ಗೋಣಿಕೊಪ್ಪ, ಸೆ. ೪: ಮತಾಂತರದ ವಿರುದ್ಧ ಜನಜಾಗೃತಿ ಕಾಲ್ನಡಿಗೆ ಜಾಥಾವನ್ನು ಗೋಣಿಕೊಪ್ಪ ನಗರ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆಸಲಾಯಿತು.
ವಿಶ್ವ ಹಿಂದೂ ಪರಿಷತ್ ಗೋಣಿಕೊಪ್ಪಲು ನಗರ ಅಧ್ಯಕ್ಷ ಅಮೃತ್‌ರಾಜ್ ನೇತೃತ್ವದಲ್ಲಿ ನೂರಾರು ಹಿಂದೂ ಬಾಂಧವರು ಮತಾಂತರದ ವಿರುದ್ಧ ಘೋಷಣೆಗಳನ್ನು ಹಾಕಿ, ಮತಾಂತರಕ್ಕೆ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ ಮುಖ್ಯಸ್ಥೆ ಶಾಂತಿ ಅಚ್ಚಪ್ಪ ಮತ್ತು ಬೆನ್ನಿ ಇವರುಗಳು ಪ್ರಚೋದಿಸುತ್ತಿದ್ದು, ಇವರುಗಳನ್ನು ಬಂಧಿಸಬೇಕು ಎಂಬ ಉದ್ದೇಶದೊಂದಿಗೆ ಮೆರವಣಿಗೆ ನಡೆಸಿದರು.
ಗೋಣಿಕೊಪ್ಪ ಮಹಾಲಕ್ಷ್ಮಿ ದೇವಸ್ಥಾನದಿಂದ, ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯವರೆಗೆ ಕಾಲ್ನಡಿಗೆ ಜಾಥ ನಡೆಯಿತು.
ಆಗಸ್ಟ್ ೩೧ರಂದು ಅತ್ತೂರು ಗ್ರಾಮದ ನಿವಾಸಿ ಶಾಂತಿ ಅಚ್ಚಪ್ಪ ಮತ್ತು ಬೆನ್ನಿ ಎಂಬವರು ಮಾಲೀಕ ಅಯ್ಯಪ್ಪ ಅವರ ಸಭಾಂಗಣದಲ್ಲಿ ಅನಧಿಕೃತವಾಗಿ ನಡೆಸಿದ ಕ್ರೆöÊಸ್ತ ಸಭೆಯಲ್ಲಿ ಬುಡಕಟ್ಟು, ಆರ್ಥಿಕ ಹಿಂದುಳಿದವರು, ಕೊಡಗಿನ ಮೂಲ ನಿವಾಸಿಗಳನ್ನು ಕ್ರೆöÊಸ್ತ ಧರ್ಮಕ್ಕೆ ಮತಾಂತರ ಮಾಡುವ ಉದ್ದೇಶದೊಂದಿಗೆ ಸಭೆ ನಡೆಸಲಾಗಿತ್ತು ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯ ನಡಾವಳಿಕೆ ಮತ್ತು ಭಾಗವಹಿಸಿದವರನ್ನು, ಶಾಂತಿ ಅಚ್ಚಪ್ಪನವರ ಮಗ ಕ್ಯಾಮರದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಈ ಗಂಭೀರ ಕಾರಣವನ್ನು ಮುಂದಿಟ್ಟು ಮತಾಂತರದ ಸಭೆ ನಡೆಸಿದ ಶಾಂತಿ ಅಚ್ಚಪ್ಪ ಮತ್ತು ಬೆನ್ನಿಯವರನ್ನು ಬಂಧಿಸಬೇಕು ಎಂದು ಪ್ರತಿಭಟನೆ ನಡೆಸಿದರು.
ಹಿಂದೂಗಳನ್ನು ಕ್ರೆöÊಸ್ತ ಧರ್ಮಕ್ಕೆ ಮತಾಂತರ ಮಾಡುವ ಮೂಲಕ ಸಮಾಜದ ಸ್ವಾಸ್ಥ÷್ಯವನ್ನು ಕದಡುವ ಕೆಲಸ ನಡೆಯುತ್ತಿದೆ. ಈ ವಿಚಾರವಾಗಿ ಜಿಲ್ಲಾಡಳಿತ ಹಾಗೂ (ಮೊದಲ ಪುಟದಿಂದ)
ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ನೂರಾರು ಹಿಂದೂ ಪರ ಸಂಘಟನೆಗಳು ಬೀದಿಗೆ ಇಳಿದು ಉಗ್ರ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗುತ್ತದೆ. ಇಂತಹ ಷಡ್ಯಂತ್ರಗ¼ನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು. ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿರುವ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಗೋಣಿಕೊಪ್ಪ ಪೊಲೀಸ್ ಉಪನಿರೀಕ್ಷಕ ಪ್ರದೀಪ್ ಕುಮಾರ್ ಬಿ.ಕೆ. ಅವರಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಪ್ರತಿಭಟನಾ ಮೆರವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಸಿ. ಕೆ ಬೋಪಣ್ಣ, ತಾಲೂಕು ಅಧ್ಯಕ್ಷ ಪಂದ್ಯAಡ ಹರೀಶ್, ಬಿಜೆಪಿ ಗೋಣಿಕೊಪ್ಪ ನಗರ ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ಮಂಜು ರೈ, ಮತ್ತು ನೇಲ್ಲಿರ ಚಲನ್, ಗುಮ್ಮಟೀರ ಕಿಲನ್‌ಗಣಪತಿ, ದರ್ಶನ್, ಮಾಪಂಗಡ ಯಮುನ ಚಂಗಪ್ಪ, ಅಪ್ಪಂಡೇರAಡ ಭವ್ಯ, ಸುವಿನ್ ಗಣಪತಿ, ಚೆಪುö್ಪಡಿರ ರಾಕೇಶ್, ಕುಲ್ಲಚಂಡ ಚಿಣ್ಣಪ್ಪ, ಕುಲ್ಲಚಂಡ ಬೋಪಣ್ಣ, ಸುಬ್ರಮಣಿ, ಗಾಂಧಿದೇವಯ್ಯ, ರಾಜೇಶ್.ಕೆ, ರಾಮಕೃಷ್ಣ, ಚೈತ್ರ. ಬಿ ಚೇತನ್, ವಾಟೇರಿರ ಬೋಪಣ್ಣ, ಬಿ.ಎನ್ ಪ್ರಕಾಶ್, ಪುಷ್ಪ ಮನೋಜ್, ಕೊಣಿಯಂಡ ಬೋಜಮ್ಮ, ಜಿ.ಕೆ. ಗೀತ, ಅಣ್ಣಳಮಾಡ ರಾಯ್ ಸೇರಿದಂತೆ ಹಿಂದೂ ಸಂಘಟನೆಯ ನೂರಾರು ಪ್ರಮುಖರು ಭಾಗವಹಿಸಿದ್ದರು.