ಗೋಣಿಕೊಪ್ಪ ವರದಿ, ಆ. ೩೦: ಚಿರಿಯಪಂಡ ಕುಟುಂಬದಿAದ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಕೊಡವ ಕೌಟುಂಬಿಕ ಚಿರಿಯಪಂಡ ವಾಲಿಬಾಲ್, ಥ್ರೋಬಾಲ್ ಕಪ್‌ಗೆ ತಂಡಗಳಿAದ ಉತ್ತಮ ಸ್ಪಂದನ ಸಿಕ್ಕಿದೆ ಎಂದು ಚಿರಿಯಪಂಡ ಕಪ್ ಟೂರ್ನಿ ಉಪಾಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಹೇಳಿದರು.

ಅಕ್ಟೋಬರ್ ೨ ರಿಂದ ೫ ರ ವರೆಗೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ನಡೆಯಲಿದೆ. ಈಗಾಗಲೇ ೮೦ ತಂಡಗಳು ನೋಂದಾಯಿಸಿಕೊAಡಿವೆ ಎಂದು ಈ ಕುರಿತು ನಡೆದ ಸಭೆಯಲ್ಲಿ ತಿಳಿಸಿದರು.

ಮಲ್ಲಮಾಡ ಕುಟುಂಬ ಮೊದಲ ಬಾರಿಗೆ ಕೊಡವ ವಾಲಿಬಾಲ್ ಕಪ್ ಆಯೋಜಿಸಿ ಯಶಸ್ವಿಯಾಗಿದೆ. ಚಿರಿಯಪಂಡ ಕುಟುಂಬ ವಾಲಿಬಾಲ್ ಮತ್ತು ಥ್ರೋಬಾಲ್ ಆಟದ ಮೂಲಕ ಕ್ರೀಡೆಗೆ ಒತ್ತಾಸೆ ನೀಡುತ್ತಿದೆ ಎಂದು ಅವರು ಹೇಳಿದರು.

ಕಾರ್ಯದರ್ಶಿ ಪವನ್ ಬಿದ್ದಪ್ಪ ಮಾತನಾಡಿ, ಮಹಿಳೆಯರಿಗೆ ಥ್ರೋಬಾಲ್ ಕ್ರೀಡೆಗೆ ಮೊದಲ ಬಾರಿಗೆ ಅವಕಾಶ ಮಾಡಿಕೊಡಲಾಗಿದೆ. ಹೆಚ್ಚು ಕೊಡವ ತಂಡಗಳು ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರ. ಸೆಪ್ಟೆಂಬರ್ ೧೦ ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು. ಪುರುಷರು ಮತ್ತು ಮಹಿಳೆಯರು ಪ್ರತ್ಯೇಕವಾಗಿ ಪಂದ್ಯಾಟದಲ್ಲಿ ಭಾಗವಹಿಸಲಿದೆ. ಕ್ರೀಡಾ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈಗಾಗಲೇ ಸಾಕಷ್ಟು ತಂಡಗಳು ನೋಂದಾಯಿಸಿಕೊAಡಿದ್ದು, ಆಸಕ್ತ ತಂಡಗಳು ಕೂಡಲೇ ಹೆಸರು ನೋಂದಾಯಿಸಿ ಸಹಕರಿಸಬೇಕಿದೆ. ಕ್ರೀಡೆ, ಸ್ಪರ್ಧಾತ್ಮಕತೆ, ಉತ್ಸಾಹ ಮತ್ತು ಸಮುದಾಯ ಬಾಂಧವ್ಯಕ್ಕೆ ಕುಟುಂಬ ಅವಕಾಶ ಕಲ್ಪಿಸುತ್ತಿದೆ. ಕೊಡವ ಸಮುದಾಯದ ಏಕತೆ, ಕ್ರೀಡಾ ಪರಂಪರೆ ಹಾಗೂ ಶ್ರೇಷ್ಠತೆಯ ಸಂಕೇತವಾಗಿ ಚಿರಿಯಪಂಡ ಕಪ್ ದಾಖಲೆ ಸೃಷ್ಟಿಸಲಿದೆ ಎಂದರು.

ಚಿರಿಯಪಂಡ ಕುಟುಂಬ ಕ್ರೀಡಾ ಅಧ್ಯಕ್ಷ ಪಟ್ಟು ಸೋಮಯ್ಯ, ಕಾರ್ಯದರ್ಶಿ ಸಿ. ಎಂ. ದೇವಯ್ಯ, ಚಿರಿಯಪಂಡ ವಾಲಿಬಾಲ್, ಥ್ರೋಬಾಲ್ ಕಪ್ ಅಧ್ಯಕ್ಷ ರಾಕೇಶ್ ಪೂವಯ್ಯ, ನಿರ್ದೇಶಕ ಸುಧಾ ಚಂಗಪ್ಪ ಮಾಹಿತಿ ನೀಡಿದರು.