ಮಡಿಕೇರಿ, ಆ.೨೮: ವಿಘ್ನ ನಿವಾರಕ., ಬೇಡಿದ ವರ ಕೊಡುವ., ಪಾಪನಾಶಕ ಎಂದೆಲ್ಲ ಕರೆಯಲ್ಪಡುವ ಆದಿಪೂಜಿತ ಶ್ರೀ ವಿನಾಯಕನನ್ನು ನಾಡಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಯಿತು. ಅದಿ ದೇವತೆಗಳಲ್ಲಿ ಅಗ್ರಗಣ್ಯನಾಗಿರುವ ಗಣಪತಿಗೆ ಬಾದ್ರಪದ ಚೌತಿಯಂದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. ಗಣಪತಿ ದೇವಾಲಯ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನೆರವೇರಿದರೆ., ವಿವಿಧೆಡೆಗಳಲ್ಲಿ ಸಂಘ ಸಂಸ್ಥೆಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣಪತಿ ಹೋಮದೊಂದಿಗೆ ಪೂಜೆ ಸಲ್ಲಿಸಲಾಯಿತು. ಬಹುತೇಕ ಕಡೆಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವದರೊಂದಿಗೆ ಮನರಂಜನೆ ನೀಡಲಾಯಿತಲ್ಲದೆ, ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸುರಿಯತ್ತಿದ್ದ ಮಳೆಯ ನಡುವೆಯೂ ಗಣಪನ ಆರಾಧನೆ ಯಾವದೇ ವಿಘ್ನವಿಲ್ಲದಂತೆ ನೆರವೇರಿತು.

ಕೋಟೆ ಗಣಪತಿ

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಕೋಟೆ ಮಹಾ ಗಣಪತಿ ದೇವಾಲಯದಲ್ಲಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ದೇವಾಲಯವನ್ನು ಹೂವುಗಳಿಂದ ಅಲಂಕರಿಸಿ ಭಕ್ತರಿಗೆ ಪೂಜೆಯಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಸುರಿಯುವ ಮಳೆಯ ನಡುವೆಯೂ ಸರತಿ ಸಾಲಿನಲ್ಲಿ ನಿಂತು ಗಣಪನಿಗೆ ನಮಿಸಿ ಈಡುಗಾಯಿ ಒಡೆದು ತಮ್ಮ ಇಷ್ಟಾರ್ಥ ಪ್ರಾರ್ಥನೆ ಈಡೇರಿಸುವಂತೆ ಬೇಡಿಕೊಂಡರು. ದೇವಾಲಯದ ಅರ್ಚಕರಾದ ಮಂಜುನಾಥ ವೈದ್ಯ ಪೂಜಾ ವಿಧಿ ವಿಧಾನಗಳನ್ನು ಹಾಗೂ ೪ಆರನೇ ಪುಟಕ್ಕೆ (ಮೊದಲ ಪುಟದಿಂದ) ಸಂತೋಷ್ ಭಟ್ ಮತ್ತು ತಂಡದವರು ಹೋಮ ಹವನಾದಿ ಕಾರ್ಯಗಳನ್ನು ನೆರವೇರಿಸಿದರು. ದೇವಾಲಯ ವ್ಯಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಹಾಗೂ ಸದಸ್ಯರುಗಳು ವ್ಯವಸ್ಥೆಯ ಉಸ್ತುವಾರಿಯಲ್ಲಿದ್ದರು.

ವಿಜಯ ವಿನಾಯಕ

ಇಲ್ಲಿನ ವಿಜಯ ವಿನಾಯಕ ಬಡಾವಣೆಯಲ್ಲಿರುವ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿಯೂ ವಿನಾಯಕನಿಗೆ ವಿಶೇಷ ಪೂಜೆ ನಡೆಯಿತು. ದೇವಾಲಯ ಟ್ರಸ್ಟ್ ವತಿಯಿಂದ ಹೋಮ, ಹವನಾದಿ ಕಾರ್ಯಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗಣಪನಿಗೆ ವಂದಿಸಿ ತೀರ್ಥಪ್ರಸಾದ ಸ್ವೀಕರಿಸಿದರು. ದೇವಾಲಯದ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ನೇತೃತ್ವದ ಅರ್ಚಕರ ತಂಡದವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಇನ್ನುಳಿದಂತೆ ನಗರದ ಐತಿಹಾಸಿಕ ಹಿನ್ನೆಲೆಯ ಶ್ರೀ ಓಂಕಾರೇಶ್ವರ ದೇವಾಲಯ, ದೇಚೂರು ಶ್ರೀ ರಾಮ ವಿದ್ಯಾಗಣಪತಿ ದೇವಾಲಯ ಸೇರಿದಂತೆ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜಾದಿ ಕಾರ್ಯಗಳು ನೆರವೇರಿದವು.

ನಗರದ ಖಾಸಗಿ ಬಸ್ ನಿಲ್ದಾಣ, ಗೌಳಿ ಬೀದಿಯ ಹಿಂದೂ ಯುವಶಕ್ತಿ, ಶಾಂತಿನಿಕೇತನ ಯುವಕ ಸಂಘ, ಕಾನ್ವೆಂಟ್ ಜಂಕ್ಷನ್‌ನ ಶ್ರೀ ಮಹಾಗಣಪತಿ ಯುವಕ ಸಂಘ, ನಗರಸಭೆ, ಸೆಸ್ಕ್, ಕೋದಂಡ ರಾಮ ದೇವಾಲಯ, ಮಹದೇವಪೇಟೆ, ವಿದ್ಯಾನಗರ, ಅಶೊಕಪುರ, ಚೈನ್‌ಗೇಟ್ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ೩೭ ಕಡೆಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜಿಸಲಾಯಿತು. ಹಲವೆಡೆ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.ವೀರಾಜಪೇಟೆ: ವಿಘ್ನ-ವಿನಾಶಕನಾಗಿ ಭಕ್ತರ ಮನದಲ್ಲಿ ನೆಲೆಗೊಂಡಿರುವ ವೀರಾಜಪೇಟೆ ನಗರದ ಐತಿಹಾಸಿಕ ಗೌರಿ-ಗಣೇಶೋತ್ಸವ ಪ್ರತಿಷ್ಠಾಪನೆ ಬುಧವಾರ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಪ್ರತಿಷ್ಠಾಪನೆ ಅಂಗವಾಗಿ ವಿಶೇಷ ಪೂಜೆ ಹೋಮ ಜರುಗಿತು. ಬೆಳಿಗ್ಗೆ ಸಾಮೂಹಿಕ ಗಣ ಹೋಮ ನೆರವೇರಿತು. ಸಾವಿರಾರು ಹೂಗಳಿಂದ ಅಲಂಕೃತಗೊAಡ ಗಣಪತಿ ದೇವಸ್ಥಾನದಲ್ಲಿ ಅಸಂಖ್ಯಾತ ಭಕ್ತಾದಿಗಳು ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು.

ನಗರಕ್ಕೆ ಕಳಸ ಪ್ರಾಯದಂತಿರುವ ಶ್ರೀ ವiಹಾಗಣಪತಿ ದೇವಾಲಯದಲ್ಲಿ ಲಂಭೋದರನ ಉತ್ಸವ ಮೂರ್ತಿಯನ್ನು ಪ್ರತಿಪ್ಠಾಪಿಸಲಾಯಿತು. ಬಳಿಕ ಸಿಡಿಮದ್ದು ಸಿಡಿಸಿ ಉಳಿದ ಸಮಿತಿಗಳಿಗೆ ಮಾಹಿತಿ ತಿಳಿಸಲಾಯಿತು. ನಂತರದಲ್ಲಿ ಇತರ ೨೨ ಸ್ಥಳಗಳಲ್ಲಿ ಗಜಾನನ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಶಾಸ್ತೊçÃಕ್ತವಾಗಿ, ಸಂಪ್ರಾದಾಯಬದ್ದವಾಗಿ ನಡೆಯಿತು. ಇದೇ ವೇಳೆ ಗಣಪತಿ ದೇವಾಲಯದಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಭಜನೆ, ನೃತ್ಯ ಪ್ರದರ್ಶನ ನಡೆಯಿತು.

ಪಟ್ಟಣದ ಪ್ರಮುಖ ಗೌರಿ-ಗಣೇಶೋತ್ಸವ ಸಮಿತಿಗಳಾದ ಕಾವೇರಿ ಗಣೇಶೋತ್ಸವ ಸಮಿತಿ, ಮೂರ್ನಾಡು ರಸ್ತೆ, ಶ್ರೀ ವಿನಾಯಕ ಸೇವಾ ಸಮಿತಿ, ಪಂಜರ್‌ಪೇಟೆ, ಶ್ರೀ ಮಹಾ ಗಣಪತಿ ಸೇವಾ ಸಂಘ, ಗಣಪತಿ ಬೀದಿ, ಶ್ರೀಬಸವೇಶ್ವರ ದೇವಾಲಯ, ವiಹಾ ಗಣಪತಿ ದೇವಾಲಯ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಅರಸು ನಗರ, ವಿನಾಯಕ ಭಕ್ತ ಮಂಡಳಿ, ಅಂಗಾಳ ಪರಮೇಶ್ವರಿ ದೇವಸ್ಥಾನ, ನೇತಾಜಿ ಗಣೇಶೋತ್ಸವ ಸಮಿತಿ, ನೆಹರು ನಗರ, ವಿಜಯ ವಿನಾಯಕ ಉತ್ಸವ ಸಮಿತಿ, ದಖ್ಖನಿ ಮೊಹಲ್ಲ, ಕಣ್ಮಣಿ ಯುವಕ ಸಂW,À ಮಲೆತಿರಿಕೆ ಬೆಟ್ಟ, ಸರ್ವಸಿದ್ದಿ ವಿನಾಯಕ ಉತ್ಸವ ಸಮಿತಿ, ಸುಂಕದಕಟ್ಟೆ, ಶ್ರೀ ಗಣಪತಿ ಸೇವಾ ಸಮಿತಿ, ಗಾಂಧಿನಗರ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಕೆ.ಬೋಯಿಕೇರಿ, ಜಲದರ್ಶಿನಿ ಗಣೇಶೋತ್ಸವ ಸಮಿತಿ. ಚಿಕ್ಕಪೇಟೆ, ಗಣಪತಿ ಸೇವಾ ಸಮಿತಿ, ಪೌರಸೇವಾ ನೌಕರರ ಸಂಘ ಪಟ್ಟಣ ಪಂಚಾಯಿತಿ, ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ ಮೀನುಪೇಟೆ, ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಹರಿಕೆರೆ ಸುಣ್ಣದ ಬೀದಿ, ಶ್ರೀ ವಿನಾಯಕ ಯುವಕರ ಸಮಿತಿ ,ಕುಕ್ಲೂರು, ಶ್ರೀ ಬಾಲ ಆಂಜನೇಯ ಗಣಪತಿ ಸೇವ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆ, ಶ್ರೀ ಗೌರಿಕೆರೆ ಸೇವಾ ಸಮಿತಿ, ಹಾಗೂ ವಿನಾಯಕ ಸೇವಾ ಸಮಿತಿ ಶಿವಕೇರಿ ಸೇರಿದಂತೆ ನಗರದ ೨೨ ಸ್ಥಳಗಳಲ್ಲಿ ವಿಘ್ನವಿನಾಯಕನ ವಿವಿಧ ಭಂಗಿಗಳಲ್ಲಿರುವ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ನಗರದ ಆಯ್ದ ಸಮಿತಿಗಳ ವತಿಯಿಂದ ೧೧ ದಿನಗಳ ಕಾಲ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿದಿನ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ.

ಎಲ್ಲಾ ಸಮಿತಿಗಳ ಉತ್ಸವ ಮೂರ್ತಿಗಳನ್ನು ಸೆ.೬ ರಂದು ರಾತ್ರಿ ಅನಂತಪದ್ಮನಾಭ ವ್ರತದಂದು ವಿದ್ಯುತ್ ಅಲಂಕೃತ ಪಂಟಪದಲ್ಲಿ ಕುಳ್ಳಿರಿಸಿ ಶೋಭಾಯಾತ್ರೆಯ ಮೂಲಕ ಮುಖ್ಯ ಬೀದಿಗಾಗಿ ಸಾಗಿ ೭ ರ ಮುಂಜಾನೆ ಗೌರಿಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಗೌರಿ ಗಣೇಶ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಪಟ್ಟಣ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾ ಸೋಮವಾರಪೇಟೆ: ಮಳೆಯಿಂದಾಗಿ ಮನೆಗಳಿಗೆ ಹಾನಿಯಾಗಿರುವ ಸಂತ್ರಸ್ಥರು ತಾತ್ಕಾಲಿಕವಾಗಿ ಆಶ್ರಯ ಪಡೆದಿರುವ ಕಾಳಜಿ ಕೇಂದ್ರದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಗಣೇಶೋತ್ಸವ ಆಚರಿಸಿ ಗಮನ ಸೆಳೆದರು.

ಶಾಸಕರು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಮಾದಾಪುರ ಗ್ರಾಮ ಪಂಚಾಯಿತಿಯ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ಥರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದರು.

ನಂತರ ತಾವೇ ಖುದ್ದು ತೆರಳಿ ಸಂತ್ರಸ್ಥರಿಗೆ ಊಟ ಬಡಿಸಿ, ತಾವೂ ಸಹ ಅವರ ಜೊತೆಯಲ್ಲಿಯೇ ಊಟ ಮಾಡಿ ಧೈರ್ಯ ತುಂಬಿದರು. ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ಥರೊAದಿಗೆ ಹಬ್ಬ ಆಚರಿಸಿ ಶುಭ ಕೋರಿದರು. ಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು ೩೨ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸೇರಿದಂತೆ ಮಾದಾ ಪಟ್ಟಣ ಮತ್ತಿತರ ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯ ನಡೆಯಿತು. ಕುಶಾಲನಗರ ಪಟ್ಟಣದ ರಸ್ತೆ ಸಾರಿಗೆ ಸಂಸ್ಥೆ ಎದುರು ಭಾಗದಲ್ಲಿ ಕಾವೇರಿ ಆಟೋ ಚಾಲಕರ ಸಮಿತಿ, ಐಬಿ ರಸ್ತೆಯಲ್ಲಿ ಸೂರ್ಯ ವಿನಾಯಕ ಗೆಳೆಯರ ಬಳಗ, ಮಾರುಕಟ್ಟೆ ರಸ್ತೆಯ ನಾಗದೇವತ ಯುವಕ ಮಂಡಳಿ, ಶೈಲಜಾ ಬಡಾವಣೆ, ರಾಧಾಕೃಷ್ಣ ಬಡಾವಣೆ, ಬಾಪೂಜಿ ಬಡಾವಣೆ ನಿವಾಸಿಗಳ ಬಳಗ ವತಿಯಿಂದ ಗಣಪತಿ ಪ್ರತಿಷ್ಠಾಪಿಸಿ ಬಡಾವಣೆಯ ನಿವಾಸಿಗಳು ಪೂಜೆ ಸಲ್ಲಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ಪಟ್ಟಣದ ೩೨ ಮೂರ್ತಿಗಳಲ್ಲಿ ೭ ಗಣಪತಿ ಮೂರ್ತಿಗಳನ್ನು ಮೆರವಣಿಗೆ ಮೂಲಕ ತೆರಳಿ ವಿಸರ್ಜನೆ ಮಾಡಲಾಯಿತು. ಕುಶಾಲನಗರ ರಥಭೀದಿಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಸವಿ ಯುವಕ ಸಂಘ ವತಿಯಿಂದ ಆರ್ಯವೈಶ್ಯ ಮಂಡಳಿ ಸಹಯೋಗದೊಂದಿಗೆ ೧೦೮ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕುಶಾಲನಗರ ಗಣಪತಿ ದೇವಾಲಯದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಪೂಜೆ ಸಲ್ಲಿಸಿದರು.

ಪೊನ್ನಂಪೇಟೆ: ಪಟ್ಟಣದ ೧೦ ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಇಲ್ಲಿನ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ದೇವಾಲಯದ ಮುಖ್ಯ ಅರ್ಚಕ ಪಂಚಾಕ್ಷರಿ ಅವರ ನೇತೃತ್ವದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೊಳೇರ ದಯಾ ಚಂಗಪ್ಪ ಅವರ ಮುಂದಾಳತ್ವದಲ್ಲಿ ಸಾಮೂಹಿಕ ಗಣಪತಿ ಹೋಮ ನೆರವೇರಿಸಲಾಯಿತು. ನಂತರ ಗಣಪತಿ ಮೂರ್ತಿಗೆ ವಿಶೇಷ ಅಲಂಕಾರವನ್ನು ನೆರವೇರಿಸಿ ಪೂಜೆ ಸಲ್ಲಿಸಲಾಯಿತು.

ಈ ಬಾರಿ ಪೊನ್ನಂಪೇಟೆ ಪಟ್ಟಣದ ವಿವಿಧ ೧೦ ಸಮಿತಿಗಳು ಗಣಪತಿ ಪ್ರತಿಷ್ಠಾಪನೆ ಮಾಡಿದ್ದು, ಬಸವೇಶ್ವರ ದೇವಸ್ಥಾನ ಸೇರಿದಂತೆ ಕೃಷ್ಣ ನಗರದ ಶ್ರೀ ಕೃಷ್ಣ ಯುವಕ ಸಂಘ, ಶಿವ ಕಾಲೋನಿಯ ಶ್ರೀ ಶಿವ ಯುವಕ ಸಂಘ, ಮಹಾತ್ಮಗಾಂಧಿ ನಗರದ ಯುವಶಕ್ತಿ ಯುವಕ ಸಂಘ, ವಿಘ್ನೇಶ್ವರ ವಾಹನ ಚಾಲಕ ಹಾಗೂ ಮಾಲೀಕರ ಸಂಘ, ಕಾಟ್ರಕೊಲ್ಲಿ ಗಜಮುಖ ಗೆಳೆಯರ ಬಳಗ, ಜೋಡುಬೀಟಿ ವಿನಾಯಕ ಯುವಕರ ಬಳಗ, ಕುಂದ ರಸ್ತೆಯ ಗಜಾನನ ಗೆಳೆಯರ ಬಳಗ, ಜನತಾ ಕಾಲೋನಿಯ ಜನತಾ ವಿನಾಯಕ ಬಳಗ, ಹಾಗೂ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಸಮಿತಿಯವರು ಗಣೇಶ ಮೂರ್ತಿಗಳನ್ನು ತಮ್ಮ ತಮ್ಮ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದರು.

ಬಸವೇಶ್ವರ ದೇವಾಲಯದಲ್ಲಿ ಇರಿಸಿದ್ದ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ನಂತರ ವಿವಿಧ ಹೂವುಗಳಿಂದ ಅಲಂಕೃತಗೊAಡಿದ್ದ ಮಂಟಪಗಳಲ್ಲಿ ಮೂರ್ತಿಯನ್ನು ವಾಲಗ, ಬ್ಯಾಂಡ್ ಸೆಟ್, ಚಂಡೆ, ಮದ್ದಳೆಯೊಂದಿಗೆ ದೇವಾಲಯಕ್ಕೆ ಪ್ರದಕ್ಷಣೆ ಹಾಕಿ, ಮೆರವಣಿಗೆಯೊಂದಿಗೆ ತಮ್ಮ ಬಡಾವಣೆಗೆ ತೆರಳಿ ಪ್ರತಿಷ್ಠಾಪನೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಬೆಳಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಪ್ರತಿಷ್ಠಾಪಿಸಲಾದ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾದರು.

ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಭಕ್ತಾದಿಗಳು ಭಾಗವಹಿಸಿದ್ದರು. ಪೊನ್ನಂಪೇಟೆಯಲ್ಲಿಗೌರಿ ಗಣೇಶ ವಿಸರ್ಜನೆ ಕಾರ್ಯಕ್ರಮ ಸೆಪ್ಟೆಂಬರ್ ೪ರಂದು ನಡೆಯಲಿದೆ.್ಯಪ್ತಿಯ ಪಂಜರಪೇಟೆಯಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಆಚರಿಸುತ್ತಿರುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭಾಗವಹಿಸಿದರು.

೧೧ ದಿನಗಳ ಆಚರಿಸಲ್ಪಡುವ ಶ್ರೀ ಮಹಾ ಗಣಪತಿ ಉತ್ಸವದ, ಮೂರ್ತಿ ಪ್ರತಿಷ್ಠಾಪನ ಸಂದರ್ಭ ಉಪಸ್ಥಿತರಿದ್ದ ಶಾಸಕರು ವಿಘ್ನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗಣೇಶೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಸಾಲಿನಲ್ಲಿಯು ಅತ್ಯಂತ ವಿಜೃಂಭಣೆಯಿAದ ಆಚರಿಸಲ್ಪಡುವ ಈ ಹಬ್ಬವು ನಾಡಿನ ಸವಸೋಮವಾರಪೇಟೆ: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪನೆಗೊಂಡಿರುವ ಗೌರಿ-ಗಣೇಶನ ಉತ್ಸವ ಮೂರ್ತಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಗ್ರಾಮಾಭಿವೃದ್ಧಿ ಮಂಡಳಿ, ಯುವಕ ಸಂಘಗಳ ಆಶ್ರಯದಲ್ಲಿ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ.

ಸೌರ್ಣ ಗೌರಿ ಹಬ್ಬದಂದು ಶ್ರೀ ಗಂಗಾ ಪೂಜೆ ನೆರವೇರಿಸಿ ಗೌರಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಗಣೇಶ ಚತುರ್ಥಿಯಂದು ಗಣೇಶನ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪನೆ ನೆರವೇರಿಸಲಾಗಿದೆ.

ಗ್ರಾಮೀಣ ಭಾಗದ ಸಮುದಾಯ ಭವನಗಳು, ದೇವಾಲಯ, ಪೆಂಡಾಲ್‌ಗಳನ್ನು ನಿರ್ಮಿಸಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಂತೆ ಒಟ್ಟು ೭೪ ಕಡೆಗಳಲ್ಲಿ ಗೌರಿ ಗಣೇಶೋತ್ಸವ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದ್ದು, ಪ್ರತಿ ದಿನ ವಿಶೇಷ ಪೂಜೆಗಳು, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯುತ್ತಿದೆ.

ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದರೊಂದಿಗೆ ಕಕ್ಕೆಹೊಳೆ ಜಂಕ್ಷನ್‌ನಲ್ಲಿ ಗಣೇಶೋತ್ಸವ ಸಮಿತಿ ವತಿಯಿಂದ ಬಾಲ ಗಣಪ ಸೇರಿದಂತೆ ಎರಡು ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನು ಆಲೇಕಟ್ಟೆ ರಸ್ತೆಯ ಭಾರತೀಯ ಯುವಕ ಸಂಘ, ಕಾನ್ವೆಂಟ್ ಬಾಣೆ, ತಣ್ಣೀರುಹಳ್ಳ ಗ್ರಾಮ, ಆನೆಕೆರೆ ಜಂಕ್ಷನ್, ರಾಮಮಂದಿರ ಸೇರಿದಂತೆ ವಿವಿಧೆಡೆ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿನ ಶ್ರೀ ಬಸವೇಶ್ವರ ದೇವಾಲಯದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಉತ್ಸವ ಆಯೋಜಿಸಲಾಗಿದೆ. ವಿರಕ್ತ ಮಠಾಧೀಶರಾದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ವಿಶೇಷ ಪೂಜೆಗಳು ನಡೆಯಿತು. ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್, ಖಜಾಂಚಿ ಯುವರಾಜ್ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.