ವೀರಾಜಪೇಟೆ, ಆ. ೨೯: ಕೊಡವ ಅಸೋಸಿಯೇಷನ್ ಚೆಂಬೆಬೆಳ್ಳೂರು ಇವರ ವತಿಯಿಂದ ಕೈಲ್ಪೊಳ್ದ್ ಹಬ್ಬದ ಪ್ರಯುಕ್ತ ಸೆ. ೩ ರಂದು ಪೂರ್ವಾಹ್ನ ೮ ಗಂಟೆಗೆ ಕೊಡವ ಅಸೋಸಿಯೇಷನ್ ಆವರಣದಲ್ಲಿ ತೆಂಗಿನಕಾಯಿಗರ ಗುಂಡು ಹೊಡೆಯುವ ಕಾರ್ಯಕ್ರಮ ಸೇರಿದಂತೆ ಮಹನಿವಾರಿಗೆ ಮತ್ತು ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ಕಾರ್ಯದರ್ಶಿ ಮಚ್ಚಮಾಡ ರವಿ ಅಪ್ಪಣ್ಣ ತಿಳಿಸಿದರು.
ನಂತರ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜ್ಜಿನಿಕಂಡ ಸುಧೀರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡವ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಚಾರಿಮಂಡ ಬಾನು ಬೋಪಣ್ಣ, ಕಾಫಿ ಬೆಳೆಗಾರ ಕೊಳುವಂಡ ಸಂಪತ್, ವೀರಾಜಪೇಟೆ ತಾಲೂಕು ಬಹರ್ಹುಕುಂ ಸದಸ್ಯೆ ಕೋಳೆರ ಟೀನಾ ದೇವಯ್ಯ ಉಪಸ್ಥಿತಲಿರುವರು ಎಂದು ಮಾಹಿತಿ