ಮಡಿಕೇರಿ, ಆ. ೩೦: ಪತ್ನಿಯೊಂದಿಗೆ ಅಕ್ರಮ ಸಂಬAಧ ಇರಿಸಿಕೊಂಡಿದ್ದಾನೆ ಎಂಬ ಸಂಶಯದಿAದ ವ್ಯಕ್ತಿಯೋರ್ವನನ್ನು ದೊಣ್ಣೆಯಿಂದ ಹಲ್ಲೆ ಮಾಡಿ ಹತ್ಯೆಗೈದಿರುವ ಪ್ರಕರಣ ಕುಶಾಲನಗರ ವ್ಯಾಪ್ತಿಯ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು; ಮಣಿಕಂಠ ಎಂಬವರು ಕುಶಾಲನಗರ ಬಳಿ ಶುಂಠಿ ಕೃಷಿ ಮಾಡಿಕೊಂಡಿದ್ದು, ಇದನ್ನು ಕೇರಳದ ಕೊಟ್ಟಾಯಂನ ಮುರಳಿ(೪೫) ಎಂಬವರು ನೋಡಿಕೊಳ್ಳುತ್ತಿದ್ದರು. ಅಲ್ಲೇ ಪಕ್ಕದಲ್ಲೇ ಬಸವನಹಳ್ಳಿ ಗಿರಿಜನ ಹಾಡಿಯಲ್ಲಿ ವಾಸ ಇರುವ ತೀರ್ಥಕುಮಾರ್ ಹಾಗೂ ಜ್ಯೋತಿ ದಂಪತಿಯರೊAದಿಗೆ ಪರಿಚಯವಾಗಿ ಮುರಳಿ ಆಗಾಗ್ಗೆ ತೀರ್ಥ ಅವರ ಮನೆಗೆ ಹೋಗಿ ಬರುತ್ತಿದ್ದ ಎನ್ನಲಾಗಿದೆ. ಈ ನಡುವೆ ತೀರ್ಥನಿಗೆ ತನ್ನ ಪತ್ನಿ ಹಾಗೂ ಮುರಳಿ ನಡುವೆ ಅಕ್ರಮ ಸಂಬAಧ ಇರುವುದಾಗಿ ಸಂಶಯ ವ್ಯಕ್ತಗೊಂಡಿದ್ದು ನಿನ್ನೆ ರಾತ್ರಿ ಈ ಸಂಬAಧ ಈರ್ವರ ನಡುವೆ ಜಗಳವಾಗಿದೆ. ಈ ಸಂದರ್ಭ ತೀರ್ಥ ಮುರಳಿ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಮುರಳಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿಸಿದರು. ಅಲ್ಲದೆ ಪತ್ನಿ ಜ್ಯೋತಿ ಮೇಲೆಯೂ ಹಲ್ಲೆ ಮಾಡಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದರು.
ಘಟನಾ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ರಾಮಚಂದ್ರ, ಡಿವೈಎಸ್‌ಪಿ, ವೃತ್ತ ನಿರೀಕ್ಷಕರು ಹಾಗೂ ತಾವೂ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕೊಲೆ ಆರೋಪಿಯನ್ನು ಬಂದಿಸಿರುವುದಾಗಿ ತಿಳಿಸಿದರು.