ವೀರಾಜಪೇಟೆ, ಆ. ೨೫: ಧರ್ಮಸ್ಥಳ ಪ್ರಕರಣದ ಹಿಂದೆ ಅಂತರರಾಷ್ಟಿçÃಯ ಮಟ್ಟದ ಷಡ್ಯಂತ್ರ ಇರುವುದರಿಂದ ಎನ್.ಐ.ಎ ಯಂತಹ ತನಿಖಾ ಸಂಸ್ಥೆಗಳಿAದ ಪಾರದರ್ಶಕ ತನಿಖೆ ನಡೆಸಬೇಕಿದೆ ಎಂದು ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಆಗ್ರಹಿಸಿದರು.
ವೀರಾಜಪೇಟೆ ಬಿಜೆಪಿ ಮಂಡಲದ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ನೇತೃತ್ವದಲ್ಲಿ ವೀರಾಜಪೇಟೆಯಲ್ಲಿ ಧರ್ಮಸ್ಥಳÀ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಯ ಮೇಲೆ ಅಪಪ್ರಚಾರ ಮತ್ತು ರಾಜ್ಯ ಕಾಂಗ್ರೆಸ್ ಸರಕಾರದ ಧರ್ಮವಿರೋಧಿ ನೀತಿ ಖಂಡಿಸಿ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಧರ್ಮಸ್ಥಳ ಎಂದರೆ ಅನೇಕ ಭಕ್ತಾದಿಗಳ ಶ್ರದ್ದಾ ಕೇಂದ್ರವಾಗಿದೆ. ಹಿಂದಿನ ಕಾಲದಿಂದಲೂ ನಮ್ಮ ಪೂರ್ವಜರು ಮಂಜುನಾಥನ ಆಶೀರ್ವಾದ ಪಡೆದು ತಮ್ಮ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದರು. ಇಂದು ಆ ಕ್ಷೇತ್ರದ ವಿರುದ್ದ ಇಲ್ಲ ಸಲ್ಲದ ಅಪಪ್ರಚಾರ, ಷಡ್ಯಂತ್ರ ನಡೆಯುತ್ತಿದೆ. ಇದರಿಂದಾಗಿ ಸಹಜವಾಗಿ ಭಕ್ತಾದಿಗಳಿಗೆ ಆಕ್ರೋಶ, ಅಸಮಾಧಾನ ನೋವು ಉಂಟಾಗಿದೆ. ಆದರೆ ನಮ್ಮದು ಪ್ರಜಾಪ್ರಭುತ್ವ ದೇಶವಾಗಿದ್ದು ಕಾನೂನನ್ನು ಗೌರವಿಸಬೇಕಿದೆ.
ಈ ನಿಟ್ಟಿನಲ್ಲಿ ರಚಿತವಾಗಿರುವ ಎಸ್.ಐ.ಟಿ ಸೂಕ್ತ ರೀತಿಯ ತನಿಖೆ ನಡೆಸಬೇಕಿದೆ. ಷಡ್ಯಂತ್ರದ ಹಿಂದಿರುವ ಶಕ್ತಿಗಳನ್ನು ಕಂಡು ಹಿಡಿಯುವ ಕೆಲಸ ಮಾಡಬೇಕಿದೆ. ಅನಾಮಿಕನ ವಿಚಾರ ಬಯಲಾಗಿದೆ. ಸುಜಾತ ಭಟ್ ವಿಚಾರ ಬಯಲಾಗಿದೆ. ಆದರೆ ಅವರಿಗೆ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರೇರಣೆ ನೀಡಿದವರ ಬಗ್ಗೆ ತನಿಖೆಯಾಗಬೇಕಿದೆ. ಭಾರತ ಧರ್ಮಾದಾರಿತ ದೇಶವಾಗಿ ಮುನ್ನಡೆಯುತ್ತಿದೆ. ಜನರ ಧಾರ್ಮಿಕ ಭಾವನೆಗಳ ವಿರುದ್ದ ಕೆಲವು ಶಕ್ತಿಗಳು ಅಪಪ್ರಚಾರ, ಷಡ್ಯಂತ್ರ ನಡೆಸುವ ಕೆಲಸ ನಿಲ್ಲಬೇಕು. ನಾವು ಇಂತಹ ವಿಚಾರದ ತಾರ್ಕಿಕ ಅಂತ್ಯದವರೆಗೆ ಹೋರಾಟ ನಡೆಸಬೇಕೆಂದು ಹೇಳಿದರು.ಮಾಜಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ಪ್ರಕರಣವನ್ನು ಎನ್.ಐ.ಎ. ತನಿಖೆ ಮಾಡಬೇಕೆಂದು ಒತ್ತಾಯಿಸಿದರು. ವಿಧಾನಸಭಾ ನಮ್ಮ ಆಚಾರ, ವಿಚಾರ, ಧಾರ್ಮಿಕತೆ, ಶ್ರದ್ಧಾ ಕೇಂದ್ರಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಹೋರಾಟ ನಡೆಸುವ ಅನಿವಾರ್ಯತೆ ಬಂದಿದೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರವೇ ನೇರ ಹೊಣೆಯಾಗಿದೆ. ಶ್ರೀ ಕ್ಷೇತ್ರದಲ್ಲಿ ಈ ಹಿಂದೆ ಅತ್ಯಾಚಾರ ಆರೋಪ ಕೇಳಿ ಬಂದಾಗ ನಾವು ಸೂಕ್ತ ತನಿಖೆಗೆ ಆಗ್ರಹಿಸಿದ್ದೇವೆ. ಅದು ಸಿಬಿಐವರೆಗೆ ತನಿಖೆಯಾಗಿ ಪ್ರಕರಣ ಮುಕ್ತಾಯವಾದ ಬಳಿಕವೂ ಧರ್ಮವಿರೋಧಿಗಳು ಸೇರಿ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ. ಈ ಹಿಂದೆಯೂ ನಮ್ಮ ಪವಿತ್ರ ಕ್ಷೇತ್ರದ ಮೇಲೆ ಅಪಪ್ರಚಾರ ವ್ಯವಸ್ಥಿತವಾಗಿ ನಡೆಸಲಾಗಿದೆ. ಶಬರಿಮಲೆಯಲ್ಲಿ ಜ್ಯೋತಿ ಇಲ್ಲ ಎನ್ನುವುದು ಸೇರಿ ಅನೇಕ ಧಾರ್ಮಿಕ ಭಾವನೆಗಳ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಧರ್ಮಸ್ಥಳದಲ್ಲಿ ವ್ಯಾಪಕ ಅತ್ಯಾಚಾರ ನಡೆದಿದೆ ಎಂದು ದೇಶ, ವಿದೇಶದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಯಾರೇ ಮಾತನಾಡಿದರೂ ಎಫ್ ಐ ಆರ್ ದಾಖಲಿಸುವ ಸರಕಾರ ಈ ವಿಚಾರದಲ್ಲಿ ಕೀಳಾಗಿ ಮಾತನಾಡಿದರೂ ಮೌನವಾಗಿದೆ ಎಂದರೆ ಅವರ ಬೆಂಬಲವು ಇದೆ ಎಂದು ಆರೋಪಿಸಿದರು.
ಭಾಜಪಾ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಅನಾಮಿಕನ ಮಾತಿಗೆ ಸರಕಾರ ಒತ್ತುನೀಡಿ ಎಸ್ ಐ ಟಿ ರಚನೆ ಮಾಡಿ ವಿನಾಕಾರಣ ಕಂಡಕAಡಲ್ಲಿ ಆಗೆಯಲಾಯಿತು. ಕೋಟ್ಯಂತರ ಹಣ ವ್ಯಯ ಮಾಡಿತು. ಮೊದಲೇ ಆತನ ಕುರಿತು ತನಿಖೆ ಮಾಡಬೇಕಿತ್ತು. ಆದರೆ ಸರಕಾರ ಹಿಂದು ಧರ್ಮ ಮತ್ತು ಧಾರ್ಮಿಕ ಭಾವನೆಯ ವಿರುದ್ಧದ ನಡೆಯಿಂದಾಗಿ ಈ ವಿಚಾರದಲ್ಲಿ ತಲೆ ತಗ್ಗಿಸುವಂತಾಯಿತು. ಈ ಷಡ್ಯಂತ್ರದ ಹಿಂದೆ ಕೆಲವು ಎಡಪಂಥೀಯ ಶಕ್ತಿಗಳಿವೆ. ಅವು ಅಂತರರಾಷ್ಟಿçÃಯ ಮಟ್ಟದಲ್ಲಿ ಕೆಲಸ ಮಾಡುತ್ತಿವೆ. ಇದಕ್ಕೆ ಸಮೀರನಂತವರನ್ನು ಬಳಸಿಕೊಳ್ಳುತ್ತಿದೆ. ಇಂತಹ ದುಷ್ಟಶಕ್ತಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಮುಂದಿನ ವಾರ ರಾಜ್ಯದಿಂದ ಧರ್ಮಸ್ಥಳಕ್ಕೆ ಹೊರಡುವ ಜಾಥಕ್ಕೆ ಕೊಡಗಿನಿಂದ ಸಾಕಷ್ಟು ಜನರು ಕೈಜೋಡಿಸುವಂತೆ ವಿನಂತಿಸಿದರು.
ಬಿಜೆಪಿ ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದು ಧರ್ಮದ ಪರ ಹೋರಾಟಕ್ಕೆ ಪೊಲೀಸರು ಕಾಂಗ್ರೆಸ್ ಅಣತಿಯಂತೆ ನಡೆದು ಮೈಕ್‌ಗೆ ಪರವಾನಿಗೆ ನೀಡಿಲ್ಲ. ಸಿದ್ಧರಾಮಯ್ಯ ಸರಕಾರ ಹಿಂದೂ ಶ್ರದ್ಧಾ ಕೇಂದ್ರಗಳ ವಿರುದ್ದ ಧಾಳಿ ನಡೆಸುತ್ತಿದೆ. ವಿನಾಕಾರಣ ಅತ್ಯಾಚಾರದ ಕಥೆ ಕಟ್ಟಿ ಶ್ರದ್ದಾ ಕೇಂದ್ರದ ಮೇಲಿರುವ ನಂಬಿಕೆಯನ್ನು ಕಳಚುವಂತೆ ಮಾಡುವ ಹುನ್ನಾರವಾಗಿದೆ. ಇದಕ್ಕೆ ಅನಾಮಿಕ ಸುಜಾತ ಭಟ್ ರಂತ ಪಾತ್ರಧಾರಿಗಳನ್ನು ಸೃಷ್ಟಿಸಲಾಗಿದೆ. ಇದಕ್ಕೆ ಪೂರಕವಾಗಿ ತಮಿಳುನಾಡಿನ ಸಂಸದ ಶಶಿಕಾಂತ್ ಸೆಂದಿಲ್ ಅವರು ರಾಹುಲ್ ಗಾಂಧಿಯ ಮೇಲೆ ಒತ್ತಡ ಹಾಕಿ ತರಾತುರಿಯಲ್ಲಿ ಎಸ್ ಐ ಟಿ ರಚಿಸುವಂತೆ ನೋಡಿಕೊಳ್ಳಲಾಯಿತು. ರಾಜ್ಯ ಸರ್ಕಾರ ಎಷ್ಟರ ಮಟ್ಟಿಗೆ ದಿವಾಳಿಯಾಗಿದೆ ಎಂದರೆ ಗಡಿಯಾರ ಕಂಬದಿAದ ತಾಲೂಕು ಕಚೇರಿಗೆ ತೆರಳಬೇಕಾದರೆ ಒಂದು ಹೆಜ್ಜೆಗೆ ೧೦ ರೂ.ಗಳ ಪ್ರಕಾರ ೧೫೦೦ ರೂ.ಗಳನ್ನು ಸರ್ಕಾರಕ್ಕೆ ಪಾವತಿ ಮಾಡುವಂತಹ ಪರಿಸ್ಥಿತಿಗೆ ತಲುಪಿದೆ ಎಂದು ಅರೋಪಿಸಿದರು.
ಮಹಿಳಾ ಪ್ರಮುಖರಾದ ಪಟ್ಟಡ ರೀನಾ ಪ್ರಕಾಶ್, ಜಿ.ಪಂ. ಮಾಜಿ ಸದಸ್ಯೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿದರು. ವೀರಾಜಪೇಟೆ ಬಿಜೆಪಿ ಮಂಡಲ ಕಾರ್ಯದರ್ಶಿ ಅಜಿತ್ ಕರುಂಬಯ್ಯ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ನೆಲ್ಲಿರ ಚಲನ್, ಜಿ.ಪಂ. ಮಾಜಿ ಸದಸ್ಯರಾದ ಮೂಕೋಂಡ ಶಶಿ ಸುಬ್ರಮಣಿ, ಮೂಕೋಂಡ ವಿಜು ಸುಬ್ರಮಣಿ, ಅಚ್ಚಪಂಡ ಮಹೇಶ್ ಗಣಪತಿ, ತಾ.ಪಂ. ಮಾಜಿ ಸದಸ್ಯರಾದ ಬಿ.ಎಂ. ಗಣೇಶ್ ವಾಟೇರಿರ ಬೋಪಣ್ಣ, ಕುಞಂಗಡ ಭೀಮಯ್ಯ, ಮತ್ತಿತರರು ಪಾಲ್ಗೊಂಡಿದ್ದರು.
ಗಡಿಯಾರ ಕಂಬದ ಬಳಿ ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ನಡೆಯ ವಿರುದ್ದ ಸಮೀರ್, ಮಟ್ಟಣ್ಣನವರ್ ಮತ್ತು ಮಹೇಶ್ ತಿಮರೋಡಿ ವಿರುದ್ದ ಹಿಂದೂ ಧರ್ಮದ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಲಾಯಿತು. ಕೆಲವು ಕಾಲ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಲಾಯಿತು. ನಂತರ ತಾಲೂಕು ಕಚೇರಿಯವರೆÀಗೆ ಪಾದಯಾತ್ರೆ ನಡೆಸಿ ತಾಲೂಕು ತಹಶೀಲ್ದಾರ್ ಪ್ರವೀಣ್ ಕುಮಾರ್ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ತಹಶೀಲ್ದಾರ್ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳಿಸುವ ಭರವಸೆ ನೀಡಿದರು.