ಸೋಮವಾರಪೇಟೆ, ಸೆ. ೧: ಕೊರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ಪೊನ್ನಂಪೇಟೆಯ ರೋರ‍್ಯಾಕ್ಟ್ ಕ್ಲಬ್ ಸದಸ್ಯರು ಹೆಗ್ಗಳ ಗ್ರಾಮದ ಸ್ನೇಹಭವನ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಿರಿಯ ಜೀವಗಳೊಂದಿಗೆ ಕಾಲ ಕಳೆದರು.

ವಿದ್ಯಾರ್ಥಿಗಳು ತಮ್ಮ ಸಮಯ, ಶ್ರಮ, ಶಕ್ತಿ, ಪ್ರತಿಭೆಯನ್ನು ಹಿರಿಯ ಜೀವಗಳೊಂದಿಗೆ ಹಂಚಿಕೊAಡು. ರೋರ‍್ಯಾಕ್ಟ್ನಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರೊಂದಿಗೆ ದಿನಸಿ ಪದಾರ್ಥಗಳನ್ನು ವೃದ್ದಾಶ್ರಮಕ್ಕೆ ಹಸ್ತಾಂತರಿಸಲಾಯಿತು.

ಯುವ ಜನಾಂಗವನ್ನು ಮುಕ್ತ ಮನಸ್ಸಿನಿಂದ ಬರಮಾಡಿಕೊಂಡ ವೃದ್ಧರು, ಜೀವನದಲ್ಲಿ ಸಾಂತ್ವನ ಮತ್ತು ಸಹಾನುಭೂತಿಯ ಅನುಬಂಧ ಪಡೆದರು. ಕೆಲವು ವಿದ್ಯಾರ್ಥಿಗಳು ತಮ್ಮ ನೃತ್ಯ, ಹಾಡು ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಪ್ರದರ್ಶಿಸಿ, ವೃದ್ಧರ ಮೊಗದಲ್ಲಿ ನಗುವಿನ ಕ್ಷಣಗಳನ್ನು ಸೃಷ್ಟಿಸಿದರು. ಕೆಲವರು ವೃದ್ಧರೊಂದಿಗೆ ಕೈ ಜೋಡಿಸಿ ಕುಣಿದು ಸಂಭ್ರಮ ಹಂಚಿಕೊAಡರು. ವೃದ್ಧರ ಮುಖದಲ್ಲಿ ಮೂಡಿದ ನಗು, ಅವರ ಕಣ್ಣುಗಳಲ್ಲಿ ಕಂಡ ಸಂತೋಷ, ಕಾರ್ಯಕ್ರಮದ ಸಾರ್ಥಕತೆಯನ್ನು ಪ್ರತಿಬಿಂಭಿಸಿತು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಎಂ. ಬಸವರಾಜ ಉಪಸ್ಥಿತರಿದ್ದು ಮಾತನಾಡಿ, ವಿದ್ಯಾರ್ಥಿಗಳ ಸೇವಾ ಮನೋಭಾವವನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ನೀಡಿದ ಸಮಯ, ಪ್ರೀತಿ ಮತ್ತು ಶ್ರಮವು ವೃದ್ಧರ ಜೀವನದಲ್ಲಿ ಹೊಸ ಬೆಳಕನ್ನು ತಂದಿದೆ. ಸಮಾಜಕ್ಕೆ ನಿಜವಾದ ಸೇವೆ ಎಂದರೆ ಹೃದಯದಿಂದ ಸಂತಸವನ್ನು ಹಸ್ತಾಂತರಿಸುವುದು ಎಂದು ಹೇಳಿದರು.

ಪ್ರೊ. ಕಲ್ಪಿತ ಉತ್ತಪ್ಪ ಮತ್ತು ಪ್ರೊ. ಸುಮನ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ರೋರ‍್ಯಾಕ್ಟ್ ಅಧ್ಯಕ್ಷ ಡಾನ್ ದೇವಯ್ಯ ನೇತೃತ್ವದಲ್ಲಿ ಕ್ಲಬ್‌ನ ಇತರ ಸದಸ್ಯರು, ವೃದ್ಧಾಶ್ರಮದಲ್ಲಿ ವ್ಯವಸ್ಥೆ, ಹಿರಿಯ ಜೀವಗಳ ಜೀವನಾನುಭವ ಕೇಳಿ ತಿಳಿದುಕೊಂಡರು.

ವೃದ್ಧರು ತಮ್ಮ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೆದುರು ಹಂಚಿಕೊAಡು, ಜೀವನ ಪಾಠ, ಮೌಲ್ಯಗಳನ್ನು ಮನವರಿಕೆ ಮಾಡಿಕೊಟ್ಟರು.