ಕುಶಾಲನಗರ ಆ. ೨೬: ಭಾರತೀಯ ಸಂಸ್ಕೃತಿಯಲ್ಲಿ ಬಳೆಗಳಿಗೆ ಹೆಚ್ಚಿನ ಮೌಲ್ಯವಿದೆ. ಬಳೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಯಾವುದೇ ಮಹಿಳೆ ಎಷ್ಟೇ ಅಲಂಕಾರ ಮಾಡಿಕೊಂಡರೂ ಬಳೆ ತೊಡದೆ ಪರಿಪೂರ್ಣ ಮಹಿಳೆ ಎಂದು ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಅನುಷಾ ಅರ್ಜುನ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಾಸವಿ ಯುವತಿಯರ ಸಂಘದ ನೇತೃತ್ವದಲ್ಲಿ ಕುಶಾಲನಗರ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಗೌರಿ ಹಬ್ಬದ ಅಂಗವಾಗಿ ಮುತ್ತೆöÊದೆಯರಿಗೆ ಹಸಿರು ಬಳೆ ತೊಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಸನಾತನ ಧರ್ಮದ ಪ್ರಕಾರ ಬಳೆ ಮುತ್ತೆöÊದೆಯರಿಗೆ ಭೂಷಣ. ಮನೆಯಲ್ಲಿ ಇರುವ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ಮಹಿಳೆಯರ ತನಕ ಗಾಜಿನ ಬಳೆ ತೊಟ್ಟು ಸಂಭ್ರಮಿಸುವುದನ್ನು ಕಾಣುತ್ತೇವೆ. ಈ ರೀತಿಯ ಶ್ರೇಷ್ಠ ಆಚರಣೆಯನ್ನು ಇಂದಿನ ಯುವಪೀಳಿಗೆಯಲ್ಲಿ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಬಳೆಗಾರ ರಮೇಶ್ ದಂಪತಿ ಎಲ್ಲಾ ಮಹಿಳೆಯರಿಗೂ ಬಳೆ ತೊಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆರ್ಯವೈಶ್ಯ ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಯುವತಿಯರ ಸಂಘದ ಉಪಾಧ್ಯಕ್ಷೆ ಅಶ್ವಿನಿ, ಕಾರ್ಯದರ್ಶಿ ಹೇಮಾ, ಸಹ ಕಾರ್ಯದರ್ಶಿ ಶ್ರಾವಣಿ, ಖಜಾಂಚಿ ಸಿಂಧೂ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ರಂಜಿತಾ, ಕ್ರೀಡಾ ಕಾರ್ಯದರ್ಶಿ ಸಹನಾ, ಪದಾಧಿಕಾರಿಗಳು ಇದ್ದರು.