ಮಡಿಕೇರಿ, ಆ. ೨೫: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾದಲ್ಲೂ ಡಿಜೆ ಅಬ್ಬರಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ವೆಂಕಟರಾಜ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಡಿಕೇರಿ ದಸರಾ ಪದಾಧಿಕಾರಿಗಳು, ಉಪ ಸಮಿತಿಗಳ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಮಡಿಕೇರಿ ದಸರಾ ವ್ಯವಸ್ಥಿತವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಮಂಟಪಗಳಲ್ಲಿ ಅಬ್ಬರದ ಡಿಜೆ ಬಳಕೆ ಮಾಡಬಾರದು ಅಲ್ಲದೆ ಯಾವುದೇ ನೂಕು ನುಗ್ಗಲಿಗೆ ಅವಕಾಶವಾಗದಂತೆ ಸಂಬAಧಿಸಿದವರು ಗಮನ ಹರಿಸಬೇಕು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜ ಯೋತ್ಸವದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದ ನಂತರ ಸರ್ಕಾರ ಸಾರ್ವಜನಿಕರಿಗೆ ಸಭೆ ಸಮಾರಂಭ ಉತ್ಸವಗಳಲ್ಲಿ ತೊಂದರೆಯಾಗದAತೆ ನಿಗಾ ವಹಿಸುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಿದೆ ಆದ್ದರಿಂದ ಯಾವುದೇ ತೊಂದರೆಗಳಾದರೂ ಅಧಿಕಾರಿಗಳು ಸರಕಾರಕ್ಕೆ ಉತ್ತರಿಸಬೇಕಾಗುತ್ತದೆ ಈ ಹಿನ್ನೆಲೆಯಲ್ಲಿ ದಸರಾ ಸಮಿತಿ ಹಾಗೂ ದಶಮಂಟಪದ ಸಮಿತಿಗಳು ಸರಕಾರದ ನಿಯಮಗಳನ್ನು ನ್ಯಾಯಾಲಯದ ನಿರ್ದೇಶನಗಳನ್ನು ಪಾಲನೆ ಮಾಡುವ ಮೂಲಕ ವ್ಯವಸ್ಥಿತ ಹಾಗೂ ಸುರಕ್ಷಿತ ದಸರಾ ಆಚರಣೆಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಕೆ. ರಾಮರಾಜನ್ ಮಾತ ನಾಡಿ, ಮಂಟಪ ಸಮಿತಿಗಳು ಕಡ್ಡಾಯವಾಗಿ ಸರಕಾರದ ನಿಯಮ ಗಳನ್ನು ಪಾಲನೆ ಮಾಡಬೇಕು. ಮಂಟಪಗಳನ್ನು ರಚಿಸುವ ಟ್ರಾಕ್ಟ ರ್‌ಗಳಲ್ಲಿ ಎಷ್ಟು (ಮೊದಲ ಪುಟದಿಂದ) ಭಾರವನ್ನು ಹಾಕಲಾಗುತ್ತದೆ. , ಮಂಟಪಕ್ಕಾಗಿ ಬಳಸುವ ವಾಹನಗಳ ಸುಸ್ಥಿತಿಯ ಬಗ್ಗೆ ಹಾಗೂ ಮಂಟಪದ ಉದ್ದ ಹಾಗೂ ಅಗಲ ಎಷ್ಟಿರುತ್ತದೆ ಎಂದು ಆರ್ ಟಿ ಓ ಗೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸಲು ಸಾಧ್ಯವಾಗದ ರೀತಿಯಲ್ಲಿ ಮಂಟಪಗಳನ್ನು ರಚಿಸಬಾರದು ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್‌ಕುಮಾರ್ ಮಾತನಾಡಿ, ಡಿಜೆಯನ್ನು ನಿಗದಿತ ಡೆಸಿಬಲ್‌ಗಿಂತ ಹೆಚ್ಚಾಗಿ ಬಳಸಬಾರದು. ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಸಂದರ್ಭ ಕೂಡ ಪ್ರೇಕ್ಷಕರಿಗೆ ಹೆಚ್ಚಿನ ಶಬ್ದದಿಂದ ಕಿರಿಕಿರಿಯಾಗದಂತೆ ಎಚ್ಚರ ವಹಿಸಬೇಕೆಂದರು. ಮಂಟಪಗಳ ನಡುವಿನ ಸ್ಪರ್ಧೆಯಿಂದಾಗಿ ಜನರಿಗೆ ಮಂಟಪಗಳ ಕಥಾ ಸಾರಾಂಶದ ಪ್ರದರ್ಶನ, ವೀಕ್ಷಣೆಗೆ ಸರಿಯಾಗಿ ಅವಕಾಶ ಸಿಗುತ್ತಿಲ್ಲ ಆದ್ದರಿಂದ ಸ್ಪರ್ಧೆಯನ್ನು ಬದಿಗಿಟ್ಟು ಎಲ್ಲಾ ಮಂಟಪಗಳಿಗೂ ಸಮಾನವಾದ ಬಹುಮಾನ ನೀಡುವತ್ತ ಸಮಿತಿ ಗಮನ ಹರಿಸಿದರೆ ಒಳಿತು ಎಂದು ಏ ಎಸ್ ಪಿ ಸಲಹೆಇತ್ತರು. ದಸರಾ ಸಮಿತಿ ಅಧ್ಯಕ್ಷೆ ಪಿ. ಕಲಾವತಿ, ಕಾರ್ಯಾಧ್ಯಕ್ಷ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಸೇರಿದಂತೆ ಪದಾಧಿಕಾರಿಗಳು, ಉಪ ಸಮಿತಿ ಅಧ್ಯಕ್ಷರುಗಳು ದಸÀರಾ ಕಾರ್ಯಕ್ರಮದ ತಯಾರಿ ಬಗ್ಗೆ ಮಾಹಿತಿ ನೀಡಿದರು.