ಸುಂಟಿಕೊಪ್ಪ, ಆ. ೩೧: ಕೆದಕಲ್ ಸಮೀಪದ ೭ನೇ ಮೈಲ್ ಬಳಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾ ಗಿದ್ದಾರೆ.
ಸುಂಟಿಕೊಪ್ಪದಿAದ ಮಡಿ ಕೇರಿ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಕೆದಕಲ್ ೭ನೇ ಮೈಲ್ ಬಳಿಯಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದ ಸಂದರ್ಭ ಹಿಂಬದಿಯಿAದ ಬಂದ ಕಾರು ಬಸ್ಸಿಗೆ ಡಿಕ್ಕಿಪಡಿಸಿದೆ. ಅದರ ಹಿಂಬದಿಯಲ್ಲಿ ಆಗಮಿಸುತ್ತಿದ್ದ ಮತ್ತೊಂದು ಕಾರು ಮೊದಲೇ ಡಿಕ್ಕಿಯಾಗಿದ್ದ ಕಾರಿಗೆ ಡಿಕ್ಕಿಯಾಗಿದ್ದು, ೨ ಕಾರು ಜಖಂಗೊAಡಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.