ಮಡಿಕೇರಿ, ಆ. ೨೯: ಮಡಿಕೇರಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಜಿ. ಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಸದಸ್ಯರ ಸಭೆ ನಡೆಯಿತು.
ಈ ಸಭೆಗೆ ಅನುಷ್ಠಾನ ಇಲಾಖೆಗಳಾದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಅಧಿಕಾರಿ, ಶಿಶು ಅಭಿವೃದ್ಧಿ ಇಲಾಖಾ ಅಧಿಕಾರಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮತ್ತು ವ್ಯವಸ್ಥಾಪಕರು ಕೆ.ಎಸ್.ಆರ್.ಟಿ.ಸಿ ರವರು ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.
ಗೃಹಲಕ್ಷಿö್ಮ ಯೋಜನೆ : ಶಿಶು ಅಭಿವೃದ್ದಿ ಅಧಿಕಾರಿಯವರು ಮಾತನಾಡಿ, ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು ೩೧,೮೧೧ ಪಡಿತರ ಚೀಟಿ ಇದ್ದು, ಗೃಹಲಕ್ಷಿö್ಮ ಯೋಜನೆಯಡಿ ೩೧,೪೮೯ ಫಲಾನುಭವಿಗಳು ನೋಂದಣಿಯಾಗಿದ್ದಾರೆ ಎಂದರು.
೩೨೨ ಪಡಿತರ ಚೀಟಿ ನೋಂದಣಿಗೆ ಬಾಕಿ ಇದ್ದು, ಜೂನ್ ಮಾಹೆಗೆ ೩೦,೫೩೯ ಪಡಿತರ ಚೀಟಿ ಫಲಾನುಭವಿಗಳಿಗೆ ಶಿಶು ಅಭಿವೃದ್ಧಿ ಅಧಿಕಾರಿ ಮಡಿಕೇರಿಯವರಿಂದ ನೇರವಾಗಿ ಡಿಬಿಟಿ ಮುಖಾಂತರ ಹಣ ಮಂಜೂರಾಗಿದೆ ಎಂದು ತಿಳಿಸಿದರು.
ಒಟ್ಟು ಹಣ ಪಾವತಿಯಾಗಲು ಬಾಕಿ ಇರುವ ಫಲಾನುಭವಿಗಳ ಸಂಖ್ಯೆ ೧೩೭೬೪, ಐ.ಟಿ/ಜಿ.ಎಸ್.ಟಿ ಪಾವತಿದಾರರೆಂದು ೭೮೪ ಅರ್ಜಿಗಳು ತಿರಸ್ಕೃತಗೊಂಡಿದ್ದು, ಓPಅI, e-ಏಙಅ ಮಾಡಿಸಲು ಬಾಕಿ ಉಳಿದಿರುವ ಫಲಾನುಭವಿಗಳ ಸಂಖ್ಯೆ ೧೬೬, ಮರಣ ನೋಂದಣಿ ಮಾಡಿಸಿದ ಫಲಾನುಭವಿಗಳ ಸಂಖ್ಯೆ ೨೩೧ ಹಾಗೂ ತಿಂಗಳ ಅಂತ್ಯಕ್ಕೆ ಸಿಡಿಪಿಒ ಲಾಗಿನ್ ನಲ್ಲಿ ಪ್ರಸ್ತುತ ಮಾಹೆಯಲ್ಲಿ ಸ್ವೀಕೃತಗೊಂಡು ಅಪ್ರೂವ್ ಮಾಡಲು ಅರ್ಜಿಗಳು ಉಳಿಕೆ ಇರುವುದಿಲ್ಲ ಹಾಗೂ ಐಟಿ, ಜಿಎಸ್‌ಟಿ ಪಾವತಿದಾರರು ಎಂದು ಬರುತ್ತಿರುವ ಸಮಸ್ಯೆಯನ್ನು ಹೆಡ್ ಆಫೀಸ್ ನಲ್ಲಿ ಸರಿಪಡಿಸಲಾಗುತ್ತದೆ ಹಾಗೂ ಗೃಹಲಕ್ಷಿö್ಮಗೆ ಸಂಬAಧಿಸಿದAತೆ ಅನುದಾನವು ತಾಲ್ಲೂಕು ಪಂಚಾಯತಿಗೆ ಸರ್ಕಾರದಿಂದ ಜಮೆ ಆಗಿ ,ತಾಲ್ಲೂಕು ಪಂಚಾಯತಿಯಿAದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅನುದಾನವನ್ನು ಜಮೆ ಮಾಡಿದ ನಂತರ ತಮ್ಮ ಇಲಾಖೆಯಿಂದ ಹಣದ ಕಂತು ಫಲಾನುಭವಿಗಳ ಖಾತೆ ಹಣವನ್ನು ಜಮೆ ಮಾಡಲಾಗುತ್ತದೆ ಜೂನ್ ೨೦೨೫ರ ಮಾಹೆಯ ಒಟ್ಟು ೧೫,೩೭೬ ಎಸ್‌ಸಿ.ಫಲಾನುಭವಿಗಳಿಗೆ ರೂ. ೩,೦೭,೫೨,೦೦೦ ಹಾಗೂ ೮೨೩೩ ಎಸ್.ಟಿ ಫಲಾನುಭವಿಗಳಿಗೆ ರೂ. ೧,೬೪,೬೬,೦೦೦ ಗಳನ್ನು ಡಿ.ಬಿ.ಟಿ ಲಾಗ್ ಇನ್ ಮೂಲಕ ಬ್ಯಾಂಕ್ ಮೋಡ್ ನಲ್ಲಿ ಧನಸಹಾಯ ಪಾವತಿಸಲು, ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಡಿಬಿಟಿ ಲಾಗ್ ಇನ್ ನಿಂದ ಬ್ಯಾಂಕ್ ಮೋಡ್ ಮೂಲಕ ಓPಅI Suಛಿಛಿe ಆದ ಒಟ್ಟು ೧೪,೯೮೬ ಎಸ್‌ಸಿ ಫಲಾನುಭವಿಗಳಿಗೆ ರೂ. ೨,೯೯,೭೨,೦೦೦ ಗಳು ಹಾಗೂ ೭೯೦೮ ಎಸ್.ಟಿ ಫಲಾನುಭವಿಗಳಿಗೆ ರೂ. ೧೫,೮೧,೬೦೦ ಡಿ.ಬಿ.ಟಿ ಲಾಗ್ ಇನ್ ನಿಂದ ಜಂಟಿ ನಿಯಂತ್ರಕರು, ಲೆಕ್ಕ ಶಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಇವರಿಗೆ ಅಪ್ರೂವ್ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಶಕ್ತಿ ಯೋಜನೆ : ಶಕ್ತಿ ಯೋಜನೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಒಟ್ಟು ೧,೨೫,೫೩,೧೪೨ ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು ೨,೮೯,೮೩೩ ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿ ಈ ಯೋಜನೆ ಪಡೆದಿದ್ದಾರೆ. ಸರಾಸರಿ ೧೫,೮೧೬ ಪ್ರಯಾಣಿಕರು ಒಂದು ದಿನಕ್ಕೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿರುತ್ತಾರೆ, ಮುಂದುವರೆದು ಒಟ್ಟು ಮೊತ್ತ ೫೪,೧೯,೧೫,೬೫೭ ಸಂಸ್ಥೆಗೆ ಆದಾಯ ಬಂದಿದೆ ಸರಾಸರಿ ಒಂದು ದಿನದ ಆದಾಯ ರೂ.೬,೬೭,೩೮೪ ಆಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಯುವನಿಧಿ : ಇಲಾಖಾಧಿಕಾರಿಯವರು ಮಾತನಾಡಿ ೨೦೨೩-೨೦೨೪ರಲ್ಲಿ ಪದವಿ ಮತ್ತು ಡಿಪ್ಲೋಮಾ ಉತ್ತೀರ್ಣರಾಗಿ ಕನಿಷ್ಟ ೬ ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಈ ಯೋಜನೆಗೆ ಅರ್ಹರಾಗಿದ್ದು, ಅಲ್ಲದೆ ಈ ಯೋಜನೆಯ ಪ್ರಯೋಜನ ಮುಂದುವರಿಸಬೇಕಾಗಿದ್ದಲ್ಲಿ ಮೂರು ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಯುವನಿಧಿ ಯೋಜನೆಯಲ್ಲಿ ಜೂನ್ ಮಾಹೆವರೆಗೆ ೪೪೦ ಜನ ನೋಂದಣಿಯಾಗಿದ್ದು, ಜೂನ್ ಮಾಹೆವರೆಗೆ ಫಲಾನುಭವಿಗಳಿಗೆ ರೂ.೯೨,೫೦,೫೦೦ ಹಣ ಬಿಡುಗಡೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆ : ಇಲಾಖಾಧಿಕಾರಿ ಮಾತನಾಡಿ, ಮಡಿಕೇರಿ ತಾಲ್ಲೂಕಿನಲ್ಲಿ ೫೧,೮೫೬ ಅರ್ಹ ವಿದ್ಯುತ್ ಸ್ಥಾವರಗಳಿದ್ದು, ೫೧೪೯೪ ನೋಂದಣಿಗೊAಡ ಅರ್ಜಿಗಳಾಗಿದ್ದು, ಬಾಕಿ ಇರುವ ೩೬೨ ಬಾಕಿ ಇರುವ ಸ್ಥಾವರಗಳಿದ್ದು ಶೇ.೯೯.೩೦ ಶೇಕಡವಾರು ಪ್ರಗತಿಯಾಗಿದ್ದು, ೧೪೫.೬೫ ಲಕ್ಷ ಸಹಾಯಧನ ಬಂದಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಅನ್ನಭಾಗ್ಯ : ಅನ್ನಭಾಗ್ಯ ಯೋಜನೆಗೆ ಸಂಬAಧಿಸಿದAತೆ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು ೩೮೩೯೯ ಪಡಿತರ ಚೀಟಿ ಇದ್ದು ೭೯೪೦ ಎಎವೈ ಫಲಾನುಭವಿಗಳು, ೨೨೬೨೫ ಬಿ.ಪಿ.ಎಲ್ ಕಾರ್ಡ್ ಇದ್ದು ೭೩೨೪೧ ಫಲಾನುಭವಿಗಳು, ೧೩೭೭೯ ಎ ಪಿ ಎಲ್ ಕಾರ್ಡ್ ಇದ್ದು ೩೯೬೩೭ ಫಲಾನುಭವಿಗಳಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ ಪತ್ತೆ ಹಚ್ಚಿರುವ ಅನರ್ಹ ಫಲಾನುಭವಿಗಳ ಸಂಖ್ಯೆ ೪೦೧ ಆಗಿರುತ್ತದೆ.
ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಎಂ.ಜಿ. ಮೋಹನ್ ದಾಸ್ ಅವರು ಮಾತನಾಡಿ ಮಡಿಕೇರಿ ತಾಲ್ಲೂಕಿನಲ್ಲಿ ೦೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅನುಷ್ಠಾನ ಇಲಾಖೆಗಳು ಉತ್ತಮ ಪ್ರಗತಿ ಸಾಧಿಸಿದ್ದು, ಮುಂದಿನ ದಿನಗಳಲ್ಲಿಯೂ ಸಹ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಅಧಿಕಾರಿಗಳು ಸರ್ಕಾರದ ಮಹತ್ವಾಕಾಂಕ್ಷಿ ೦೫ ಗ್ಯಾರಂಟಿ ಯೋಜನೆಯನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡಲು ಶ್ರಮಿಸಬೇಕು ಎಂದರು.
ಸದಸ್ಯ ಕಾರ್ಯದರ್ಶಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯವರು ಸಭೆಯಲ್ಲಿ ಹಾಜರಿದ್ದ ಸರ್ವರಿಗೂ ವಂದಿಸಿದರು.