ಚೆಟ್ಟಳ್ಳಿ, ಆ. ೨೪ : ಏಷಿಯಾ ಫೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್ (ಎಪಿಅರ್‌ಸಿ)ನಲ್ಲಿ ಉತ್ತಮ ಸಾಧನೆ ತೋರಿ ಕ್ಲಾಸ್ ಎಂ೧ ನಲ್ಲಿ ಮೊದಲ ಹಾಗೂ ಓವರಾಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ರ‍್ಯಾಲಿಪಟು ಚೆಟ್ಟಳ್ಳಿಯ ಕೊಂಗೇಟಿರ ಎಂ. ಬೋಪಯ್ಯ ಅವರನ್ನು ಚೆಟ್ಟಳ್ಳಿಯ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ಯಾಂ ಪೇರಿಯನ ಸ್ವಾಗತಿಸಿ, ಕಾರ್ಯದರ್ಶಿ ಕಾರ್ತಿಕ್ ದಂಬೆಕೋಡಿ ಸನ್ಮಾನಿತರ ಪರಿಚಯ ಮಾಡಿದರು. ಕ್ಲಬ್‌ನ ಹಿರಿಯ ಸದಸ್ಯರಾದ ವಾಯುಪಡೆಯ ನಿವೃತ್ತ ಸೇನಾನಿ ಪುತ್ತರಿರ ಗಣೇಶ್ ಭೀಮಯ್ಯ, ಪೇರಿಯನ ಜಯಾನಂದ ದಂಬೆಕೋಡಿ ಪೂವಯ್ಯ, ಸೋಮೆಯಂಡ ದಿಲೀಪ್ ಅಪ್ಪಚ್ಚು, ಕೊಂಗೇಟಿರ ಹರೀಶ್ ಅಪ್ಪಣ್ಣ ಬೋಪಯ್ಯ ಅವರಿಗೆ ಸನ್ಮಾನಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ನವೀನ್ ಪೇರಿಯನ, ಖಜಾಂಜಿ ಕೊಡಂದೆರ ರವಿಪೊನ್ನಪ್ಪ, ಕೊಂಗೇಟಿರ ದೇಚು ಮುದ್ದಯ್ಯ ಹಾಜರಿದ್ದರು. ಸಂಘದ ಸದಸ್ಯರು ಭಾಗವಹಿಸಿದ್ದರು.