ಕುಶಾಲನಗರ, ಆ. ೨೬: ಇಲ್ಲಿನ ಕೈಗಾರಿಕೋದ್ಯಮಿಗಳು ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕುಶಾಲನಗರ, ಸೋಮವಾರಪೇಟೆ, ಮಡಿಕೇರಿ ತಾಲೂಕು ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ಹಣಕಾಸು ವಹಿವಾಟು ನಡೆಸುತ್ತಿರುವ ಸಂಘದಲ್ಲಿ ೧೪೦೪ ಸದಸ್ಯರಿದ್ದಾರೆ. ಸಂಘದಲ್ಲಿ ಕಳೆದ ಸಾಲಿನಲ್ಲಿ ೩,೨೨ ಕೋಟಿ ರೂಗಳ ಪಾಲುಬಂಡವಾಳವಿದ್ದರೆ, ಈ ಸಾಲಿನಲ್ಲಿ ೩.೪೮ ಕೋಟಿ ರೂಗಳಷ್ಟಿದ್ದು ಒಂದೇ ವರ್ಷದಲ್ಲಿ ಬರೋಬ್ಬರಿ ೨೫.೭೫ ಲಕ್ಷ ಸೇರಿದಂತೆ ಒಟ್ಟು ಹಣಕಾಸಿನ ವಹಿವಾಟಿನಲ್ಲಿ ೨.೨೨ ಕೋಟಿ ರೂಗಳಷ್ಟು ಲಾಭಾಂಶ ಬಂದಿದೆ ಎಂದು ಶರವಣಕುಮಾರ್ ಸಭೆಯಲ್ಲಿ ಮಾಹಿತಿ ನೀಡಿದರು.
ಸಂಘದ ವತಿಯಿಂದ ವನಸಿರಿ ಕಾರ್ಯಕ್ರಮದಡಿ ಕುಶಾಲನಗರದ ವಿವಿಧ ಬಡಾವಣೆಗಳು ಸೇರಿದಂತೆ ಕೂಡಿಗೆ, ಕೂಡ್ಲೂರು ಮೊದಲಾದ ಪ್ರದೇಶಗಳಲ್ಲಿ ಟ್ರೀ ಗಾರ್ಡನ್‌ಗಳೊಂದಿಗೆ ೭೦೦ ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿದ್ದು ಅವುಗಳು ಈಗ ಮರಗಳಾಗಿ ಪಕ್ಷಿ - ಪ್ರಾಣಿಗಳಿಗೆ ನೆರಳು ನೀಡುತ್ತಿವೆ. ಈ ಬಾರಿಯೂ ೧೫೦ ಗಿಡಗಳನ್ನು ನೆಟ್ಟು ಬೆಳೆಸಲು ಯೋಜಿಸಲಾಗಿದೆ. ಕುಶಾಲನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ೧೧ ಲಕ್ಷ ರೂಗಳ ವೆಚ್ಚದಲ್ಲಿ ಆಧುನಿಕ ಗಣಕಯಂತ್ರದ ಪ್ರಯೋಗಾಲಯ ನಿರ್ಮಿಸಲು ತೀರ್ಮಾನಿಸಲಾಗಿದೆ. ಸಂಘದ ಲಾಭಾಂಶದಲ್ಲಿ ಕುಶಾಲನಗರದ ಆಯ್ದ ಕೆಲವೊಂದು ಸಹಕಾರ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ಅಧ್ಯಕ್ಷ ಶರವಣಕುಮಾರ್ ವಿವರಿಸಿದರು.
ಸಂಘದ ವತಿಯಿಂದ ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ನಿರ್ದೇಶಕರಾದ ಎನ್.ಇ. ಶಿವಪ್ರಕಾಶ್, ಎಂ.ಎA.ಶಾಹಿರ್, ಬಿ.ರಾಮಕೃಷ್ಣಯ್ಯ, ಎಂ.ವಿ.ನಾರಾಯಣ, ಕೆ.ಪಿ.ಶರತ್, ಎಲ್.ನವೀನ್, ಅಮೃತ್, ಕೆ.ಎನ್.ಸುರೇಶ್, ಕವಿತಾ ಮೋಹನ್, ಕೃತಿಕಾ ಪೊನ್ನಪ್ಪ, ಕೀರ್ತಿಲಕ್ಷಿö್ಮ, ಆರ್.ಕೆ.ನಾಗೇಂದ್ರ, ಫ್ರಾನ್ಸಿಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಡಿ.ಶ್ರೀಜೇಶ್, ವ್ಯವಸ್ಥಾಪಕ ಆರ್. ರಾಜ, ಲೆಕ್ಕಪರಿಶೋಧಕ ಚಂದ್ರಶೇಖರ್ ಇದ್ದರು