ಮಡಿಕೇರಿ, ಆ. ೩೦: ಸರಕಾರಿ ಕಚೇರಿಗಳಲ್ಲಿ ಸರ್ಕಾರಿ ನೌಕರರು ನ್ಯಾಯಯುತವಾಗಿ ಮಾಡಬೇಕಾದ ಸಾರ್ವಜನಿಕ ಕೆಲಸಕ್ಕೆ ಲಂಚದ ಹಣಕ್ಕಾಗಿ ಒತ್ತಾಯಿಸುವುದು, ಲಂಚ ಪಡೆಯುವುದು, ಲಂಚದ ರೂಪದಲ್ಲಿ ಬೇರೆ ಪ್ರತಿಫಲ ಪಡೆಯುವುದು, ಸಾರ್ವಜನಿಕ ಹುದ್ದೆಯನ್ನು ಬಳಸಿಕೊಂಡು ಬೇರೆ ರೀತಿಯ ಅವ್ಯವಹಾರಗಳನ್ನು ಮಾಡುವ ಬಗ್ಗೆ ಸಾರ್ವಜನಿಕ ದೂರುಗಳಿದ್ದಲ್ಲಿ ಕರ್ನಾಟಕ ಲೋಕಾಯುಕ್ತ ಕಚೇರಿಗೆ ಲಿಖಿತ ದೂರಿನೊಂದಿಗೆ ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾ ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕÀ ದಿನಕರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಡಿಕೇರಿ ಗೌಳಿಬೀದಿಯ ಪದ್ಮಶ್ರೀ ಕಾಂಪ್ಲೆಕ್ಸ್ನಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸುತ್ತಿದ್ದು, ಕಚೇರಿಯ ದೂರವಾಣಿ ಸಂಪರ್ಕ ಅಥವಾ ಇ-ಮೇಲ್ ಮೂಲಕ ದೂರನ್ನು ನೀಡಬಹುದು.
ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಅನಗತ್ಯ ವಿಳಂಬ, ಸರಕಾರಿ ಹಣದ ದುರುಪಯೋಗ ಕಳಪೆ ಕಾಮಗಾರಿ ಸಾರ್ವಜನಿಕ ನೌಕರರ ಅಕ್ರಮ ಆಸ್ತಿಗಳಿಕೆ ಬಗ್ಗೆ ಹಾಗೂ ಇತರ ಯಾವುದೇ ರೀತಿಯ ಭ್ರಷ್ಟಾಚಾರದ ದೂರುಗಳು ಇದ್ದಲ್ಲಿ ಕಚೇರಿಗೆ ಸಂಪರ್ಕಿಸಬಹುದು. ಪೊಲೀಸ್ ಉಪಅಧೀಕ್ಷಕ ಸಂಖ್ಯೆ ೯೩೬೪೦೬೨೫೭೮, ನಿರೀಕ್ಷಕರು ೯೩೬೪೦೬೨೬೮೭ ಅಥವಾ ಸ್ಥಿರ ದೂರವಾಣಿ ೦೮೨೭೨೨೯೫೨೯೭ emಚಿiಟ ಞಟಚಿ-ಜಥಿsಠಿmeಡಿ-ಞಚಿ@ಟಿiಛಿ.iಟಿ ಸಂಪರ್ಕಿಸುವAತೆ ಕೋರಿದ್ದಾರೆ.