ಪೊನ್ನಂಪೇಟೆ, ಆ. ೨೪ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಬೀದಿನಾಟಕದ ಮೂಲಕ ಗ್ರಾಮ ಸ್ವಚ್ಛತೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಪೋಕ್ಸೋ ಕಾಯ್ದೆ, ಕುಡಿತದ ದುಷ್ಪರಿಣಾಮ, ಸಾಕ್ಷರತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು.
ಪೊನ್ನಂಪೇಟೆ ಎ ವಲಯದ ಅಧ್ಯಕ್ಷೆ ಪೆಮ್ಮಂಡ ಸುಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಜ್ಞಾನವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಉಷಾರಾಣಿ, ಪೊನ್ನಂಪೇಟೆ ಬಿ ವಲಯ ಅಧ್ಯಕ್ಷೆ ಹೆಚ್.ಆರ್. ಗೀತಾ, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ, ಜಂಟಿ ಕಾರ್ಯದರ್ಶಿ ರೇಖಾ ಶ್ರೀಧರ್, ಪಟ್ಟಣ ಪಂಚಾಯಿತಿ ಸದಸ್ಯ ರಾಮಕೃಷ್ಣ, ಪೊನ್ನಂಪೇಟೆ ವಲಯಾಧಿಕಾರಿ ಹೆಚ್.ಆರ್. ನಾಗರಾಜು, ಸೇವಾ ಪ್ರತಿನಿಧಿಗಳಾದ ರೋಹಿಣಿ, ಗೌರಿ, ಮೋಸಿನ, ಚೋಂದು, ಶಾಲಿನಿ ಹಾಗೂ ವಿವಿಧ ಸಂಘಗಳ ಸದಸ್ಯರು ಹಾಜರಿದ್ದರು.
ಕುಶಾಲನಗರ ವಿದ್ಯಾಸಾಗರ ವೇದಿಕೆಯ ಕಲಾವಿದರು ಬೀದಿ ನಾಟಕ ನಡೆಸಿಕೊಟ್ಟರು.