ಚೆಟ್ಟಳ್ಳಿ, ಆ. ೨೬: ಭೂದಾಖಲೆಗಳು ಅಸಮರ್ಪಕವಾಗಿರುವ ಕಾರಣದಿಂದ ಕೃಷಿ ಸಾಲ ಸೇರಿದಂತೆ ಸರಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸರಕಾರ ಹಾಗೂ ಕಂದಾಯ ಇಲಾಖೆಯ ನಿರ್ಲಕ್ಷö್ಯವೇ ಕಾರಣ ಎಂದು ಆರೋಪಿಸಿದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಈ ಬಗ್ಗೆ ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಶ್ರೀ ನರೇಂದ್ರ ಮೋದಿ ರೈತ ಸಹಕಾರ ಸಭಾಂಗಣದಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರು ಹಾಗೂ ಭೂಹಿಡುವಳಿದಾರರ ಜಮೀನಿನ ದಾಖಲೆಗಳು ಸರಿಯಿಲ್ಲದ ಪರಿಣಾಮ ಸಮಸ್ಯೆ ತಲೆದೋರಿದೆ. ಸರಕಾರ ಹಲವು ಕ್ರಮಗಳನ್ನು ಕೈಗೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಜೊತೆಗೆ ಭೂದಾಖಲೆಗಳನ್ನು ಸರಿಪಡಿಸಲು ಹಲವು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಅಲೆಯುವ ಸ್ಥಿತಿ ನಿರ್ಮಾಣವಾಗಿದ್ದು, ಇದುವರೆಗೂ ಸುಧಾರಣೆ ಕಂಡಿಲ್ಲ. ದಾಖಲಾತಿ ಸರಿ ಇಲ್ಲದಿದ್ದರೆ ಸಂಘದಿAದ ಕೃಷಿ ಸಾಲನೀಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಸರಕಾರದ ಹಾಗೂ ಕಂದಾಯ ಇಲಾಖೆಯ ನಿರ್ಲಕ್ಷö್ಯ ಕಾರಣವಾಗಿದೆ ಎಂದು ದೂರಿದರು.
ಈ ಬಾರಿ ಸಂಘವು ರೂ. ೫೪ ಲಕ್ಷ ಲಾಭ ಗಳಿಸಿದೆ. ರೈತರಿಗೆ ಶೇ ೧೫ ಡಿವಿಡೆಂಡ್ ನೀಡಲಾಗುತ್ತದೆ. ರೈತರ ಅನುಕೂಲಕ್ಕಾಗಿ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ. ಸಂಘ ಮುಂದಿನ ವರ್ಷಕ್ಕೆ ೫೦ ವರ್ಷ ಪೂರೈಸಲಿದ್ದು, ಸಂಘದ ಎಲ್ಲಾ ದಾಖಲೆ, ವ್ಯವಹಾರ ಪಾರದರ್ಶಕವಾಗಿದೆ. ಸಮುದಾಯಿಕ ಪ್ರಯೋಜನ ನಿಧಿಯ ಮೂಲಕ ಊರಿನ ದೇವಾಲಯ, ಕೈಮಡ, ಐನ್‌ಮನೆ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡಲಾಗಿದೆ. ಈರಳೆ ಗ್ರಾಮದಲ್ಲಿರುವ ಸಂಘದ ಗೋದಾಮು ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಭೂ ದಾಖಲಾತಿ ಸಮಸ್ಯೆಯ ಬಗ್ಗೆ ಹೋರಾಟದ ಜೊತೆಗೆ ಕಂದಾಯ ಇಲಾಖೆಗೆ ಮುತ್ತಿಗೆ ಹಾಕುವ ಬಗ್ಗೆ ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಆಂತರಿಕ ಲೆಕ್ಕಪರಿಶೋಧಕÀ ಚಂದ್ರಶೇಖರ್ ಮಾತನಾಡಿ, ಸಂಘ ಲಾಭದಲ್ಲಿದ್ದು, ಇದಕ್ಕೆ ಆಡಳಿತ ಮಂಡಳಿ ಶ್ರಮ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಂತರಿಕ ಮಾರುಕಟ್ಟೆಯಲ್ಲಿ ಕಾಫಿಯ ಬೆಲೆ ಕಡಿಮೆಯಾದರೂ ಮಧ್ಯವರ್ತಿಗಳು ಕಾಫಿ ಬೆಳೆಗಾರರಿಂದ ಕಡಿಮೆ ಬೆಲೆಯಲ್ಲಿ ಕಾಫಿ ಖರೀದಿ ಮಾಡುತ್ತಿರುವ ಮೂಲಕ ಬೆಳೆಗಾರರಿಗೆ ವಂಚನೆಯಾಗುತ್ತಿರುವ ಬಗ್ಗೆ ಸಹಕಾರ ಸಂಘದ ಮೂಲಕ ಸರಕಾರಕ್ಕೆ ಹಾಗೂ ಕಾಫಿ ಮಂಡಳಿಗೆ ಒತ್ತಾಯಿಸಬೇಕೆಂದು ಪೇರಿಯನ ವಾಸು ಸಲಹೆ ನೀಡಿದರು.
ಈ ಸಂದರ್ಭ ಅಂತರಾಷ್ಟಿçÃಯ ಆಟೋಕ್ರಾಸ್ ರ‍್ಯಾಲಿಯಲ್ಲಿ ಸಾಧನೆ ತೋರಿದ ಕೊಂಗೇಟಿರ ಬೋಪಯ್ಯ, ಪಿಹೆಚ್ ಡಿ ಪದವಿಯೊಂದಿಗೆ ಮೂರು ಚಿನ್ನದ ಪದಕ ಪಡೆದ ಸೂದನ ಧನ್ಯಶ್ರೀ, ಬಲ್ಲಾರಂಡ ಮಣಿ ಉತ್ತಪ್ಪ, ಪೇರಿಯನ ಜಯಾನಂದ, ಅಯ್ಯಂಡ್ರ ರಾಘವಯ್ಯ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ನಂದಿನಿ, ಉಪಾಧ್ಯಕ್ಷ ಪೇರಿಯನ ಪೂಣಚ್ಚ, ನಿರ್ದೇಶಕರಾದ ಕೊಂಗೇಟೀರ ವಾಣಿಕಾಳಪ್ಪ, ಬಿ.ಎಂ.ಕಾಶಿ, ಪುತ್ತರಿರ ನಂಜಪ್ಪ, ಮುಳ್ಳಂಡ ಮಾಯಮ್ಮ, ಅಕ್ಕಾರಿ ದಯಾನಂದ, ವೇಣುಗೋಪಾಲ್, ಕರ್ಣಯ್ಯನ ಪ್ರಜ್ವಲ್, ಮರದಾಳು ಚೇತನ್, ಗಣೇಶ್ ಪಿ.ಟಿ, ರವಿ ಜೆ.ಆರ್, ಚೋಳಪಂಡ ವಿಜಯ, ಮುಕ್ಕಾಟಿ ಪಳಂಗಪ್ಪ, ಆರ್ಥಿಕ ಬ್ಯಾಂಕಿನ ಪ್ರತಿನಿಧಿ ಎಂ.ಇ. ಮಮತ ಹಾಜರಿದ್ದರು.