ಮಡಿಕೇರಿ, ಆ. ೩೦: ಸಾಮಾಜಿಕ ಜಾಲತಾಣವಾದ ಇನ್ಸಾ÷್ಟಗ್ರಾಂನಲ್ಲಿ ಖಾತೆ ತೆರೆದು ಅದರಲ್ಲಿ ‘ಮಡಿಕೇರಿಯಲ್ಲಿ ಡೇಟಿಂಗ್‌ಗೆ ಹುಡುಗಿಯರು ಸಿಗುತ್ತಾರೆ’ ಎಂದು ಪೋಸ್ಟ್ ಮಾಡಿ ಹಣ ಲಪಟಾಯಿಸಿ ವಂಚನೆ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿರುವ ಕೊಡಗು ಪೊಲೀಸರು ಈ ಸಂಬAಧ ವ್ಯಕ್ತಿಯೋರ್ವನನ್ನು ಬಂದಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು; ಕಳೆದ ಆ.೨೧ರಂದು ಸಾಮಾಜಿಕ ಜಾಲತಾಣ ಇನ್ಸಾ÷್ಟಗ್ರಾಂನಲ್ಲಿ ಕೊಟ್ಯ_೨೦೨೬ ಎಂಬ ಖಾತೆಯಲ್ಲಿ ‘ಮಡಿಕೇರಿ ಜಿಲ್ಲೆಯಲ್ಲಿ ಎಲ್ಲಿ ಹುಡುಗಿ ಆಂಟಿ ಡೇಟಿಂಗ್ ಮಾಡಲಿಕ್ಕೆ ಸರ್ವಿಸ್ ಬೇಕಾದ್ರೆ ಕಾಲ್ ಮಾಡಿ- ೮೯೦೪೦ ೮೮೮೭೩’ ಎಂಬದಾಗಿ ವೀಡಿಯೋ ಅಪ್ ಲೋಡ್ ಮಾಡ ಲಾಗಿತ್ತು. ಮಡಿಕೇರಿ ಖಾಸಗಿ ಬಸ್ ನಿಲ್ದಾಣದ ವೀಡಿಯೋ ತೆಗೆದು ಹಾಕಲಾಗಿತ್ತು. ಈ ವಿಚಾರ ತಾ.೨೭ರಂದು ಗಮನಕ್ಕೆ ಬಂದಿದ್ದು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಪತ್ತೆಹಚ್ಚಿ ಬಂದಿಸಲಾಗಿದೆ ಎಂದು ತಿಳಿಸಿದರು.

ಬಾಗಲಕೋಟೆಯಲ್ಲಿ ಬಂಧನ

ಪ್ರಕರಣ ದಾಖಲು ಮಾಡಿಕೊಂಡ ಬಳಿಕ ಆರೋಪಿಯ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಿ ತನಿಖೆ ಕೈಗೊಳ್ಳಲಾಗಿತ್ತು. ತನಿಖಾ ತಂಡದ ಡಿವೈಎಸ್‌ಪಿ ಪಿ.ಎ. ಸೂರಜ್, ವೃತ್ತ ನಿರೀಕ್ಷಕ ಪಿ.ಕೆ. ರಾಜು, ನಗರ ಠಾಣಾಧಿಕಾರಿ ಎಸ್.ಎಸ್. ಅನ್ನಪೂರ್ಣ ಹಾಗೂ ಸಿಬ್ಬಂದಿಗಳಿಗೆ ಆರೋಪಿ ಬಾಗಲಕೋಟೆಯವನೆಂದು ತಿಳಿದುಬಂದಿದೆ. ನಂತರದಲ್ಲಿ ತಂಡವು ಬಾಗಲಕೋಟೆ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿ ಅಲ್ಲಿನ ಸಿಬ್ಬಂದಿಗಳ ಸಹಕಾರದೊಂದಿಗೆ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಸಫಲರಾಗಿದ್ದಾರೆ. ಬಾಗಲಕೋಟೆಗೆ ತೆರಳಿ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ನಾಗಪ್ಪ ಹನುಮಂತ ಲಮಾಣಿ(೨೬) ಆತನ ಮನೆಯಲ್ಲಿ ನಿನ್ನೆ ದಿನ ಬಂದಿಸಿದ್ದು, ಕಲಂ ೩೧೮(೪), ೭೮ ಬಿಎನ್‌ಎಸ್ ಮತ್ತು ೬೬(ಇ), ೬೭ಐಟಿ ಕಾಯ್ದೆ ಮತ್ತು ೬ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಹಣ ಮಾಡುವ ಉದ್ದೇಶ..!

ಆರೋಪಿಯಾಗಿರುವ ನಾಗಪ್ಪ ಈ ಹಿಂದೆ ಸಾಮಾಜಿಕ ೪ಏಳನೇ ¥ ಜಾಲತಾಣದಲ್ಲಿ ಇಂತಹುದೇ ಸಂದೇಶ ನೋಡಿ ಅದಕ್ಕೆ ಹಣ ಹಾಕಿ ಮೋಸ ಹೋಗಿದ್ದಾನೆ. ಹಾಗಾಗಿ ಆತನಿಗೆ ಈ ರೀತಿಯ ಒಂದು ಹಣ ಮಾಡುವ ಉದ್ದೇಶ ಹೊಳೆದು ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದಿದ್ದಾನೆ. ಯಾರಾದರೂ ಹುಡುಗಿ ಬೇಕೆಂದು ಕರೆ ಮಾಡಿದರೆ ಅವರಿಂದ ತನ್ನ ಖಾತೆಗೆ ಹಣ ಜಮೆ ಮಾಡುವಂತೆ ಬೇಡಿಕೆ ಇಡುತ್ತಾನೆ. ನಂತರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಹಣ ಮಾಡುವ ಉದ್ದೇಶದಿಂದ ಈ ರೀತಿಯ ಮೋಸ, ವಂಚನೆ ಮಾಡುವ ಉದ್ದೇಶದೊಂದಿಗೆ ಈ ಕೆಲಸ ಮಾಡಿದ್ದಾನೆ ಎಂದು ಅವರು ಹೇಳಿದರು.

ಖಾತೆಯಲ್ಲಿ ೮೦ ಸಾವಿರ..!

ಯಾವುದೇ ಕೆಲಸವಿಲ್ಲದ ನಾಗಪ್ಪನ ಬ್ಯಾಂಕ್ ಖಾತೆಯಲ್ಲಿ ರೂ. ೮೦ ಸಾವಿರ ನಗದು ಇರುವುದು ಪತ್ತೆಯಾಗಿದೆ. ಅಲ್ಲದೆ, ಈ ಆಗಸ್ಟ್ ತಿಂಗಳು ಒಂದರಲ್ಲಿಯೇ ಆತನ ಖಾತೆಗೆ ೩೦ ರಿಂದ ೪೦ ಸಾವಿರ ರೂಪಾಯಿ ಜಮೆ ಆಗಿದೆ., ಮಡಿಕೇರಿ ಹಾಗೂ ಕುಶಾಲನಗರ ಸೇರಿದಂತೆ ಬೇರೆ, ಬೇರೆ ಕಡೆಗಳಿಂದ ಆತನ ಖಾತೆಗೆ ಹಣ ಜಮೆ ಆಗಿದೆ. ಇದೀಗ ಆತನ ಖಾತೆಯಲ್ಲಿದ್ದ ರೂ. ೮೦ ಸಾವಿರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ಐದು ಸಿಮ್ ಕಾರ್ಡ್..!

ಬಂದಿತ ಆರೋಪಿ ಬೇರೆ ಬೇರೆ ಸಿಮ್ ಕಾರ್ಡ್ಗಳನ್ನು ಉಪಯೋಗಿಸುತ್ತಿದ್ದುದು ಪತ್ತೆಯಾಗಿದೆ. ಆತನ ಬಳಿ ಎರಡು ಮೊಬೈಲ್ ಫೋನ್‌ಗಳು ಹಾಗೂ ಐದು ಸಿಮ್ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

೨೨ ಮಂದಿ ಮೇಲೆ ಕೇಸ್..!

ಜಿಲ್ಲೆಯಲ್ಲಿ ಈ ರೀತಿಯಲ್ಲಿ ಖಾತೆ ತೆರೆದು ಮೋಸ ಮಾಡುವದಲ್ಲದೆ, ಜಿಲ್ಲೆಯ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡುವವರನ್ನು ಪತ್ತೆಹಚ್ಚಿ ಅಂತಹವರುಗಳ ಮೇಲೆ ಮೊಕದ್ದಮೆ ದಾಖಲು ಮಾಡಲಾಗುತ್ತಿದೆ. ಇದುವರೆಗೆ ಕುಶಾಲನಗರ ಹಾಗೂ ಮಡಿಕೇರಿಯಲ್ಲಿ ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ೨೨ ಮಂದಿಯನ್ನು ಬಂದಿಸಿ ಮೊಕದ್ದಮೆ ದಾಖಲಿಸಲಾಗಿದೆ. ಯಾರೇ ಆದರೂ ಈ ರೀತಿ ಮಾಡಿದರೆ ಕ್ರಮ ಕೈಗೊಳ್ಳಲಾಗುವದು. ಅಂತಹ ಮಾಹಿತಿ, ಸಂದೇಶಗಳು, ಮಹಿಳೆಯರು ಹಾಗೂ ಮಕ್ಕಳ ಬಗ್ಗೆ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕುವದು ಕಂಡುಬAದಲ್ಲಿ ಸಾರ್ವಜನಿಕರು ಮಾಹಿತಿ ನೀಡುವಂತೆ ವರಿಷ್ಠಾಧಿಕಾರಿಗಳು ಕೋರಿದರು. -ಸಂತೋµ