ಸೋಮವಾರಪೇಟೆ, ಆ.೨೯: ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿ ಸಹಿತ ವಾಹನ, ಗಾಂಜಾವನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಟ್ಟಣ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ ಆಲೇಕಟ್ಟೆ ರಸ್ತೆ ನಿವಾಸಿ ಬಶೀರ್ ಎಂಬಾತನ ಪುತ್ರ ರಮೀಜ್ ಎಂಬಾತನನ್ನು ಮಾಲು ಸಹಿತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರಪೇಟೆ ಪೊಲೀಸ್ ಠಾಣೆಯ ಪಿ.ಐ. ಮುದ್ದು ಮಾದೇವ ಅವರ ನೇತೃತ್ವದಲ್ಲಿ ಪಿ.ಎಸ್.ಐ. ಗೋಪಾಲ್ ಮತ್ತು ಸಿಬ್ಬಂದಿಗಳಾದ ಅನಂತ್, ಶರತ್, ಪ್ರವೀಣ್, ಸಾಜನ್, ಲೋಕೇಶ್ ,ಚನ್ನವೀರ

ಲೀಲಾಂಬಿಕೆ ಅವರ ತಂಡವು ಸೋಮವಾರಪೇಟೆ ಹಾನಗಲ್ಲು ರಸ್ತೆಯ ಜಾನಕಿ ಕನ್ವೆನ್ಷನ್ ಹಾಲ್ ಬಳಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ಇಟ್ಟುಕೊಂಡಿದ್ದ ರಮೀಜ್ ನನ್ನು ವಶಕ್ಕೆ ಪಡೆದಿದ್ದಾರೆ.