂಲ್ ಪೈಸಾರಿಯಲ್ಲಿ ಶ್ರೀಸಿದ್ದಿವಿನಾಯಕ ಮಿತ್ರ ಮಂಡಳಿ ತನ್ನ ೧೩ನೇ ವರ್ಷದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ಸರ್ವ ಧರ್ಮಿಯರನ್ನೂ ಒಳಗೊಂಡ ಸಮಿತಿಯ ಅಧ್ಯಕ್ಷ ಕ್ರೈಸ್ತ ಧರ್ಮದ ಕ್ಷೇವಿಯರ್ ಎಂಬುದು ಮತ್ತೊಂದು ವಿಶೇಷ. ಅಲ್ಲದೇ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಮುಸ್ಲಿಮ್ ವ್ಯಕ್ತಿಯ ಜಾಗದಲ್ಲಿ. ಸದಸ್ಯರಾದ ನೌಫಲ್, ಆಂಟೋನಿ ಸೇರಿದಂತೆ ಎಲ್ಲ ಧರ್ಮದವವರೂ ಸಂಘದಲ್ಲಿ ಇದ್ದು, ಸೌಹಾರ್ದತೆ, ಏಕತೆಯನ್ನು ಸಾರುತ್ತಾ ಬರುತ್ತಿದ್ದಾರೆ.
- ಇಸ್ಮಾಯಿಲ್ ಕಂಡಕೆರೆಭಾಗಮAಡಲ: ಭಾಗಮಂಡಲ ಶ್ರೀ ವಿನಾಯಕ ಟ್ರಸ್ಟ್ ವತಿಯಿಂದ ೩೨ನೇ ವರ್ಷದ ಗೌರಿ-ಗಣೇಶ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊAಡಿತು. ತಾ.೨೭ ರಂದು ಗಣೇಶನ ವಿಗ್ರಹ ಪ್ರತಿಷ್ಠಾಪನೆ ನಂತರ ಭಗಂಡೇಶ್ವರ ದೇವಾಲಯದಲ್ಲಿ ಟ್ರಸ್ಟ್ ವತಿಯಿಂದ ಮಹಾಗಣಪತಿ ವಿಶೇಷ ಸೇವೆ, ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು. ಸಂಜೆ ೬ ಗಂಟೆಗೆ ವಿನಾಯಕನಿಗೆ ರಂಗಪೂಜೆ ರಾತ್ರಿ, ೮ ಗಂಟೆಯ ನಂತರ ಭಜನೆ, ಮಂಗಳಾರತಿ ಕಾರ್ಯಕ್ರಮಗಳು ನಡೆದವು, ತಾ.೨೮ ರಂದು ನಿತ್ಯಪೂಜೆ, ಮಹಾಗಣಪತಿ ಹವನ, ಮಹಾಪೂಜೆಯ ನಂತರ ಅನ್ನಸಂತರ್ಪಣೆ, ರಾತ್ರಿ ೮ ಗಂಟೆಗೆ ಭಜನೆ ಮತ್ತು ಮಂಗಳಾರತಿ ಕಾರ್ಯಕ್ರಮಗಳು ನಡೆದವು.
ತಾ.೨೯ ರಂದು ನಿತ್ಯಪೂಜೆ ನಂತರ 'ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು' ಎಂಬ ಶೀರ್ಷಿಕೆಯಲ್ಲಿ ಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಶ್ರೀ ವಿನಾಯಕ ಟ್ರಸ್ಟ್ ಹಾಗೂ ಶ್ರೀ ಸದಾಶಿವ ಶಿವಣ್ಣನವರ್ ಮತ್ತು ಸ್ನೇಹಿತರ ಸಹ ಪ್ರಾಯೋಜಕತ್ವದಲ್ಲಿ ಏರ್ಪಡಿಸಲಾಗಿತ್ತು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು. ಪ್ರಥಮ ಬಹುಮಾನ ಅಟಲ್ ಬಿಹಾರಿ ವಾಜಪೇಯಿ ಶಾಲಾ ವಿದ್ಯಾರ್ಥಿಗಳು ಮೂಡಿಗೇರಿಸಿಕೊಂಡರು. ದ್ವಿತೀಯ ಬಹುಮಾನವನ್ನು ಶ್ರೀ ರಾಜರಾಜೇಶ್ವರಿ ಶಾಲೆ, ತೃತೀಯ ಬಹುಮಾನವನ್ನು ಶ್ರೀ ರಾಜರಾಜೇಶ್ವರಿ ಶಾಲೆ ಹಾಗೂ ಚತುರ್ಥ ಬಹುಮಾನವನ್ನು ಕೋರಂಗಾಲದ ಜ್ಞಾನೋದಯ ಶಾಲೆ ಪಡೆದುಕೊಂಡಿತು.
ಉಳಿದಂತಹ ೬ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ನಂತರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ೬ ಗಂಟೆಯ ನಂತರ ಅಲಂಕೃತ ಮಂಟಪದಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಸಾಗಿ ತ್ರಿವೇಣಿ ಸಂಗಮದಲ್ಲಿ ವಿಸರ್ಜನೆ ಕಾರ್ಯ ನೆರವೇರಿತು, ಕಾರ್ಯಕ್ರಮಕ್ಕೆ ಸ್ಥಳೀಯ ಸಂಘ-ಸAಸ್ಥೆಗಳು, ಊರಿನ ಮುಖಂಡರು ಭಾಗವಹಿಸಿದ್ದರು.
ವೀರಾಜಪೇಟೆ: ವೀರಾಜಪೇಟೆಯ ಅಂಬಟ್ಟಿ ವಿಜಯ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ಮೊದಲನೇ ವರ್ಷದ ಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಮೊದಲ ಬಾರಿಗೆ ಅಂಬಟ್ಟಿಯಲ್ಲಿ ಗೋಣಿಕೊಪ್ಪ ಮುಖ್ಯ ರಸ್ತೆಯ ಬದಿಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿ ಬಿಟ್ಟಂಗಾಲದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಕುಪ್ಪಂಡ ಕುಟುಂಬದ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಸಮಿತಿಯ ಅಧ್ಯಕ್ಷ ವಿಜಯನ್ ಮಾತನಾಡಿ, ವೀರಾಜಪೇಟೆ ನಗರದಲ್ಲಿ ಅನೇಕ ಕಡೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದರಿಮದಾಗಿ ನಾವು ಕೂಡ ಈ ಬಾರಿ ಮೊದಲ ಬಾರಿಗೆ ವಿಘ್ನೇಶ್ವರನ ಪ್ರತಿಷ್ಠಾಪನೆ ಮಾಡಿದ್ದೇವೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ನಾಯಡ ಬೋಪಣ್ಣ ಮಾತನಾಡಿ, ಈ ಬಾರಿ ಸರಳವಾಗಿ ಮೊದಲ ಬಾರಿಗೆ ಗಣಪತಿ ಪ್ರತಿಷ್ಠಾಪನೆ ಮಾಡಿದ್ದೇವೆ. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ವಿಜ್ರಂಭಣೆಯಿAದ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು. ಈ ಸಂದರ್ಭ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಸಿದ್ದಾಪುರ: ಅಮ್ಮತ್ತಿ ಒಂಟಿಯAಗಡಿ ಸಮೀಪದ ಕಣ್ಣಂಗಾಲ ಗ್ರಾಮದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ಗೌರಿ ಗಣೇಶ ವಿಸರ್ಜನೋತ್ಸವ ವಿಜೃಂಭಣೆಯಿAದ ನಡೆಯಿತು. ಗ್ರಾಮದ ಸುತ್ತಮುತ್ತಲಿನಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಕುಳ್ಳರಿಸಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆಗಳು ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀ ವಿಜ್ಞೇಶ್ವರ ಸೇವಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.ಕೂಡಿಗೆ: ಕೂಡಿಗೆಯ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ. ಶ್ರೀ ಬಸವೇಶ್ವರ ಹಾಗೂ ಶ್ರೀ ದಂಡಿನಮ್ಮ ದೇವಸ್ಥಾನ ಸಮಿತಿ, ಯಂಗ್ ಸ್ಟಾರ್ ಅಸೋಸಿಯೇಷನ್ ಸಹಯೋಗದೊಂದಿಗೆ ೧೭ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ ಹಬ್ಬ ಆಚರಣೆ ನಡೆಯಿತು. ಈ ಪ್ರಯುಕ್ತ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ವಿಸರ್ಜನೆ ಕಾರ್ಯವನ್ನು ನೆರವೇರಿಸಲಾಯಿತು.
ತಾ.೨೭ ರಿಂದ ೨೯ರವರೆಗೆ ಮೈಸೂರಿನ ಪಿ.ಎಂ ಸ್ಟಾರ್ ಮ್ಯೂಸಿಕಲ್ ಈವೆಂಟ್ಸ್ ವತಿಯಿಂದ ಆರ್ಕೆಸ್ಟಾç, ಕೂಡಿಗೆಯ ಕ್ರಿಯೇಟವ್ ಡ್ಯಾನ್ಸ್ ಆಕಾಡೆಮಿ ನೃತ್ಯ ಸಂಸ್ಥೆ ವತಿಯಿಂದ ಡ್ಯಾನ್ಸ್-ಡ್ಯಾನ್ಸ್ ಕಾರ್ಯಕ್ರಮಗಳು ನಡೆದವು.
ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ಗಣಪತಿ ವಿಗ್ರಹವನ್ನು ಕುಳ್ಳಿರಿಸಿ ನಂತರ ಕೂಡಿಗೆ ಸರ್ಕಲ್‌ನಿಂದ ಕೂಡುಮಂಗಳೂರು ಸರ್ಕಲ್, ಬಳಿಕÀ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಮುಂಭಾಗದಲ್ಲಿ ಹರಿಯುವ ಕಾವೇರಿ ನದಿಗೆ ವಿಸರ್ಜನೆ ಮಾಡಲಾಯಿತು. ಮಂಟಪ ಮುಂಭಾಗದಲ್ಲಿ ಡೊಳ್ಳು ಕುಣಿತ, ಮಂಗಳ ವಾದ್ಯಗಳೊಂದಿಗೆ ಮದ್ದು ಗುಂಡುಗಳ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಯಂಗ್ ಸ್ಟಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್ ರಕ್ಷಿತ್ ಕುಮಾರ್, ಕಾರ್ಯದರ್ಶಿ ಡಿ ಉಮೇಶ್, ಉಪಾಧ್ಯಕ್ಷರುಗಳಾದ ಮಂಜುನಾಥ, ಸಂದೇಶ, ಭರತ್ ಸೇರಿದಂತೆ ಸಮಿತಿಯ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.
ಐಗೂರು: ಕಿರಗಂದೂರಿನ ದುರ್ಗಾ ನಗರದ ಸ್ಕಂದ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನೆಯು ಸಂಭ್ರಮದಿAದ ನಡೆಯಿತು. ವಿದ್ಯುತ್ ಅಲಂಕೃತ ಮಂಟಪದಲ್ಲಿ ಮೂರ್ತಿಯನ್ನು ಕುಳ್ಳಿರಿಸಿ ಗ್ರಾಮ ದೇವತೆಗಳಾದ ಕರಿಮಾರಿಯಮ್ಮ, ಮುತ್ತಪ್ಪ ಸ್ವಾಮಿ ಮತ್ತು ಗುಳಿಗಪ್ಪ ಸ್ವಾಮಿಯ ದೇವಾಲಯಗಳಿಗೆ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ತೆರಳಿ ಪೂಜೆ ಸಲ್ಲಿಸಲಾಯಿತು. ಸಕಲೇಶಪುರದ ೩೦ ಜನರ ಯುವಕ ಮತ್ತು ಯುವತಿಯರ ತಂಡದ ಬ್ಯಾಂಡ್‌ಸೆಟ್‌ನ ತಾಳಕ್ಕೆ ಗ್ರಾಮದ ಯುವಕರು, ಮಹಿಳೆಯರು ಮತ್ತು ವೃದ್ಧರು ಕುಣಿದು ಸಂಭ್ರಮಾಚರಿಸಿದರು. ರಾತ್ರಿ ವೇಳೆ ಹೊರಟ ಮೆರವಣಿಗೆಯು ಚೋರನ ಹೊಳೆಗೆ ತಲುಪಿ ಹೊಳೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಸೋಮವಾರಪೇಟೆಯ ಎ.ಎಸ್.ಐ ಪ್ರವೀಣ್ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಗಗನ್, ಉಪಾಧ್ಯಕ್ಷ ಜೀವನ್, ಖಜಾಂಚಿ ಪ್ರಶಾಂತ್, ಸದಸ್ಯರಾದ ಅಜಿತ್ ಮಹೇಶ್, ಧರ್ಮ, ಗಿರೀಶ್, ಗೌತಮ್, ಮನೋಜ್, ರಮೇಶ್, ಯೋಗೇಶ್, ಜನನಿ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ೩೨ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವವನ್ನು ಸಂಪ್ರದಾಯದAತೆ ಆಚರಣೆ ನಡೆಸಿ, ಮೂರು ದಿನಗಳ ನಂತರ ವಿಸರ್ಜನೆ ನೆರವೇರಿಸಲಾಯಿತು.
ಮೂರು ದಿನಗಳಲ್ಲಿಯೂ ಪೂಜಾ ಕೈಂಕರ್ಯಗಳು ನೆಡೆಸಿ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಉತ್ಸವದ ಅಂಗವಾಗಿ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಚಿಕ್ಕತ್ತೂರು ಆನೆಕೆರೆಗೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ವಿನಾಯಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಸಮಿತಿಯ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.