ವೀರಾಜಪೇಟೆ, ಆ. ೩೦: ಜೈ ಭಾರತ್ ಆಟೋ ಚಾಲಕರ ಮತ್ತು ಮಾಲೀಕರ ಸಂಘ ವೀರಾಜಪೇಟೆ ಇವರ ವತಿಯಿಂದ ಗೌರಿಗಣೇಶ ಉತ್ಸವದ ಅಂಗವಾಗಿ ಸೆಪ್ಟೆಂಬರ್ ೬ ರಂದು ೪ನೇ ವರ್ಷದ ಗೌರಿಗಣೇಶ ವಿಸರ್ಜನಾ ದಿನದಂದು ಕಾರು ನಿಲ್ದಾಣದ ಸಭಾಂಗಣದಲ್ಲಿ ರಾತ್ರಿ ಸಂಗೀತ ರಸಸಂಜೆ ಮತ್ತು ಸ್ಥಳೀಯ ಪ್ರತಿಭೆಗಳ ನೃತ್ಯ ಕಾರ್ಯಕ್ರಮವನ್ನು ಹಾಗೂ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್.ಎನ್ ಶಿವು ಹೇಳಿದರು. ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂತನ ಸಂಘ ಪ್ರಾರಂಭಗೊAಡು ೪ ವರ್ಷಗಳು ಕಳೆದಿದೆ. ಸಂಘದಲ್ಲಿ ೫೦೦ಕ್ಕೂ ಅಧಿಕ ಸದಸ್ಯರಿದ್ದಾರೆ. ಸಂಘದ ವತಿಯಿಂದ ಮೀನುಪೇಟೆಯಲ್ಲಿರುವ ಹಿಂದು ರುದ್ರಭೂಮಿಗೆ ಸ್ಟçಕ್ಚರ್ ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಸ್ಥಳಿಯ ಪೋಲಿಸ್ ಠಾಣೆಗೆ ಬ್ಯಾರಿಕೇಡ್ಗಳನ್ನು ವಿತರಿಸಲಾಗಿದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳು ಸೇರಿದಂತೆ ಪಟ್ಟಣದ ಸುತ್ತಮುತ್ತ ಇರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕ, ಸ್ವೆಟರ್ ವಿತರಣೆ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಬಿ.ಕೆ ಜೀವನ್ ಮಾತನಾಡಿ, ಗೌರಿ ಗಣೇಶ ಹಬ್ಬದ ಪ್ರಯುಕ್ತ ಅಂದು ಸಂಜೆ ೪ ಗಂಟೆಗೆ ಸ್ಥಳಿಯ ಕಲಾವಿದರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಭೆಗಳು ಸೆಪ್ಟೆಂಬರ್ ೨ ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬೇಕಾಗಿದೆ. ಆಸಕ್ತರು ೭೦೨೨೩೯೮೨೯೫/ ೯೯೦೧೯೬೯೮೫೯ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ೮ ಗಂಟೆಗೆ ನಡೆಯುವ ರಸಸಂಜೆ ಕಾರ್ಯಕ್ರಮದಲ್ಲಿ ನಗರದ ಹಿರಿಯ ಆಟೋ ಚಾಲಕರನ್ನು ಸನ್ಮಾನಿಲಾಗುವುದು ಎಂದು ಹೇಳಿದರು. ಅತಿಥಿಗಳಾಗಿ ಸಂಘದ ಗೌರವ ಅಧ್ಯಕ್ಷ ವಿನೂಪ್, ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಕಾಣತಂಡ ಬೀನಾ ಜಗದೀಶ್, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾಳೇಟಿರ ಚುಕ್ಕು ದೇವಯ್ಯ, ಕರಿನೆರವಂಡ ಮಂಜು, ರಜಾಕ್ ಉಪಸ್ಥಿತಲಿರುವರು ಎಂದು ಹೇಳಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಜಗದೀಶ್, ಖಜಾಂಚಿ ಪುಟ್ಟ ಬೆಳ್ಳಿಯಪ್ಪ, ಸಹ ಕಾರ್ಯದರ್ಶಿ ಕೋಮಲ ಪ್ರಿಯಾ, ನಿರ್ದೇಶಕರಾದ ನರೋನಾ, ಜಿನ್ನಪ್ಪ, ಯಶ್ವಿನಿ, ಅಶೋಕ್ ಉಪಸ್ಥಿತರಿದ್ದರು.