ಗೋಣಿಕೊಪ್ಪಲು, ಆ. ೩೦: ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಾಫಿ ದರ ಏರಿಕೆಯಾದರೂ ಕೊಡಗಿನ ವ್ಯಾಪಾರಿಗಳು ಕಾಫಿ ಖರೀದಿಗೆ ಮುಂದಾಗದಿರುವ ಬಗ್ಗೆ ಬೆಳೆಗಾರರಿಂದ ಹಾಗೂ ರೈತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಳೆಗಾರರ ಹಾಗೂ ರೈತರ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಯ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು.
ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ರೈತ ಸಂಘದಿAದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಬೆಳೆಗಾರರು ತಮ್ಮ ಅಭಿಪ್ರಾಯವನ್ನು ಸಭೆಯ ಮುಂದಿಟ್ಟರು. ಲಂಡನ್ ಮಾರುಕಟ್ಟೆಯಲ್ಲಿ ಕಾಫಿ ದರದಲ್ಲಿ ಗಣನೀಯ ಏರಿಕೆ ಕಂಡಿದೆ. ಪ್ರಸ್ತುತ ಜಿಲ್ಲೆಯಲ್ಲಿನ ಬಹುತೇಕ ವ್ಯಾಪಾರಿಗಳು ೪೫೦ ಇಪಿ ದರದ ಅನ್ವಯ ರೋಬಸ್ಟ÷ ಕಾಫಿ ಖರೀದಿ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಘೋಷಣೆ ಮಾಡಿದ್ದ ದರದ ಆಧಾರದಲ್ಲಿ ಪ್ರಸ್ತುತ ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ದರ ಏರಿಕೆ ಆಗಿರುವುದರಿಂದ ಇಪಿ ದರ ೪೮೦ ದಾಟಬೇಕಿತ್ತೆಂದು ರೈತರು ತಮ್ಮ ಅಭಿಪ್ರಾಯ ಸಭೆಯ ಮುಂದಿಟ್ಟರು.
ರಫ್ತುದಾರರು ಹಾಗೂ ವರ್ತಕರು ಹೊಂದಾಣಿಕೆ ಮಾಡಿಕೊಂಡು ಅಂರ‍್ರಾಷ್ಟಿçÃಯ ದರ ಕೊಡಗಿನ ಬೆಳೆಗಾರರಿಗೆ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದರ ಹಿಂದೆ ಕಾಫಿ ಮಾಫಿಯಾ ದೊಡ್ಡ ರೀತಿಯ ಕೆಲಸ ಮಾಡುತ್ತಿದೆ. ಬೆಳೆಗಾರರಿಗೆ ನಿರಂತರ ಶೋಷಣೆಯಾಗುತ್ತಿದೆ. ಈ ನಿಟ್ಟಿನಲ್ಲಿ ರೈತರ, ಬೆಳೆಗಾರರ ರಕ್ಷಣೆಗೆ ಸಭೆಯು ದಿಟ್ಟ ನಿರ್ಧಾರ ಕೈಗೊಳ್ಳುವಂತೆ ಸಭೆಯಲ್ಲಿದ್ದ ಬೆಳೆಗಾರರಾದ ಚೆಪ್ಪುಡಿರ ಕಾರ್ಯಪ್ಪ, ವಕೀಲ ಹೇಮಚಂದ್ರ, ನಾಮೇರ ರವಿ ದೇವಯ್ಯ, ಪ್ರಭು ಶಂಕರ್, ಶಂಕ್ರಪ್ಪ, ಕಡೇಮಾಡ ಸುನೀಲ್ ಮಾದಪ್ಪ, ಸಿ.ಬಿ. ಪೂಣಚ್ಚ, ಸುಳ್ಳಿಮಾಡ ಸಂಪತ್, ಟಿ.ಟಿ. ಪೂಣಚ್ಚ, ಮೂಕಳೇರ ರಮೇಶ್ ಬೆಳ್ಯಪ್ಪ, ಚೆಪ್ಪುಡಿರ ಮನೋಜ್, ಸಿ.ಎ. ಕಾರ್ಯಪ್ಪ, ಪುಚ್ಚಿಮಾಡ ಲಾಲಾ ಭೀಮಯ್ಯ, ಕಾಟಿಮಾಡ ಶರೀನ್ ಮುತ್ತಣ್ಣ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯವನ್ನು ಸಭೆಯ ಮುಂದಿಟ್ಟರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಕಾಫಿ ಬೆಳೆಗಾರರಿಗೆ ಒಂದಲ್ಲ ಒಂದು ಸಮಸ್ಯೆಯು ನಿರಂತರವಾಗಿ ಕಾಡುತ್ತಿದೆ. ವಾರ್ಷಿಕವಾಗಿ ಬರುವ ಕಾಫಿ ಬೆಳೆಯಿಂದಲೇ ರೈತನ ಹಾಗೂ ಬೆಳೆಗಾರರ ಕುಟುಂಬ ನಿರ್ವಹಣೆ ಆಗಬೇಕಾಗಿದೆ. ಸಾಲದ
ನಡುವೆ ರೈತರು, ಬೆಳೆಗಾರರು ತೋಟವನ್ನು ನಿಭಾಯಿಸುತ್ತ ಕಾರ್ಮಿಕರಿಗೆ ಹಾಗೂ ರಸ ಗೊಬ್ಬರಗಳಿಗೆ ನಿಗದಿತ ದರವನ್ನು ನೀಡುತ್ತ ವಾರ್ಷಿಕವಾಗಿ ಬರುವ ಬೆಳೆಯಿಂದ ಹಣದ ನಿರೀಕ್ಷೆಯಲ್ಲಿರುವಾಗಲೇ ಕಾಫಿ ದರ ಕುಸಿತ ಎದುರಿಸುತ್ತ ಬಂದಿದ್ದಾರೆ.
ಇದೀಗ ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಸ್ಥಳೀಯ ಮಟ್ಟದಲ್ಲಿ ವ್ಯಾಪಾರಿಗಳು ಉತ್ತಮ ಬೆಲೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಕಾಫಿಯನ್ನು ಖರೀದಿಸಲು ಮುಂದೆ ಬರುತ್ತಿಲ್ಲ. ಇದರಿಂದ ರೈತರಿಗೆ ಸಮಸ್ಯೆ ಎದುರಾಗುತ್ತಿದೆ. ರಾಷ್ಟಿçÃಯ ಮಟ್ಟದಲ್ಲಿ ಕಾಫಿಗೆ ಉತ್ತಮ ಬೆಲೆ ಇದ್ದರೂ ಸ್ಥಳೀಯ ಮಟ್ಟದಲ್ಲಿ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿದೆ. ಹಲವು ಬೆಳೆಗಾರರು ತಮ್ಮ ಅಭಿಪ್ರಾಯವನ್ನು ಸಭೆಯ ಮುಂದಿಟ್ಟಿದ್ದಾರೆ.
ಮುAದಿನ ೧೦ ದಿನಗಳೊಳಗೆ ಕೊಡಗು ಜಿಲ್ಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೂತನ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗುವುದು. ರಾಜಕೀಯ ರಹಿತವಾಗಿ ಕಾಫಿ ಬೆಳೆಗಾರರ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ಕಾಫಿ ಮಂಡಳಿ ಅಧಿಕಾರಿಗಳೊಂದಿಗೆ, ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗ್ಗೆ ೪ಏ ಗಮನ ಸೆಳೆಯಲಾಗುವುದು. ಪ್ರತಿ ತಾಲೂಕಿನಿಂದ ನೂತನ ಸಮಿತಿಗೆ ಅನುಭವಿ ಹೋರಾಟಗಾರರನ್ನು ನೇಮಕ ಮಾಡಿಕೊಳ್ಳಲಾಗುವುದು. ವ್ಯಾಪಾರಿಗಳಿಗೆ ನೀಡುವ ಲೈಸನ್ಸ್ ರದ್ಧತಿ ಸೇರಿದಂತೆ ಹಲವು ವಿಚಾರಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಕೇಂದ್ರ ಸರ್ಕಾರದ ಅಧೀನದಲ್ಲಿ ದರ ನಿಗದಿ ವಿಚಾರ ಇರುವುದರಿಂದ ಸಂಸದರನ್ನೊಳಗೊAಡ ಸಮಿತಿಯಲ್ಲಿ ಕೇಂದ್ರದ ವಾಣಿಜ್ಯ ಮಂತ್ರಿಗಳನ್ನು ಕೂಡ ಭೇಟಿ ಮಾಡಿ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಂತಹAತವಾಗಿ ಹೋರಾಟವನ್ನು ಕೈಗೊಳ್ಳಲಾಗುತ್ತದೆ. ಕೊಡಗಿನಿಂದಲೇ ಬೆಳೆಗಾರರ ಹೋರಾಟ ಆರಂಭವಾಗಲಿದ್ದು ನಂತರ ಚಿಕ್ಕಮಗಳೂರು, ಹಾಸನ ಸೇರಿದಂತೆ ಇನ್ನಿತರ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಹೋರಾಟವನ್ನು ಕೈಗೆತ್ತಿಕೊಳ್ಳಲು ಮನವಿ ಮಾಡಲಾಗುವುದು ಎಂದು ಸಭೆಗೆ ಮನು ಸೋಮಯ್ಯ ಮಾಹಿತಿ ಒದಗಿಸಿದರು. ಸಭೆಯಲ್ಲಿದ್ದ ಬೆಳೆಗಾರರು ಹಾಗೂ ರೈತರು ಇದಕ್ಕೆ ಒಪ್ಪಿಗೆ ಸೂಚಿಸುವ ಮೂಲಕ ಮುಂದಿನ ಹೋರಾಟದ ಬಗ್ಗೆ ಬೆಂಬಲ ವ್ಯಕ್ತಪಡಿಸಿದರು.
ಸಭೆಯಲ್ಲಿದ್ದ ಹಿರಿಯ ಬೆಳೆಗಾರರು ಪ್ರಸ್ತಾಪಿಸಿ ತಾವುಗಳು ಬೆಳೆಯುವ ಕಾಫಿಯನ್ನು ಮುಂಗಡವಾಗಿ ವ್ಯಾಪಾರಿಗಳಿಗೆ ನೀಡುತ್ತಿರುವುದರಿಂದ ದರ ನಿಗದಿಯಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ಯಾವುದೇ ರೈತರು ಹಾಗೂ ಬೆಳೆಗಾರರು ಇನ್ನು ಮುಂದೆ ಮುಂಗಡವಾಗಿ ವ್ಯಾಪಾರಿಗಳಿಗೆ ಕಾಫಿಯನ್ನು ನೀಡಬಾರದು. ತಮ್ಮ ಸುಪರ್ದಿಯಲ್ಲಿಯೇ ಕಾಫಿಯನ್ನು ಗೋಡೌನ್‌ನಲ್ಲಿ ದಾಸ್ತಾನು ಇಟ್ಟುಕೊಳ್ಳಬೇಕು. ಇದರಿಂದ ತಮಗೆ ಬೇಕಾದ ಸಂದರ್ಭದಲ್ಲಿ ಉತ್ತಮ ಬೆಲೆ ಲಭಿಸುವ ವೇಳೆ ಮಾರಾಟ ಮಾಡಿಕೊಳ್ಳಬಹುದು. ಇದರಿಂದ ವ್ಯಾಪಾರಿಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ಮಂಡಿಸಿದರು.
ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಕಾಫಿಗೆ ಉತ್ತಮ ಬೆಲೆ ಇದ್ದರೂ ಸ್ಥಳೀಯ ಮಟ್ಟದಲ್ಲಿ ಬೆಳೆಗಾರರಿಗೆ ಉತ್ತಮ ದರ ಸಿಗದಿರುವುದು ಆತಂಕಕಾರಿ ಬೆಳವಣಿಗೆ. ಕೊಡಗಿನಲ್ಲಿ ಹೆಚ್ಚಾಗಿ ಕಾಫಿಯನ್ನು ಉತ್ಪಾದನೆ ಮಾಡಲಾಗುತ್ತಿದೆ. ದರ ನಿಗದಿಗೆ ಕೊಡಗು ಬಂದ್‌ಗೆ ಕರೆ ನೀಡುವುದರಿಂದ ಪ್ರಯೋಜನವಿಲ್ಲ. ರಾಷ್ಟಿçÃಯ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನ ಜಿಲ್ಲೆಯಿಂದ ಆರಂಭವಾಗಲಿ, ರೈತರೆಲ್ಲರೂ ಈ ವಿಚಾರದಲ್ಲಿ ಕೈ ಜೋಡಿಸುವಂತೆ ಸಲಹೆ ನೀಡಿದರು.
ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಮಾತನಾಡಿ ಮಧ್ಯವರ್ತಿಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಬೆಳೆಗಾರರ ಹೋರಾಟಕ್ಕೆ ಚೇಂಬರ್ ಆಫ್ ಕಾಮರ್ಸ್ ಬೆಂಬಲ ನೀಡಲು ಬಯಸುತ್ತದೆ ಎಂದರು.
ರೈತ ಸಂಘದ ತಿತಿಮತಿ ಘಟಕದ ಅಧ್ಯಕ್ಷ ಚೆಪ್ಪುಡೀರ ಕಾರ್ಯಪ್ಪ ಮಾತನಾಡಿ, ಬೆಳೆಗಾರರಿಗೆ ಉತ್ತಮ ಬೆಲೆ ಸಿಗಬೇಕೆಂದರೆ ಹೋರಾಟದಲ್ಲಿ ಕೈ ಜೋಡಿಸಬೇಕು. ಯಾರೋ ಮಾಡುವ ಹೋರಾಟದಿಂದ ನಮಗೆ ಲಾಭವಾಗುತ್ತದೆ ಎಂಬ ಮನಸ್ಥಿತಿಯಿಂದ ಹೊರ ಬರಬೇಕು. ಇದರಿಂದ ಮಾತ್ರ ನ್ಯಾಯಯುತ ಹೋರಾಟ ನಡೆಯಲಿದೆ. ಮುಂದೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ವೇದಿಕೆಯಲ್ಲಿ ರೈತ ಸಂಘದ ಕೊಡಗು ಜಿಲ್ಲಾ ಸಂಚಾಲಕರಾದ ಪುಚ್ಚಿಮಾಡ ಸುಭಾಶ್, ಕೊಡಗು ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಸ್.ಎಸ್. ಸುರೇಶ್, ನಾಗರಿಕ ವೇದಿಕೆಯ ಪ್ರಮುಖ ತಾಣಚ್ಚಿರ ಪೂಣಚ್ಚ, ರೈತ ಸಂಘದ ಕಾನೂನು ಸಲಹೆಗಾರರಾದ ವಕೀಲ ಹೇಮಚಂದ್ರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೈತ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಜಿಲ್ಲಾ ಖಜಾಂಜಿ ಇಟ್ಟಿರ ಸಬಿತ ಭೀಮಯ್ಯ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಂಬ ಕಾರ್ಯಪ್ಪ, ವಿವಿಧ ಹೋಬಳಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು, ವಿವಿಧ ಸಂಘ ಸಂಸ್ಥೆಯ ಪ್ರಮುಖರು ಪಾಲ್ಗೊಂಡಿದ್ದರು.