ಮಡಿಕೇರಿ, ಸೆ. ೧: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ೨೦೨೪-೨೫ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಮಡಿಕೇರಿ ರೇಂಜ್ ಮಟ್ಟದಲ್ಲಿ ೧೦ನೇ ತರಗತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಸಮಸ್ತ ಸ್ಮಾರಕ ಆವಾರ್ಡ್ ಪಡೆದ ಮಡಿಕೇರಿ ಬದ್ರಿಯಾ ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿ ರುವೈಝ್ ಹಾಗೂ ಮದರಸ ಪ್ರಾಂಶುಪಾಲ ಎಂ.ಬಿ ಹನೀಫ್ ಫೈಝಿ ಅವರಿಗೆ ಮದರಸ ಸ್ವದೇಶೀ ರೈಂಜ್ ಇಶ್ಕ್ ಮಜ್ಲಿಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕುಶಾಲನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರು ಹಾಗೂ ಕೊಡಗು ಜಿಲ್ಲಾ ಖಾಝಿ ಶೈಖುನಾ ಎಂ ಅಬ್ದುಲ್ಲ ಫೈಝಿ ಉಸ್ತಾದ್ ಈ ಸಂದರ್ಭ ಹಾಜರಿದ್ದರು.