ನಾಪೋಕ್ಲು, ಆ. ೩೧: ಮನೆಯಂಗಳಕ್ಕೆ ಬಂದ ಕಾಡಾನೆಗಳ ಹಿಂಡು ಹೂಕುಂಡಗಳನ್ನು ಧ್ವಂಸ ಮಾಡಿದ ಘಟನೆ ಕಕ್ಕಬ್ಬೆಯ ನಾಲಡಿ ಗ್ರಾಮದಲ್ಲಿ ನಡೆದಿದೆ.
ಕೋಡಿಮಣಿಯಂಡ ಶರಣ್ ಕುಟ್ಟಪ್ಪ ಅವರ ಮನೆಯಂಗಳಕ್ಕೆ ಲಗ್ಗೆಯಿಟ್ಟ ಕಾಡಾನೆಗಳು ಹೂ ಗಿಡಗಳನ್ನು ಹಾಗೂ ಹೂಕುಂಡಗಳನ್ನು ಧ್ವಂಸಗೊಳಿಸಿವೆ. ಭಾನುವಾರ ಬೆಳಿಗ್ಗೆ ೪ ಗಂಟೆಯ ವೇಳೆಗೆ ನಾಲ್ಕು ಕಾಡಾನೆಗಳು ಎರಡು ಮರಿಗಳ ಸಹಿತ ಮನೆಯಂಗಳದಲ್ಲಿ ದಾಂಧಲೆ ನಡೆಸಿದ್ದಲ್ಲದೆ ಸಮೀಪದ ಕಾಫಿ ತೋಟಗಳಲ್ಲಿಯೂ ಕೃಷಿ ಗಿಡಗಳನ್ನು ನಷ್ಟ ಮಾಡಿದೆ. ಗ್ರಾಮದಲ್ಲಿ ಕಾಡಾನೆಗಳಿಂದ ಜೀವ ಹಾನಿ ಸಂಭವಿಸುವ ಸಾಧ್ಯತೆಯಿದ್ದು ಕೂಡಲೇ ಸಂಬAಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶರಣ್ ಕುಟ್ಟಪ್ಪ ಒತ್ತಾಯಿಸಿದ್ದಾರೆ.