ಮಡಿಕೇರಿ, ಆ. ೩೧: ಮಡಿಕೇರಿ ನಗರಸಭೆಯಿಂದ ಸದಸ್ಯ ಕೆ.ಎಂ. ಅಪ್ಪಣ್ಣ ಅವರ ಪ್ಲಾಂಟರ್ಸ್ ವರ್ಲ್ಡ್ ಎಂಬ ಸಂಸ್ಥೆಗೆ ಒಂದೇ ಬಿಲ್‌ಗೆ ಎರಡು ಬಾರಿ ಹಣ ಪಾವತಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿ ಹಾಗೂ ನೌಕರರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಆದೇಶ ಹೊರಡಿಸಿದ್ದಾರೆ.

ನಗರಸಭೆಯ ಕಾಡು ಕಡಿಯುವ ಯಂತ್ರಗಳ ದುರಸ್ತಿ ಕೆಲಸಕ್ಕೆ ಸಂಬAಧಿಸಿದAತೆ ಅಪ್ಪಣ್ಣ ಅವರ ಸಂಸ್ಥೆಗೆ ಒಂದೇ ಬಿಲ್‌ಗೆ ಎರಡು ಬಾರಿ ಹಣ ಪಾವತಿಸಿರುವ ಬಗ್ಗೆ ವಿಪಕ್ಷ ಸದಸ್ಯ ಅಮಿನ್ ಮೊಯ್ಸಿನ್ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆದು ಒಂದೇ ಬಿಲ್‌ಗೆ ಎರಡು ಬಾರಿ ಹಣ ಪಾವತಿ ಮಾಡಿದ ಕೃತ್ಯದಲ್ಲಿ ಹಿಂದಿನ ನಗರಸಭಾ ಆಯುಕ್ತ ಎಸ್.ವಿ. ರಾಮದಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿದ್ದ ಕೆ. ಸೌಮ್ಯ, ಪ್ರಭಾರ ಲೆಕ್ಕಾಧೀಕ್ಷಕರಾಗಿದ್ದ ಕೆ.ಬಿ. ಸುಜಾತ ಹಾಗೂ ದ್ವಿತೀಯ ದರ್ಜೆ ಸಹಾಯಕರಾದ ಬಿ.ಆರ್. ಹರಿಣಿ ಇವರುಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇವರುಗಳ ಮುಂದಿನ ಒಂದು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಸಹಿತವಾಗಿ ತಡೆ ಹಿಡಿಯುವ ದಂಡನೆಯೊAದಿಗೆ ಒಂದೇ ಬಿಲ್‌ಗೆ ಎರಡು ಬಾರಿ ಹಣ ಪಾವತಿಸಿರುವುದರಿಂದ ರೂ. ೬೩೨೦ ಹಣವನ್ನು ವಸೂಲಿ ಮಾಡಿ ನಗರಸಭೆ ನಿಧಿಗೆ ಜಮೆ ಮಾಡುವಂತೆ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಆದೇಶ ಹೊರಡಿಸಿದ್ದಾರೆ.