ಮಡಿಕೇರಿ, ಆ.೨೮ : ಕೊಡವರ ಬಾಹುಳ್ಯದ ಮೂಲ ನೆಲೆಯಾದ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯ ಸಂಕೋಲೆಗಳಾದ ಮರೆನಾಡಿನಿಂದ ಸೂರ್ಲಬ್ಬಿನಾಡ್‌ವರೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಗಳಿಗೆ ಆಶ್ರಯ ಕಲ್ಪಿಸಲು ಷಡ್ಯಂತ್ರ ನಡೆದಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಆರೋಪಿಸಿದ್ದಾರೆ.

ರಾಷ್ಟಿçÃಯ ಜನಗಣತಿ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಅನ್ನು ಸೇರಿಸಬೇಕೆಂದು ಒತ್ತಾಯಿಸಿ ವೀರಾಜಪೇಟೆಯಲ್ಲಿ ಸಿಎನ್‌ಸಿ ವತಿಯಿಂದ ನಡೆದ ೧೧ನೇ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕ್ರಮ ವಲಸಿಗರಿಗೆ ಆಶ್ರಯ ಕಲ್ಪಿಸುವ ಏಕೈಕ ಉದ್ದೇಶದಿಂದ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಲಾಗುತ್ತಿದ್ದು, ದೊಡ್ಡ ಜಾಲವೊಂದು ಕಾರ್ಯಾ ಚರಿಸುತ್ತಿದೆ. ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಗಳು ಕಾನೂನು ಬಾಹಿರವಾಗಿ ಕೊಡವ ಲ್ಯಾಂಡ್‌ನಲ್ಲಿ ಆಶ್ರಯ ಪಡೆದು ತಮ್ಮ ಇರುವಿಕೆಯನ್ನು ಸಕ್ರಮಗೊಳಿಸಿಕೊಳ್ಳಲು ಮುಂದಾಗಿರುವುದು, ಸರಕಾರಿ ಯಂತ್ರಗಳು ಆಶ್ರಯ ನೀಡಲು ಹವಣಿಸುತ್ತಿರುವುದು ಮತ್ತು ದೊಡ್ಡ ದೊಡ್ಡ ಕಂಪೆನಿಗಳು ಬೆಂಬಲಕ್ಕೆ ನಿಂತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ನಕಲಿ ಆಧಾರ್ ಮತ್ತು ಐಡಿ ಕಾರ್ಡ್ ನೀಡುವ ಜಾಲ ಕಳೆದ ಎರಡು ವರ್ಷಗಳಿಂದ ಚಟುವಟಿಕೆಯಿಂದ ಇದ್ದು, ಈ ನಕಲಿ ಆಧಾರ್ ಕಾರ್ಡ್ನ್ನೇ ಬಳಸಿ ಅಕ್ರಮ ವಲಸಿಗರು ಕೊಡಗು ಮಾತ್ರವಲ್ಲದೆ ಹೊರ ಭಾಗದಲ್ಲೂ ತೋಟದ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕೊಡವ ಲ್ಯಾಂಡ್‌ನ ಪ್ರತೀ ಗ್ರಾಮಗಳಲ್ಲಿ ಅವರದ್ದೇ ಆದ ಮಾರುಕಟ್ಟೆ, ಮನಿಚೈನ್, ಬಡ್ಡಿದಂಧೆ, ಗೋವು ಕಳ್ಳತನ, ಹಲ್ಲೆ, ಸುಲಿಗೆ, ಕಾಫಿ, ಕಾಳು ಮೆಣಸು ಕಳ್ಳತನ, ಕಳ್ಳಬೇಟೆ, ಅಕ್ರಮವಾಗಿ ಕಾವೇರಿ ನದಿಯಿಂದ ವಿದ್ಯುತ್ ತಂತಿ ಬಳಸಿ ಮೀನು ಹಿಡಿಯುವುದು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಕೆಲವು ರಾಜಕಾರಣಿಗಳು ಅಕ್ರಮ ವಲಸಿಗರ ಮಾಹಿತಿ ಕಲೆಹಾಕಿ ಅವರನ್ನೆಲ್ಲ ಮತದಾರರ ಪಟ್ಟಿಯಲ್ಲಿ ಸೇರಿಸಿ ನಿವೇಶನ ಮತ್ತು ವಸತಿ ನೀಡುವ ಭರವಸೆ ನೀಡುತ್ತಿದ್ದು, ಇದಕ್ಕೆ ಆಡಳಿತ ಯಂತ್ರ ಬೆಂಬಲ ನೀಡುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.

ಮುಕ್ಕೋಡ್ಲುವಿನ ಆದಿಮ ಸಂಜಾತ ವೃದ್ಧ ದಂಪತಿಗಳಾದ ಕಾಳಚಂಡ ನಾಣಿಯಪ್ಪ ಅವರ ತೋಟವನ್ನು ನಾಶ ಮಾಡಿ ಅವಮಾನಿಸಿರುವುದು ಅಮಾನ ವೀಯ ಕೃತ್ಯ ಮತ್ತು ಕ್ರೂರ ವ್ಯಂಗ್ಯವಾಗಿದೆ. ಮೂಲ ನಿವಾಸಿ ಕೊಡವರನ್ನು ಅವರ ಪ್ರಾಚೀನ ನೆಲೆಯಿಂದ ಪಲ್ಲಟಗೊಳಿಸಿ ಖಾಲಿಯಾದ ಆ ಪ್ರದೇಶದಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿ ಓಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವ ಹುನ್ನಾರ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊಡವ ನೆಲದ ನಿಜ ವಾರಸುದಾರರಾದ ಆದಿಮ ಸಂಜಾತ ಕೊಡವರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ಬಾಂಗ್ಲಾ ಮತ್ತು ಮಾಯನ್ಮಾರ್‌ನ ರಾಖಿನೆ ಪ್ರಾಂತ್ಯದ ರೋಹಿಂಗ್ಯಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಸಂಚು ನಡೆದಿದೆ ಎಂದು ಆರೋಪಿಸಿದರು.

ಸುಮಾರು ೧ ಲಕ್ಷ ವಿದೇಶಿಯರು ಅಕ್ರಮವಾಗಿ ಕೊಡವ ಭೂಮಿಯಲ್ಲಿ ನೆಲೆಸಿದ್ದಾರೆ ಎನ್ನುವ ಮಾಹಿತಿ ಇದೆ. ದೊಡ್ಡ ದೊಡ್ಡ ಕಂಪೆನಿ ತೋಟಗಳು ಇದರಲ್ಲಿ ಶಾಮೀಲಾಗಿದ್ದು, ಅವರನ್ನು ಸಂಪರ್ಕಿಸಿರುವ ಆಡಳಿತಾಂಗ ಸಮೃದ್ಧ ಗ್ಯಾರಂಟಿ ಮತಬ್ಯಾಂಕ್ ನಿರ್ಮಿಸಲು ಕಾರಸ್ಥಾನ ರೂಪಿಸಿದೆ. ಇದು ಕೊಡವ ನೆಲದ ಜನಸಂಖ್ಯೆ ಪಲ್ಲಟ ಮತ್ತು ಜನಸಂಖ್ಯಾ ದುರಾಕ್ರಮಣಕ್ಕೆ ಕಾರಣವಾಗಿ ರಾಷ್ಟಿçÃಯ ಭದ್ರತೆಗೆ ಸವಾಲಾಗಲಿದೆ. ಈ ವಿಪತ್ತಿನಿಂದ ಹೊರ ಬರಬೇಕಾದರೆ ಆದಿಮ ಸಂಜಾತ ಅಖಂಡ ದೇಶ ಪ್ರೇಮಿ ಕೊಡವರ ಹಕ್ಕು ರಕ್ಷಣೆಯಾಗಬೇಕು. ಆ ಹಕ್ಕು ರಕ್ಷಣೆಯ ಖಾತರಿ ಯಾಗಬೇಕಾದರೆ ಕೊಡವರ ಜನಸಂಖ್ಯಾ ಮಾಹಿತಿಯ ಅನನ್ಯತೆ, ಅದಕ್ಕೆ ಪೂರಕವಾದ “ಕೋಡ್ ಮತ್ತು ಕಲಂ” ಅನ್ನು ೨೦೨೬ರ ರಾಷ್ಟಿçÃಯ ಜನಗಣತಿಯಲ್ಲಿ ಜಾತಿವಾರು ಮಾಹಿತಿ ಕಲೆ ಹಾಕುವ ಸಂದರ್ಭ ಸ್ಪಷ್ಟವಾಗಿ ದಾಖಲಿಸಲ್ಪಡಬೇಕೆಂದು ಎನ್.ಯು.ನಾಚಪ್ಪ ಹೇಳಿದರು.೨೦೧೮ರಲ್ಲಿ ಕೊಡವಲ್ಯಾಂಡ್ ನಲ್ಲಿ ವ್ಯಾಪಕ ಜಲಸ್ಫೋಟ ಮತ್ತು ಭೂಸ್ಫೋಟ ಸಂಭವಿಸಿ ಸಾವು ನೋವು, ಕಷ್ಟನಷ್ಟಗಳು ಎದುರಾಗಿದ್ದರೂ ಜಿಲ್ಲಾಡಳಿತ ಎಗ್ಗಿಲ್ಲದೆ ಭೂಪರಿವರ್ತನೆಗೆ ಅವಕಾಶ ನೀಡುತ್ತಿದೆ. ಹೊರಗಿನ ಬಂಡವಾಳಶಾಹಿಗಳು ಕÀÀಪ್ಪುಹಣ ವನ್ನು ಬಳಸಿ ಭೂಖರೀದಿಯಲ್ಲಿ ತೊಡಗಿದ್ದಾರೆ. ದೊಡ್ಡ ದೊಡ್ಡ ರೆಸಾರ್ಟ್ಗಳು ತಲೆ ಎತ್ತುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತವೇ ಎದುರಾಗುವ ಸಾಧ್ಯತೆಗಳಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.

ಆದಿಮಸಂಜಾತ ಕೊಡವರಿಗೆ ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯೊಂದಿಗೆ ಸ್ವಯಂ ಆಡಳಿತ ಮತ್ತು ಆಂತರಿಕ ಸ್ವಯಂನಿರ್ಣಯದ ಹಕ್ಕನ್ನು ಖಾತ್ರಿ ಪಡಿಸುವುದರಿಂದ ಈ ರೀತಿಯ ಅಕ್ರಮ ಮತ್ತು ಅನಾಹುತಗಳನ್ನು ತಡೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದವರು ಸೂರ್ಯ-ಚಂದ್ರ, ಭೂದೇವಿ, ಪ್ರಕೃತಿ ದೇವಿ, ಜಲದೇವಿ, ವನದೇವಿ, ಸಂವಿಧಾನ, ಗುರು ಕಾರೋಣ ಹೆಸರಿನಲ್ಲಿ ಸಿಎನ್‌ಸಿಯ ಕೊಡವಲ್ಯಾಂಡ್ ಹೋರಾಟದೊಂದಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಸ್ವೀಕರಿಸಿದರು. ರಾಷ್ಟçಗೀತೆ ಜನ-ಗಣ-ಮನದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.

ಕೊಡವ ಲ್ಯಾಂಡ್ ಗೆ ಹಾಗೂ ಕೊಡವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಇಲ್ಲಿಯವರೆಗೆÀ ಬಿರುನಾಣಿ, ಕಡಂಗ, ಟಿ.ಶೆಟ್ಟಿಗೇರಿ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ನಾಪೋಕ್ಲು, ಮಾದಾಪುರ, ಸುಂಟಿ ಕೊಪ್ಪ ಮತ್ತು ಸಿದ್ದಾಪುರದಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಶಾಂತಿಯುತ ವಾಗಿ ನಡೆಸಿ ಜನಜಾಗೃತಿ ಮೂಡಿಸಲಾಗಿದೆ. ಸೆ.೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಗೋಣಿಕೊಪ್ಪಲಿನಲ್ಲಿ ೧೨ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು. ನಾಚಪ್ಪ ಇದೇ ಸಂದರ್ಭ ತಿಳಿಸಿದರು. ಬಿದ್ದಂಡ ಉಷಾ ದೇವಮ್ಮ, ಮುದ್ದಿಯಡ ಲೀಲಾವತಿ, ಬೊಳ್ಳಂಡ ಸೌಮ್ಯಾ ಪೂವಯ್ಯ, ಪಾಂಡAಡ ಗೊಂಬೆ ಪ್ರಕಾಶ್, ಕೋಳೆರ ಟೀನ ರನ್ನ, ಪಾಲಂದೀರ ಗಂಗಮ್ಮ, ದೇಯಂಡ ಶಾಂತಿ, ನೆಲ್ಲಮಕ್ಕಡ ಕಾವೇರಮ್ಮ, ಮುಂಡAಡ ಲವ್ಲಿ, ಕರಿನೆರವಂಡ ಬೋಜಿ ಭೀಮಯ್ಯ, ಕರಿನೆರವಂಡ ಶಾಂತಿ, ಬಿದ್ದಂಡ ತಿಲಕ, ಬಿದ್ದಂಡ ಸುರಕ್ಷಿತಾ, ಕರಿನೆರವಂಡ ಜಯ, ಚಿಲ್ಲವಂಡ ರೇಖಾ ಹರೀಶ್, ಕೂತಂಡ ಅಕ್ಷಿತಾ ಲೋಕೇಶ್, ಪಾಂಡAಡ ರಾಧಾ ದೇವಯ್ಯ, ಬೊಳ್ಳಚೆಟ್ಟಿರ ಯಮುನಾ ಪೂವಯ್ಯ, ಕಾಳೆಂಗಡ ರಮೇಶ್, ಮಾಚೆಟ್ಟಿರ ಚೋಟು ಕಾವೇರಪ್ಪ, ಮಾಳೇಟಿರ ಶ್ರೀನಿವಾಸ್, ಪಟ್ಟಡ ಚರ್ಮಣ, ನಿವೃತ್ತ ಎಸಿಎಫ್ ಮುಕ್ಕಾಟಿರ ಅಚ್ಚಪ್ಪ, ಲೆಫ್ಟಿನೆಂಟ್ ಕರ್ನಲ್ ಕರ್ತಮಾಡ ದೇವಯ್ಯ, ಕೊಳೆರ ರನ್ನ, ಬಯವಂಡ ಬೊಳ್ಳಿಯಪ್ಪ, ಕೋಳೇರ ರಜತ್, ಕೋಳೇರ ರತನ್, ಪಾಂಡAಡ ಪ್ರಕಾಶ್, ಬೊಳ್ಳಂಡ ಪೂವಯ್ಯ, ಮುಕ್ಕಾಟಿರ ಅಯ್ಯಪ್ಪ, ಬಲ್ಲಟ್ಟಿಕಾಳಂಡ ಮಂದಣ್ಣ, ಚಂಗAಡ ಚಾಮಿ, ಬೊಳ್ಳಚಂಡ ಮಂದಣ್ಣ, ಕೋಡಿರ ತಮ್ಮಯ್ಯ, ಅಲ್ಮಚಂಡ ಗಣಪತಿ, ಕುಲ್ಲಚಂಡ ಜಯ, ಮೇರಿಯಂಡ ಅರಸು, ಐಚೆಟ್ಟಿರ ರಂಜಿ ಕುಟ್ಟಯ್ಯ, ಐಚೆಟ್ಟಿರ ರೊಮೆಲ್, ಬಲ್ಯಂಡ ಮುತ್ತಪ್ಪ, ಮಾಳೆಯಂಡ ಹರಿ, ಬಟ್ಟಿಯಂಡ ಜಾಲು ಭೀಮಯ್ಯ, ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ, ಬಲ್ಲಚಂಡ ಸಂಪತ್, ಪಟ್ಟಚೆರವಂಡ ಹರಿ, ಮೇಕತಂಡ ಕುಶ ಬೋಪಯ್ಯ, ಕಾಣತಂಡ ಪೂವಯ್ಯ, ಮುಂಡAಡ ಪಳಂಗಪ್ಪ, ಕಳ್ಳೀರ ಉತ್ಸವ, ಚೇಂದ್ರಿಮಾಡ ಗಣೇಶ್, ಕರಿನೆರವಂಡ ಜಯ, ಕರಿನೆರವಂಡ ಧರಣು ತಮ್ಮಯ್ಯ, ಮಂಡೇಪAಡ ರಿಶು, ಪುಟ್ಟಿಚಂಡ ಡಾನ್ ದೇವಯ್ಯ, ಚಂಬAಡ ಜನತ್, ಬೇಪಡಿಯಂಡ ಬಿದ್ದಪ್ಪ, ಕಾಂಡೇರ ಸುರೇಶ್, ಅಜ್ಜಿಕುಟ್ಟಿರ ಲೋಕೇಶ್, ಬೇಪಡಿಯಂಡ ದಿನು, ಅರೆಯಡ ಗಿರೀಶ್, ಪಾರ್ವಂಗಡ ನವೀನ್, ಚೆಂಬAಡ ಜಾಗೃತ ಬಿದ್ದಪ್ಪ, ಪೋರ್ಕಂಡ ಬೋಪಣ್ಣ, ಮಾದೆಯಂಡ ಹ್ಯಾರಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.