ಪಾಲಿಬೆಟ್ಟ: ಪಾಲಿಬೆಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲಾ ಮುಖ್ಯಶಿಕ್ಷಕ ಯು.ಕೆ. ಅಶ್ರಫ್ ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ, ಭಾಷಣ, ನೃತ್ಯ ಪ್ರದರ್ಶನ ನಡೆಯಿತು. ಶಾಲೆಯ ಸಹಶಿಕ್ಷಕಿ ಆರತಿ ಎಸ್.ಪಿ. ಸ್ವಾತಂತ್ರ‍್ಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಈ ಸಂದರ್ಭ ಪಾಲಿಬೆಟ್ಟದ ಆಟೋ ಚಾಲಕ ಸಂಘ ಹಾಗೂ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವತಿಯಿಂದಲೂ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.

ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮದನ್ ಕುಮಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಸಹ ಶಿಕ್ಷಕಿ ನಯನಕುಮಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಮಮತಾ ಕಾಮತ್, ಆಶಾ, ಆರತಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು ಮೂರ್ನಾಡು: ಶ್ರೀ ಯೋಗಿ ನಾರಾಯಣ ಕೊಡಗು ಬಲಿಜ ಸಮಾಜದ ವತಿಯಿಂದ ಸ್ವಾತಂತ್ರ‍್ಯೋತ್ಸವವನ್ನು ಮೂರ್ನಾಡಿನ ಬಲಿಜ ಸಮಾಜದ ಕಚೇರಿಯಲ್ಲಿ ಆಚರಿಸಲಾಯಿತು.

ಕೊಡಗು ಬಲಿಜ ಸಮಾಜದ ಅಧ್ಯಕ್ಷ ಗಣೇಶ್ ನಾಯ್ಡು ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ನಮ್ಮ ಹಿರಿಯರ ತ್ಯಾಗ ಬಲಿದಾನಗಳಿಂದ ಗಳಿಸಿಕೊಟ್ಟ ಸ್ವಾತಂತ್ರ‍್ಯವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಖಜಾಂಚಿ ಪ್ರಕಾಶ್, ನಿರ್ದೇಶಕರಾದ ಲೋಕನಾಥ್, ಎಲ್‌ಐಸಿ ಗಣೇಶ್, ಯಶ್ವಂತ್ ಮೂರ್ನಾಡು, ರಮಿತಾ ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ವಾಹನ ಚಾಲಕ ಹಾಗೂ ಮಾಲೀಕರ ಸಂಘದ ವತಿಯಿಂದ ಮಾಜಿ ಸೈನಿಕರನ್ನು ಗೌರವಿಸುವ ಮೂಲಕ ವಿಶೇಷ ರೀತಿಯ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು.

ಸಂಘದ ಅಧ್ಯಕ್ಷ ಸಿ.ಕೆ. ಬೋಪಣ್ಣ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸೇನೆಯಲ್ಲಿ ನಿರಂತರ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿರುವ ಗೋಣಿಕೊಪ್ಪ ನಗರದ ಮಾಜಿ ಸೈನಿಕರುಗಳಾದ ಮಣಿಕಂಠ, ಕೊರಿಯಸ್, ಕೆ.ಡಿ. ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು.

ಪ್ರಸ್ತಾವಿಕವಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ ಮಾತನಾಡಿ, ಸೈನಿಕರನ್ನು ಗೌರವದಿಂದ ಕಾಣುವಂತಾಗಬೇಕು. ವಾಹನ ಚಾಲಕ ಸಂಘವು ಈ ಬಾರಿ ನಿವೃತ್ತ ಸೈನಿಕರನ್ನು ಗುರುತಿಸುವ ಮೂಲಕ ಗೌರವಿಸುವ ಕೆಲಸ ಮಾಡಿದೆ. ಅಲ್ಲದೆ ಶೈಕ್ಷಣಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಸAಘದ ಅಧ್ಯಕ್ಷ ಸಿ.ಕೆ. ಬೋಪಣ್ಣ ಮಾತನಾಡಿ, ಸಂಘವು ನಿರಂತರವಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ ಎಂದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶರತ್‌ಕಾಂತ್, ಸಂಘದ ಪದಾಧಿಕಾರಿಗಳಾದ ಬಿ.ಎಸ್. ಸುರೇಶ್, ಕೆ.ಎಂ. ಅಬ್ದುಲ್ ಕರೀಂ, ಕೆ.ವಿ. ಅನೀಲ್, ಎನ್. ಕೃಷ್ಣ, ಹೆಚ್.ಸಿ. ಶ್ರೀನಿವಾಸ್, ಎ.ಕೆ. ಅಶೋಕ, ಎ.ಕೆ. ಅನೀಶ್ ಹಾಗೂ ಬಿ.ಆರ್.ಕೀರ್ತಿಕುಮಾರ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ಸಹಕಾರ್ಯದರ್ಶಿ ಕೆ.ಬಿ. ರೇಣುಕುಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಿ.ಆರ್. ಕೃಷ್ಣೇಗೌಡ ನಿರೂಪಿಸಿ ಖಜಾಂಚಿ ಯು.ಟಿ. ವೆಂಕಟೇಶ್ ವಂದಿಸಿದರು.ಗೋಣಿಕೊಪ್ಪಲು: ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಪೊನ್ನಂಪೇಟೆ ಪ.ಪಂ. ಸದಸ್ಯ ಸಿ.ಎ. ಜುನೈದ್ ಮತ್ತು ಹಿರಿಯ ಪತ್ರಕರ್ತ ಟಿ.ಎಲ್. ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿದರು.

ಇದೇ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಶ್ರೀನಿವಾಸ್, ಶಾಲಾ ಕಟ್ಟಡ ಸಂಕೀರ್ಣ ಶಿಥಿಲವಾಗಿದ್ದು ಹೈಟೆಕ್ ಮಾದರಿಯಲ್ಲಿ ನಿರ್ಮಾಣವಾಗಬೇಕಿದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜುನೈದ್, ತ್ಯಾಗ ಬಲಿದಾನದ ಮೂಲಕ ಮಹಾತ್ಮರು ಭಾರತಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟಿದ್ದು, ಎಲ್ಲರೂ ದೇಶಭಕ್ತಿಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಶಾಲಾ ಮುಖ್ಯ ಶಿಕ್ಷಕ ಬಿ.ಎಂ. ವಿಜಯ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಟಿ.ಎಸ್. ಮಹೇಶ್ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕ ವೇದಿಕೆ ಸದಸ್ಯ ದಿನೇಶ್, ಪ.ಪಂ. ಸದಸ್ಯ ರಾಮಕೃಷ್ಣ, ಮಾಜಿ ತಾ.ಪಂ. ಸದಸ್ಯ ಸಾಜಿ ಅಚ್ಯುತ್ತನ್, ಎಸ್‌ಡಿ.ಎಂ.ಸಿ. ಉಪಾಧ್ಯಕ್ಷೆ ಗಿರಿಜ, ಶಿಕ್ಷಕರು ಹಾಗೂ ಪೋಷಕರು ಪಾಲ್ಗೊಂಡಿದ್ದರು.ಸುಳ್ಯ: ಕೆ.ವಿ.ಜಿ. ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ೭೯ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಅಭಿಜ್ಞ ಕೆ. ಆರ್., ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾಭ್ಯಾಸದ ಮೂಲಕ ನಾವೆಲ್ಲರೂ ಸಮಾಜದ ನಿರ್ಮಾಣಕಾರರಾಗಬೇಕು ಎಂದರು.

ಶಿಸ್ತಿನಿಂದ ವಿದ್ಯಾರ್ಥಿಗಳಾದ ಪೂಜಾ, ಹವ್ಯ ಮತ್ತು ತ್ರಿಶಾಲಿ ಹಾಗೂ ಸಾಂಸ್ಕöÈತಿಕ ಸಂಯೋಜಕರಾದ ಪ್ರೊ. ಕೃಷ್ಣರಾಜ್ ಎಂ.ವಿ. ರಾಷ್ಟçಗೀತೆಯನ್ನು ಹಾಡುವುದರ ಮೂಲಕ ಧ್ವಜ ವಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿAಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್‌ಯು.ಜೆ., ಉಪಪ್ರಾಂಶುಪಾಲ ಡಾ. ಶ್ರೀಧರ್, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರುಗಳು ಹಾಗೂ ಕಾಲೇಜಿನ ಭೋದÀಕ, ಭೋದÀಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಡಾ. ರಾಜೇಶ್ ಕುಮಾರ್ ಎಂ.ಎಸ್. ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.ಸುಳ್ಯ: ಕೆ.ವಿ.ಜಿ. ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ೭೯ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಅಭಿಜ್ಞ ಕೆ. ಆರ್., ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾಭ್ಯಾಸದ ಮೂಲಕ ನಾವೆಲ್ಲರೂ ಸಮಾಜದ ನಿರ್ಮಾಣಕಾರರಾಗಬೇಕು ಎಂದರು.

ಶಿಸ್ತಿನಿಂದ ವಿದ್ಯಾರ್ಥಿಗಳಾದ ಪೂಜಾ, ಹವ್ಯ ಮತ್ತು ತ್ರಿಶಾಲಿ ಹಾಗೂ ಸಾಂಸ್ಕöÈತಿಕ ಸಂಯೋಜಕರಾದ ಪ್ರೊ. ಕೃಷ್ಣರಾಜ್ ಎಂ.ವಿ. ರಾಷ್ಟçಗೀತೆಯನ್ನು ಹಾಡುವುದರ ಮೂಲಕ ಧ್ವಜ ವಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿAಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್‌ಯು.ಜೆ., ಉಪಪ್ರಾಂಶುಪಾಲ ಡಾ. ಶ್ರೀಧರ್, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರುಗಳು ಹಾಗೂ ಕಾಲೇಜಿನ ಭೋದÀಕ, ಭೋದÀಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಡಾ. ರಾಜೇಶ್ ಕುಮಾರ್ ಎಂ.ಎಸ್. ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.Àಣಿವೆ: ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದೀಪಿಕಾ ಮೂರ್ತಿ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.ನಾಪೋಕ್ಲು: ಸ್ವಾತಂತ್ರ‍್ಯ ಮಹೋತ್ಸವದ ಪ್ರಯುಕ್ತ ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲೆಯಲ್ಲಿ ನಾಪೋಕ್ಲು ಕ್ಲಸ್ಟರ್‌ನ ಎಲ್ಲಾ ಶಾಲೆಗಳಿಗೂ ಏಕತೆಗಾಗಿ ಓಟ ಎಂಬ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ನಾಪೋಕ್ಲು ಠಾಣಾ ಸಹಾಯಕ ಸಬ್‌ಇನ್ಸ್ಪೆಕ್ಟರ್ ಫ್ರಾನ್ಸಿಸ್ ಹಾಗೂ ಶಾಲೆಯ ಕಾರ್ಯದರ್ಶಿ ರತ್ನ ಚರ್ಮಣ ಸ್ಪರ್ಧೆಯನ್ನು ಉದ್ಘಾಟಿಸಿದರು.

ನಂತರ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಲೆಯ ಅಧ್ಯಕ್ಷ ಕೇಟೋಳಿರ ರಾಜ ಚರ್ಮಣ ಹಾಗೂ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿ ನೂರ್ ಫಾತಿಮಾ ಉದ್ಘಾಟಿಸಿದರು.

ಏಕತೆಗಾಗಿ ಓಟ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಮುಫಿದ ಅಂಕುರ್ ಪಬ್ಲಿಕ್ ಶಾಲೆ ಪ್ರಥಮ, ಶೀಖ ಮುತ್ತಮ್ಮ ಅಂಕುರ್ ಶಾಲೆ ದ್ವಿತೀಯ, ರಿಚ್ಚ ಪೂಣಚ್ಚ ಅಂಕುರ್ ಪಬ್ಲಿಕ್ ಶಾಲೆ ತೃತೀಯ, ಫಾತಿಮಾ ನೌಶಿಬ ಕೆಪಿಎಸ್ ೪ನೇ ಸ್ಥಾನ, ವಿಂಪಲ್ ದೇಚಮ್ಮ ಅಂಕುರ್ ಪಬ್ಲಿಕ್ ಶಾಲೆ ೫ನೇ ಸ್ಥಾನ, ಗಾನವಿ ಶ್ರೀ ರಾಮ ಟ್ರಸ್ಟ್ ೬ನೇ ಸ್ಥಾನ, ರಿಫಾನ ಕೆಪಿಎಸ್ ಶಾಲೆ ೭ನೇ ಸ್ಥಾನ, ಫಾತಿಮಾ ಸಫಾನ ಕೆಪಿಎಸ್ ಶಾಲೆ ೮ನೇ ಸ್ಥಾನ, ಜೋಶ್ನ ಕಾವೇರಮ್ಮ ಅಂಕುರ್ ಪಬ್ಲಿಕ್ ಶಾಲೆ ೯ನೇ ಸ್ಥಾನ, ತೀರ್ಥ ಅಂಕುರ್ ಪಬ್ಲಿಕ್ ಶಾಲೆ ೧೦ನೇ ಸ್ಥಾನ ಪಡೆದುಕೊಂಡರು.

ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನವನ್ನು ವಿತರಿಸಿದರು. ಇದಕ್ಕೂ ಮೊದಲು ಸ್ವಾತಂತ್ರ‍್ಯ ಮಹೋತ್ಸವದ ಧ್ವಜಾರೋಹಣವನ್ನು ಶಾಲೆಯ ಅಧ್ಯಕ್ಷ ಕೇಟೋಳಿರ ರಾಜ ಚರ್ಮಣ ನೆರವೇರಿಸಿದರು.ತಿತಿಮತಿ: ತಿತಿಮತಿ ಲ್ಯಾಂಪ್ಸ್ ಅಕಾಡೆಮಿ ಶಾಲೆಯಲ್ಲಿ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು.

ಆಡಳಿತ ಮಂಡಳಿ ಕಾರ್ಯದರ್ಶಿ ಸುಮನ್ ಮೂಡಗದ್ದೆ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ಅಪೋಲಿನ್ ಡಿಸೋಜ ಉಪಸ್ಥಿತರಿದ್ದರು. ಕೂಡಿಗೆ: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸ್ವಾತಂತ್ರö್ಯ ದಿನಾಚರಣೆ ಪ್ರಯುಕ್ತ ಸಂಸ್ಥೆಯ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.

ಉಪಾಧ್ಯಕ್ಷ ಬಸಪ್ಪ, ನಿರ್ದೇಶಕರಾದ ರಾಮಚಂದ್ರ, ಕೃಷ್ಣೇಗೌಡ, ಕುಮಾರ್, ರಾಜು ಮೊದಲಾದವರಿದ್ದರು.ಕುಶಾಲನಗರ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.

ಕುಶಾಲನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಒಳಚರಂಡಿ ಅಭಿವೃದ್ಧಿ ನಿಗಮ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಗಿಡಕ್ಕೆ ನೀರು ಹಾಕುವ ಮೂಲಕ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಪ್ರತಿಭೆಗಳನ್ನು ಹೊರ ತರಲು ವೇದಿಕೆಗಳು ಸಹಕಾರಿಯಾಗುತ್ತವೆ ಎಂದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಎಂ. ರಘು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಭಾರದ್ವಾಜ್ ಕೆ. ಅನಂತ ತೀರ್ಥ ಅವರು ಪ್ರಸಕ್ತ ವಿದ್ಯಮಾನ ಹಾಗೂ ಸಮಾಜದ ಆಗುಹೋಗುಗಳ ಬಗ್ಗೆ ವಿಷಯಗಳನ್ನು ಕವಿತೆಗಳ ಮೂಲಕ ಪ್ರಕಟಿಸಲು ಸಾಧ್ಯ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಉಪಾಧ್ಯಕ್ಷೆ ರಾಣಿ ರವೀಂದ್ರ, ಸಂಚಾಲಕ ಮಹೇಂದ್ರ ಉಪಸ್ಥಿತರಿದ್ದರು. ಕವಿಗೋಷ್ಠಿಯಲ್ಲಿ ಸ್ಥಳೀಯ ೨೦ಕ್ಕೂ ಹೆಚ್ಚು ಕವಿಗಳು ಪಾಲ್ಗೊಂಡಿದ್ದರು.ಅಮ್ಮತ್ತಿ: ಅಮ್ಮತ್ತಿ ಆಟೋ ಮಾಲೀಕರ ಮತ್ತು ಚಾಲಕರ ಸಂಘ ವತಿಯಿಂದ ೭೯ನೆ ವರ್ಷದ ಸ್ವಾತಂತ್ರ‍್ಯ ದಿನಾಚರಣೆ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಅಮ್ಮತ್ತಿ ಕಾನ್ವೆಂಟ್ ಹಾಲ್‌ನಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಉಪ ನಿರೀಕ್ಷಕಿ ಲತಾ ಎನ್.ಜೆ. ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರö್ಯ ಸಿಗಲು ಲಕ್ಷಾಂತರ ಭಾರತೀಯರು ತ್ಯಾಗ ಬಲಿದಾನ ಮಾಡಿದ್ದಾರೆ ಎಂದರು.

ಈ ಸಂದರ್ಭ ಅರೋಗ್ಯ ಕ್ಷೇತ್ರದಲ್ಲಿ ಅಸಹಾಯಕರಿಗೆ ಸಹಾಯ ಮಾಡುತ್ತಾ ಬರುತ್ತಿರುವ ಸಮಾಜ ಸೇವಕ ಚೋಕಂಡ ಸಂಜು ಸುಬ್ಬಯ್ಯ ಅವರಿಗೆ, ಹಿರಿಯ ಆಟೋ ಚಾಲಕರಿಗೆ ಮತ್ತು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಚಾಲಕರ ಮಕ್ಕಳಿಗೆ ಸನ್ಮಾನ ಮಾಡÀಲಾಯಿತು.

ವೇದಿಕೆಯಲ್ಲಿ ವಿ.ಎಸ್.ಎಸ್.ಎನ್. ನಿರ್ದೇಶಕÀ ಮುಕ್ಕಾಟಿರ ಸಂತೋಷ್, ಅರ್ಚಕ ಗುರುರಾಜ್ ಭಟ್, ಮೂರ್ನಾಡು ಆಟೋ ಚಾಲಕರ ಸಂಘದ ಅಧ್ಯಕ್ಷ ಉಮೇಶ್ ಬಂಗೇರ, ಎ.ಎಸ್.ಐ. ಕೆ.ಬಿ. ಸೋಮಣ್ಣ, ವಿ.ಎನ್. ಪ್ರಸನ್ನ, ಸಂಘದ ಅಧ್ಯಕ್ಷÀ ಅಭಿಜಿತ್, ಉಪಾಧ್ಯಕ್ಷÀ ಶ್ರೀಜು, ಗೌರವಾಧ್ಯಕ್ಷ ಮೋಹನ್ ಸೇರಿದಂತೆ ಆಟೋ ಚಾಲಕರ ಕುಟುಂಬದವರು ಹಾಜರಿದ್ದರು. ಸಂಘದ ನಿರ್ದೇಶಕ ಮಂಜು ಶಿವಪ್ಪ ಸ್ವಾಗತಿಸಿದರೆ, ಶಿಕ್ಷಕಿ ವಿಶಾಲಾಕ್ಷಿ ನಿರೂಪಿಸಿ ವಂದಿಸಿದರು.