ನಾಪೋಕ್ಲು, ಸೆ. ೧ : ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಭಾಗಮಂಡಲ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕೊಟ್ಟೂರು ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಪಿ. ಎನ್ ಜೀವ ನಾಣಯ್ಯ ೪೦೦ ಮೀಟರ್ ಓಟದಲ್ಲಿ ಪ್ರಥಮ, ೮೦೦ ಮೀಟರ್ ಓಟದಲ್ಲಿ ಆದರ್ಶ್ ಕೆ. ಬಿ ದ್ವಿತೀಯ, ೪೦೦ ಮೀಟರ್ ಓಟದಲ್ಲಿ ಯಶ್ವಿನ್ ಕೆ. ಎಲ್ ಎರಡನೇ ಸ್ಥಾನ, ಬಾಲಕರ ೪x೪೦೦ ರಿಲೇಯಲ್ಲಿ ದ್ವಿತೀಯ ಸ್ಥಾನ, ಭಾರದ ಗುಂಡು ಹಾಗೂ ತಟ್ಟೆ ಎಸೆತದಲ್ಲಿ ಪಿ. ಸಿ. ಶರಣ್ ಚಂಗಪ್ಪ ಪ್ರಥಮ ಸ್ಥಾನ, ಜಾವೆಲಿನ್ ಎಸೆತದಲ್ಲಿ ಆಶಿಕ್ ಮಂದಣ್ಣ ಕೆ. ಪಿ ಪ್ರಥಮ ಸ್ಥಾನ, ಬಾಲಕಿಯರ ಭಾರದ ಗುಂಡು ಎಸೆತದಲ್ಲಿ ಚಸ್ಮಿತಾ ಪ್ರಥಮ, ತಟ್ಟೆ ಎಸೆತದಲ್ಲಿ ಶಿವಾನಿ ಕೆ. ಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ಬಾಲಕಿಯರ ೨೦೦ ಮೀಟರ್ ಓಟದಲ್ಲಿ ವರುಣಿಕ ಪಿ. ಎಂ. ಮೂರನೇ, ಬಾಲಕರ ಫುಟ್‌ಬಾಲ್ ಹಾಗೂ ಕಬಡ್ಡಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತಾಲೂಕು ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಶಾಲೆಯ ವನ್ಯಕೃಷ್ಣ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.