ಮಡಿಕೇರಿ, ಆ. ೨೫: ಮಡಿಕೇರಿಯ ಪೊಲೀಸ್ ವಸತಿ ಗೃಹಗಳಲ್ಲಿ ಕೆಲಸಮಯದ ಹಿಂದೆ ಕಳ್ಳತನ ಪ್ರಕರಣ ಒಂದು ನಡೆದಿತ್ತು. ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರ ಮನೆಗಳಿಗೆ ನುಗ್ಗಿದ ಚೋರರು ಇಲಾಖೆಗೆ ಸವಾಲಾಗಿದ್ದರು. ಈ ಪ್ರಕರಣದ ಪತ್ತೆಕಾರ್ಯ ಪೊಲೀಸ್ ಇಲಾಖೆಗೆ ತಲೆನೋವಾಗಿತ್ತು. ಹತ್ತು ಹಲವು ಪ್ರಶ್ನೆಗಳು.... ಸಂಶಯಗಳನ್ನು ಈ ಕಳವು ಪ್ರಕರಣ ಹುಟ್ಟುಹಾಕಿ, ಪೊಲೀಸರು ಮುಜುಗರಕ್ಕೆ ಒಳಗಾಗುವಂತಾಗಿತ್ತು. ಆದರೆ ಈ ಸವಾಲನ್ನು ಸ್ವೀಕರಿಸಿದ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಎದೆÀಗುಂದಲಿಲ್ಲ, ತನ್ನದೇ ಆದ ಪ್ರಯತ್ನ ನಡೆಸಿತ್ತು.

ಪ್ರಕರಣದ ಜಾಡು ಅರಸಿ ಹೊರಟವರು ಮಡಿಕೇರಿಯಿಂದ ಮಧ್ಯಪ್ರದೇಶದ ತನಕವೂ ಅಲೆದಾಡಬೇಕಾಯಿತು. ಅಂತೂ ಕೊನೆಗೆ ಇಬ್ಬರು ಚೋರರನ್ನು ಸೆರೆಹಿಡಿಯಲಾಗಿದೆ. ಈ ಕಾರ್ಯಾಚರಣೆಗೆ ಬರೋಬ್ಬರಿ ರೂ. ೧೫ ಲಕ್ಷದಷ್ಟು ಹಣ ಖರ್ಚಾಗಿದೆ. ಆದರೆ ಇವರನ್ನು ಬಂಧಿಸಿದ್ದು, ನಿಜಕ್ಕೂ ಪ್ರಶಂಸನೀಯ, ಮಾತ್ರವಲ್ಲದೆ ಇದರ ಹಿಂದಿದೆ ಭಯಾನಕ ಚಿತ್ರಣಗಳು. ಈ ಕಳ್ಳರು ಅಂತಿAಥ ವ್ಯಕ್ತಿಗಳಲ್ಲ... ಒಂದು ರೀತಿಯಲ್ಲಿ ನಟೋರಿಯಸ್‌ಗಳು. ಕಳ್ಳತನವೇ ಇವರ ಬದುಕು... ಜೊತೆಗೆ ಕ್ರೂರತನವು ಅಡಗಿದೆ... ಈ ಕಾರ್ಯಾಚರಣೆಯೇ ರೋಚಕ!.

ಜೂನ್ ೧೭ : ಜೂನ್ ೧೭ರ ಮಧ್ಯರಾತ್ರಿ ಮಡಿಕೇರಿ ನಗರದ ಪೊಲೀಸ್ ವಸತಿ ಗೃಹಗಳಲ್ಲಿ ಕಳ್ಳತನ ನಡೆದಿದ್ದು ಈ ಬಗ್ಗೆ ಮರುದಿನ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸ್ಥಳದ ಸನಿಹದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಬೈಕೊಂದರಲ್ಲಿ ಬಂದ ಮೂರು ವ್ಯಕ್ತಿಗಳು ಅಸ್ಪಷ್ಟವಾಗಿ ಕಂಡುಬAದಿದ್ದರು. ಆ ಬೈಕ್ ಮತ್ತೆ ಯಾವ ಕಡೆ ಹೋಗಿದೆ ಎಂಬುದು ಸ್ಪಷ್ಟತೆ ಇರಲಿಲ್ಲ. ಇದೇ ಸಂದರ್ಭದಲ್ಲಿ ಮಕ್ಕಂದೂರಿನಲ್ಲಿ ಬೈಕೊಂದು ಕಳುವಾಗಿದ್ದ ಮಾಹಿತಿ ಬಂದಿದೆ. ಇದರ ಅನ್ವಯ ಮಕ್ಕಂದೂರಿನಲ್ಲಿ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಕಳುವಾದ ಸ್ಥಳದಿಂದ ೨ ಬೈಕು ತೆರಳಿದ್ದು ಅರಿವಾಗಿದೆ. ಈ ಸುಳಿವು ಆದರಿಸಿ ಮುನ್ನಡೆಯಲಾಯಿತು. ಮುಂದೆ ಮಾದಾಪುರದಲ್ಲಿ ಒಂದು ಸುಳಿವು ದೊರೆತಿದೆ. ಅದೇನೆಂದರೆ ಒಟ್ಟಿಗೆ ತೆರಳಿದ್ದ ಎರಡು ಬೈಕುಗಳ ಪೈಕಿ ಅಲ್ಲಿಂದ ಒಂದೇ ಬೈಕ್ ಮುಂದೆ ಹೋಗಿರುವುದು, ನಡುವೆ ಒಂದು ಬೈಕ್ ಮಾಯವಾಗಿತ್ತು. ಅಲ್ಲದೆ ಮುಂದೆ ತೆರಳಿದ್ದ ಆ ಬೈಕ್‌ನಲ್ಲಿ ಮೂವರು ಇದ್ದ ಮುಸುಕಾದ ದೃಶ್ಯ ಆ ವ್ಯಾಪ್ತಿಯ ಸಿಸಿ ಕ್ಯಾಮೆರಾದಲ್ಲಿ ಗೋಚರಿಸಿತ್ತು. ಈ ಹಿನ್ನಲೆ ಶೋಧ ನಡೆಸಿದಾಗ ಒಂದು ಬೈಕ್ ಅನ್ನು ಕಾಂಡನಕೊಲ್ಲಿಯ (ಮೊದಲ ಪುಟದಿಂದ) ಕೆರೆಯೊಂದರಲ್ಲಿ ತಳ್ಳಿಹಾಕಲಾಗಿತ್ತು. ಪತ್ತೆಯಾದ ಈ ಬೈಕಿನ ಮಾಹಿತಿ ಕಲೆಹಾಕಿದಾಗ ಅದು ಗೋವಾದಿಂದ ಕದ್ದಿದ್ದ ಬೈಕ್ ಎಂಬುದು ಅರಿವಾಗಿದೆ. ಅತ್ತ ಮತ್ತೊಂದು ಬೈಕ್‌ನಲ್ಲಿ ತೆರಳಿದ್ದವರು ಹಾಸನದ ಮಲ್ಲಿಪಟ್ಟಣ ತನಕ ಸಂಚರಿಸಿರುವುದು ಬಳಿಕ ಆ ಬೈಕ್ ಅನ್ನು ಹಾಸನದ ಬೇಲೂರು ಬಳಿ ಬಿಟ್ಟಿದ್ದು ಬೇಲೂರಿನಿಂದ ಮತ್ತೊಂದು ಬೈಕ್ ಅಪಹರಿಸಿ ಭದ್ರಾವತಿಯತ್ತ ಸಾಗಿ ಅಲ್ಲಿ ಮನೆ ಯೊಂದರಲ್ಲಿ ಕಳವು ಮಾಡಿರುವುದು ತಿಳಿದುಬಂದಿದೆ.

ಮಡಿಕೇರಿ ಕಡೆಯಿಂದ ಒಂದು ತನಿಖೆ, ಗೋವಾ ಕಡೆಯಿಂದ ಮತ್ತೊಂದು ತನಿಖೆ ಆರಂಭಿಸಿದಾಗ ಈ ಚೋರರ ಬಗ್ಗೆ ಒಂದಷ್ಟು ಖಚಿತ ಮಾಹಿತಿ ದೊರೆತಿದೆ. ಇವರ ಕಳ್ಳತನದ ರೀತಿಯನ್ನು ಪರಾಮರ್ಶಿಸಿದಾಗ ಸಂಶಯದ ಹಾದಿ ಮಧ್ಯಪ್ರದೇಶದ ಮಾರ್ಗ ತೋರಿತ್ತು.

ಐವರ ತಂಡ ಇನ್ನೋವಾ ಕಾರು

ಒಂದಷ್ಟು ಖಚಿತ ಸುಳಿವು ಆದರಿಸಿದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್, ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್ ಪ್ರಭಾಕರ್, ಮುನೀರ್ ಇವರಗಳನ್ನು ಒಳಗೊಂಡ ತಂಡ ಒಂದನ್ನು ರಚಿಸಿ ಈ ತಂಡವನ್ನು ಖಾಸಗಿ ಇನ್ನೋವಾ ಕಾರಿನ ಮೂಲಕ ಮಧ್ಯಪ್ರದೇಶದತ್ತ ಕಳುಹಿಸಲಾಗಿತ್ತು.

ತಾಂಡಾ ಎಂಬುದು ತಾಣ !

ಕಳ್ಳರ ಕುರಿತಾಗಿ ಸಂಗ್ರಹಿದ್ದ ಮಾಹಿತಿಗಳನ್ನು ಮಧ್ಯಪ್ರದೇಶದ ಪೊಲೀಸರಿಗೆ ಕಳುಹಿಸಿ ಸಹಕಾರ ಕೋರಲಾಗಿತ್ತು. ಇನೋವಾ ಕಾರಿನಲ್ಲಿ ತೆರಳಿದ ಐದು ಮಂದಿ ಪೊಲೀಸರ ತಂಡ ಧಾರ್ ಜಿಲ್ಲೆಯ ತಾಂಡಾ ಎಂಬ ಸ್ಥಳಕ್ಕೆ ಕಾಲಿರಿಸಿತ್ತು. ಈ ಜೋರರಿಗೆ ತಾಂಡಾ ಪ್ರದೇಶವೇ ತಾಣ... ಆದರೆ ಅಲ್ಲಿನ ಠಾಣೆಯಲ್ಲಿ ಇವರು ಕಳ್ಳರು ಎಂಬ ಅರಿವಿದ್ದರೂ ಸೂಕ್ತ ಮಾಹಿತಿಗಳಿರಲಿಲ್ಲ. ಬದಲಿಗೆ ಕೆಲವೊಂದು ದುಷ್ಕೃತ್ಯಗಳಿಗಾಗಿ ಆ ಠಾಣೆಗೆ ಇವರು “ವಾಂಟೆಡ್'' ವ್ಯಕ್ತಿಗಳಾಗಿದ್ದರು. ಮತ್ತೊಂದು ಆಘಾತಕಾರಿ ಅಂಶವೇನಾಗಿತ್ತೆAದರೆ ಕೊಡಗಿನ ಪೊಲೀಸರ ತಂಡ ತಾಂಡಾ ತಲುಪುವ ಮುನ್ನವೇ ಅಲ್ಲಿನ ಕಳ್ಳರಿಗೆ ಇವರುಗಳ ಫೋಟೋ ತಲುಪಿತ್ತು ಎಂಬುದು ಇದು ಹೇಗೆ ಎಂಬುದೂ ನಿಗೂಢ...!

ಬೇಟೆ ಆರಂಭ.. ಮಾರುವೇಷ

ಮಡಿಕೇರಿಯಲ್ಲಿ ಕಳುವು ಮಾಡಿದ್ದ ಮೂವರು ಸೇರಿದಂತೆ ಇವರಿಗೆ ಸಹಕರಿಸುತ್ತಿರುವ ವ್ಯಕ್ತಿಗಳ ಒಂದಷ್ಟು ವಿವರ ಪೊಲೀಸರಿಗೆ ಲಭಿಸಿತ್ತು. ಆದರೆ ಬಂಧನ ಮಾತ್ರ ಸಾಧ್ಯವಾಗುತ್ತಿರಲಿಲ್ಲ. ಸ್ಥಳೀಯ ಪೊಲೀಸರಿಗೆ ಇವರು ಬೇಕಾದವರಾಗಿದ್ದು ಅಲ್ಲಿನ ಪೊಲೀಸರಿಗೆ ಸಿಗದವರನ್ನು ವಶಕ್ಕೆ ಪಡೆಯಲು ಈ ತಂಡ ತಮ್ಮದೇ ಪ್ರಯತ್ನ ಮಾಡಬೇಕಾಯಿತು.

ಈ ಕಾರಣದಿಂದಾಗಿ ಇವರು ಅಲ್ಲಿ ರೈಲ್ವೆಗೆ ಸಂಬAಧಿಸಿದAತೆ ಕೆಲಸ ನಿರ್ವಹಣೆಯಾಗುತ್ತಿದ್ದುದನ್ನು ಅವಲೋಕಿಸಿ ಆ ಕೆಲಸಗಾರರ ಸೋಗಿನ ವೇಷ ಧರಿಸಬೇಕಾಯಿತು. ಮತ್ತೊಂದು ವಿಚಾರವೆಂದರೆ ಈ ಊರಿಗೆ ಊರೇ ಕಳ್ಳತನದ ಮಂದಿ ತುಂಬಿದವರಾಗಿದ್ದಾರೆ. ಎಲ್ಲಾ ಚೋರರು ಪರಸ್ಪರ ಸಂಪರ್ಕ ಹೊಂದಿರುತ್ತಿದ್ದರು. ಈ ಹಿನ್ನೆಲೆ ಒಂದಷ್ಟು ಎಡವಿದರೂ ಇವರು ಯಾರು ಸಿಗಲಾರರು... ತಾಂಡಾ ಮಾತ್ರವಲ್ಲ ಸುಮಾರು ೧೫೦ ರಿಂದ ೨೦೦ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇವರುಗಳು ತಲೆಮೆರೆಸಿಕೊಂಡುಬಿಡುತ್ತಿದ್ದರು. ಬಹುತೇಕ ರಾಜ್ಯಗಳ ಪೊಲೀಸರಿಗೆ ಬೇಕಾದ ಕಳ್ಳರೆಲ್ಲರಿಗೂ ತಾಣ ಈ ತಾಂಡಾ. ಇದರಿಂದಾಗಿ ಗೋವಾ, ಮಹಾರಾಷ್ಟç, ಕರ್ನಾಟಕ ಸೇರಿದಂತೆ ಐದಾರು ರಾಜ್ಯಗಳ ಪೊಲೀಸರು ಇಲ್ಲಿ ತಲಾಶ್‌ಗೆಂದು ಆಗಾಗಿ ಬರುವುದು ಸಹಜ.

ಹೊಸಬರು ಬಂದರೆ ಪೊಲೀಸರೇ...

ತಾಂಡಾ ಪ್ರವಾಸಿ ತಾಣವು ಅಲ್ಲ... ಇಲ್ಲಿಗೆ ಹೊಸ ಜನರು ಬರುವುದು ಇಲ್ಲ, ಯಾರಾದರೂ ಬಂದರೆAದರೆ ಅವರು ಯಾವುದೋ ರಾಜ್ಯಕ್ಕೆ ಸೇರಿದ ಪೊಲೀಸರಂದೇ ಅರ್ಥ. ಈ ಕಾರಣದಿಂದಾಗಿ ಮಾರುವೇಷದ ಕಾರ್ಯಾಚರಣೆ ಅನಿವಾರ್ಯ ಎಂಬAತಾಗಿತ್ತು. ತಾಂಡಾದಲ್ಲಿ ಮೊಕ್ಕಾಂ ಹೂಡಿದ ಪೊಲೀಸರ ತಂಡ ಹಲವು ದಿನ ವಿವಿಧ ರೀತಿಯಲ್ಲಿ ಪ್ರಯತ್ನ ನಡೆಸಿದೆ. ಒಂದೆರಡು ಬಾರಿ ಒಂದಿಬ್ಬರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರೂ, ಈ ಮಂದಿ ಕೊಡಗಿನ ಮೊಕದ್ದಮೆಗೆ ಬೇಕಾದವÀರಾಗಿರಲಿಲ್ಲ... ಇದರಿಂದ ಇವರು ಕಳ್ಳರೇ ಆಗಿದ್ದರೂ ಕೈ ಕೈ ಹಿಸುಕಿಕೊಂಡು ಅವರನ್ನು ಬಿಡಬೇಕಾದ ಫಜೀತಿಯನ್ನು ಈ ತಂಡ ಅನುಭವಿಸಿದೆ.

ಸ್ಥಳೀಯ ಕಳ್ಳರಿಗೆ ಅಲ್ಲಿನ ಕೆಲವು ಪೊಲೀಸರು ಸಹಕಾರ ನೀಡುತ್ತಿದ್ದುದು ಮತ್ತೊಂದು ಕಷ್ಟ... ಇದಲ್ಲದೆ ಬೇರೆ ರಾಜ್ಯದ ಪೊಲೀಸರು ಈ ತಂಡದ ಸದಸ್ಯರನ್ನು ಸಂಶಯದಿAದ ನೋಡಿದ್ದ ಪ್ರಸಂಗವೂ ಎದುರಾಗಿತ್ತು.

ಇಲ್ಲಿನ ಖತರ್ನಾಕ್ ಕಳ್ಳರು ಅವರು ಕಳ್ಳತನಕ್ಕೆ ಎಂದು ಹೊರಟಾಗ ಜೊತೆಗೆ ಯಾರೂ ಸಿಗುತ್ತಾರೋ ಅವರನ್ನು ಕರೆದುಕೊಂಡು ಹೋಗಿಬಿಡುತ್ತಾರೆ. ಒಂದು ಸ್ಥಳದಿಂದ ಹೊರಟರೆಂದರೆ ಎಲ್ಲೆಲ್ಲಿ ಸಾಧ್ಯವಾಗುತ್ತೋ ಅಲ್ಲೆಲ್ಲಾ ಕೃತ್ಯ ನಡೆಸಿ ಮತ್ತೆ ಊರು ಸೇರಿಕೊಂಡು ಬಿಡುತ್ತಾರೆ. ಗಡಿ ಭಾಗದಲ್ಲಿಯೂ ಇವರ ಕೃತ್ಯಗಳು ಸರ್ವೇಸಾಮಾನ್ಯವಂತೆ.

ಕ್ರೂರಿಗಳು : ತಾಂಡಾದ ಖತರ್ನಾಕ್ ಮಂದಿ ಮಹಾರಾಷ್ಟçದ ಜಡ್ಜ್ ಒಬ್ಬರ ಮನೆಯಲ್ಲೇ ಕಳ್ಳತನ ನಡೆಸಿದ ಪ್ರಕರಣವಿದೆ. ಇಲ್ಲಿ ಅವರನ್ನು ಮುಗಿಸಲೂ ಇವರು ಮುಂದಾಗಿದ್ದರು.... ಇದೇ ರೀತಿಯಲ್ಲಿ ಇಲ್ಲಿನ ಕಳ್ಳರ ತಂಡವನ್ನು ಗುಜರಾತ್‌ನಲ್ಲಿ ಕಳವಿಗೆ ಮುಂದಾಗಿದ್ದಾಗ ಸ್ಥಳೀಯರು ಹಾಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ ವೇಳೆ ಇವರು ತಮ್ಮ ಮೇಲೆ ಬಿದ್ದವರ ಮೇಲೆ ಹಲ್ಲೆ ನಡೆಸಿ ಕಣ್ಣುಗುಡ್ಡೆ ಕಿತ್ತುಹಾಕಿ ಪರಾರಿಯಾದ ಕ್ರೂರತ್ವವನ್ನು ಮೆರೆದಿದ್ದಾರೆ. ಮತ್ತೊಂದು ಪ್ರಕರಣದ ವೇಳೆ ಜನರಿಗೆ ಮಾತ್ರವಲ್ಲದೆ ಸ್ಥಳೀಯ ಪೊಲೀಸರಿಗೂ ಹಲ್ಲೆ ನಡೆಸಿದ್ದಾರೆ. ಈ ಘಟನೆ ಕೊಡಗಿನ ಪೊಲೀಸ್ ತಂಡ ಅಲ್ಲಿ ಇದ್ದ ಸಂದರ್ಭವೇ ನಡೆದಿತ್ತು. ಜೊತೆಗೆ ಮಹಿಳೆಯರು ಸೇರಿಕೊಂಡು ಪೊಲೀಸರ ಮೇಲೆಯೇ ಆಪಾದನೆ ಹೊರೆಸಿ ದೂರು ದಾಖಲಿಸಿದಂತಹ ಪ್ರಕರಣಗಳು ನಡೆದಿದ್ದವು. ಇಂತಹ ಸಂಕಷ್ಟದ ನಡುವೆ ಒಂದೊAದು ದಿನ ಒಂದೊAದು ರೀತಿಯಲ್ಲಿ ಐವರು ಬೇರೆ ಬೇರೆಯಾಗಿ ವಾಟ್ಸಾö್ಯಪ್ ಗುಂಪು ಮಾಡಿಕೊಂಡು ಕಾರ್ಯಾಚರಣೆ ನಡೆಸಿದ್ದರು. ಇಂತಹ ಸಾಹಸ ಸರಿಸುಮಾರು ೨೬ ದಿನಗಳ ಕಾಲ ನಡೆದಿದೆ. ತಾಂಡಾದ ವ್ಯಕ್ತಿಗಳಾದರೂ ಸುಮಾರು ೨೦೦ ಕಿಲೋಮೀಟರ್ ಸುತ್ತಳತೆಯಲ್ಲಿ ಈ ಕಳ್ಳರು ಇವರನ್ನು ಅಲೆದಾಡಿಸಿದ್ದರು.

ಕಳ್ಳರಿಗೆ ಜಾಗ ವರದಾನ : ಈ ಕಳ್ಳರು ಗ್ರಾಮದ ಮನೆಯಲ್ಲಿ ಇರುತ್ತಿರಲಿಲ್ಲ. ಇದೊಂದು ವಿಶಾಲವಾದ ಬಯಲು ಪ್ರದೇಶವಾಗಿದ್ದು, ನಡುವೆ ಬೆಟ್ಟ ಹೊಂದಿದೆ. ಈ ಬೆಟ್ಟವನ್ನೇರಿ ಕೂತರೆಂದರೆ ಕಣ್ಣು ಹಾಯಿಸುವಷ್ಟು ದೂರದಲ್ಲಿ ಯಾರೇ ಬಂದರೂ ಕಂಡುಹಿಡಿದು ಅಲ್ಲಲ್ಲಿ ಬಿಲ ಸೇರಿಕೊಂಡು ಬಿಡುತ್ತಾರೆ. ಟೆಂಟ್ ಹಾಕಿಕೊಂಡು ಗುಡ್ಡದಲ್ಲೇ ಇವರ ವಾಸ.. ಇಲ್ಲಿಗೆ ಇವರ ಬೆಂಬಲದ ವ್ಯಕ್ತಿಗಳು ಎಲ್ಲವನ್ನೂ ತಲುಪಿಸುತ್ತಿದ್ದರು. ಇಂತಹ ಸಂಕಷ್ಟದ ನಡುವೆ ಕೊನೆಗೂ ಒಬ್ಬ ಬೇಕಾದ ವ್ಯಕ್ತಿಯನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ಸು ಕಂಡರು. ಆತನನ್ನು ಪ್ರತ್ಯೇಕವಾಗಿರಿಸಿ ಬಾಯಿ ಬಿಡಿಸಿದಾಗ ಮತ್ತೊಬ್ಬನ ಬಂಧನ ಸಾಧ್ಯವಾಗಿದೆ. ಇಬ್ಬರ ಬಂಧನದ ಹಿಂದೆ ಪೊಲೀಸರ ಸಾಹಸ ಇನ್ನಷ್ಟಿದ್ದು... ಇಬ್ಬರ ಬಂಧನಕ್ಕೂ ಮುನ್ನ ಇವರಿಗೆ ಬೆಂಬಲ ನೀಡಿ ಸಹಕರಿಸುತ್ತಿದ್ದ ಒಂದಷ್ಟು ಮರಿ ಪುಡಾರಿ ಕಳ್ಳರನ್ನು ತೀವ್ರ ವಿಚಾರಣೆಗೆ ಒಳಪಡಿಸಬೇಕಾಯಿತು.

ಇದರ ನಡುವೆ ಕರ್ನಾ ಟಕದಿಂದ ಬಂದ ಪೊಲೀಸರು ಬರಿಗೈಯಲ್ಲಿ ಹಿಂತಿರುಗಿ ಹೋಗಿದ್ದಾರೆ ಎಂಬದಾಗಿಯೂ ಬಿಂಬಿಸುವ ಮೂಲಕ ಕಳ್ಳರ ಗಮನವನ್ನು ಬೇರೆಡೆ ಸೆಳೆಯಲಾಗಿತ್ತು... ಮಾಹಿತಿ ಕಲೆಹಾಕಲು ಒಂದಿಬ್ಬರನ್ನು ವಶಕ್ಕೆ ಪಡೆದು ಕಾವಲು ಕಾಯುವ ಪರಿಸ್ಥಿತಿಯನ್ನೂ ಎದುರಿಸಿದ ತಂಡ ಕೊನೆಗೂ ಖತರ್ನಾಕ್ ಕಳ್ಳರಾದ ಸುರೇಶ್ ಸೆಂಗಾಲ್ ಹಾಗೂ ಮನೀಶ್ ಭಗೇಲ್ ಎಂಬಿಬ್ಬರನ್ನು ಬಂಧಿಸಿ ಕೊಡಗಿಗೆ ಕರೆ ತರುವಲ್ಲಿ ಯಶಸ್ವಿಯಾಗಿದೆ.

ಹೊರಬಂದರೆ ಮತ್ತೆ ಬರಲಾರರು

ತಾಂಡಾದ ಕಳ್ಳರ ಕಥೆಯಲ್ಲಿ ಮತ್ತೊಂದು ಗಂಭೀರ ವಿಚಾರವಿದೆ. ಇಲ್ಲಿನ ಕಳ್ಳರ ತಂಡ ಹಲವು ರಾಜ್ಯಗಳ ಪೊಲೀಸರಿಗೆ ಬೇಕಾದ ವರು. ಒಂದೊಮ್ಮೆ ಇವರು ಬಂಧಿ ತರಾಗಿ ಜಾಮೀನಿನ ಮೇಲೆ ಹೊರ ಬಂದರೆAದರೆ ಮತ್ತೆ ಮೊಕದ್ದಮೆಯ ವಿಚಾರಣೆಗೆ ಸಿಗುವುದೇ ಇಲ್ಲವಂತೆ. ಸಮನ್ಸ್ಗಾಗಲಿ, ವಾರೆಂಟ್‌ಗಾಗಲಿ ಇವರು ಕ್ಯಾರೇ ಅನ್ನೋರು... ಪೊಲೀಸರಿಗೆ ಮತ್ತೆ ಕೈಗೆ ಸಿಗುವುದಿಲ್ಲ ಎನ್ನಲಾಗಿದೆ. ತಾಂಡದಲ್ಲಿನ ಎರಡು ಊರುಗಳ ೩೦೦ ಮಂದಿಗೆ ವಾರೆಂಟ್ ಇದೆಯಂತೆ ಆದರೆ ಅವರು ಪೊಲೀಸರ ಕೈಗೆ ಸಿಗುವುದೇ ಇಲ್ಲ...

ಜೈಲು ಶಿಕ್ಷೆಯೇ ಲೇಸು

ಕಳ್ಳರೆಂದರೆ ಇವರು ಅಂತಿAಥ ಕಳ್ಳರಲ್ಲ ಒಂದೆಡೆಯಿAದ ಹೊರಟರೆ ಅದೆಷ್ಟೋ ದೂರದ ತನಕ ಕುಕೃತ್ಯ ಮೆರೆದು ಮರಳುತ್ತಾರೆ. ಜೊತೆಗೆ ಇಂಥವರೇ ಬೇಕೆಂದಿಲ್ಲ. ಕೃತಕ್ಕೆ ಹೊರಟಾಗ ಯಾರು ಸಿಗುತ್ತಾರೋ ಅವರನ್ನು ಸೇರಿಸಿಕೊಂಡು ಮುಂದುವರೆಯುತ್ತಾರೆ. ಬಂಧಿತರಾಗಿ ಜಾಮೀನು ಲಭಿಸಿತೆಂದರೆ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದ ಉದಾಹರಣೆಗಳೇ ಹೆಚ್ಚು... ಪೊಲೀಸರಿಗೂ ಸಿಗಲಾರರು... ಕ್ರೂರತವನ್ನು ಹೊಂದಿದ ಜನ ಇವರು.. ಈ ಹಿನ್ನಲೆ ಇಂತಹ ಕುಖ್ಯಾತರು ಜೈಲಿನಲ್ಲೇ ಇರಬೇಕೆಂಬುದು ಸಾರ್ವಜನಿಕರ ಅಭಿಪ್ರಾಯ.