ಮಡಿಕೇರಿ, ಆ. ೨೬: ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಕೆಲವು ಮಂದಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೂರ್ನಾಡು ಧರ್ಮಸ್ಥಳ ಭಕ್ತ ಮಂಡಳಿ ವೇದಿಕೆಯಿಂದ ಬೃಹತ್ ಜಾಗೃತಿ ಮೆರವಣಿಗೆ ಮತ್ತು ಸಭೆ ನಡೆಸಲಾಯಿತು.

ಮೂರ್ನಾಡು ಕಾಲೇಜು ಮೈದಾನದಿಂದ ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಗೌಡ ಸಮಾಜದಲ್ಲಿ ಸಮಾವೇಶ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಕೊಡಗು ಜಿಲ್ಲಾ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಪಿ.ಎಂ. ರವಿ ಮಾತನಾಡಿ, ದಕ್ಷಿಣದ ಕಾಶಿ ಧರ್ಮಸ್ಥಳ ಕ್ಷೇತ್ರಕ್ಕೆ ೮೦೦ ವರ್ಷಗಳ ಇತಿಹಾಸವಿದ್ದು, ಆಣೆ ಪ್ರಮಾಣಕ್ಕೆ ಹೆಸರುವಾಸಿಯಾಗಿದೆ. ಕೆಲವರು ಅತ್ಯಾಚಾರಕ್ಕೆ ಒಳಗಾದ ಸೌಜನ್ಯ ಹೆಸರಿನಲ್ಲಿ ನಕಲಿ ಹೋರಾಟ ಮಾಡುತ್ತಿದ್ದು, ಧಾರ್ಮಿಕ ಶ್ರÀದ್ಧಾ ಕೇಂದ್ರಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ . ಇಂಥವರ ಬಗ್ಗೆ ಹಿಂದೂ ಬಂಧುಗಳು ಜಾಗೃತರಾಗಬೇಕೆಂದು ಕರೆ ನೀಡಿದರು.

ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಧರ್ಮ ದ್ರೋಹ ಮಾಡುತ್ತಿರುವ ನಕಲಿ ಹೋರಾಟಗಾರರು ಸುಳ್ಳನ್ನು ಪದೇ ಪದೇ ಹೇಳುವ ಮೂಲಕ ಶ್ರೀ ಕ್ಷೇತ್ರದ ಬಗ್ಗೆ ಜನರಲ್ಲಿ ಇದ್ದಂತಹ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದು ಎಡಪಂಥಿಯರ ಕುಮ್ಮಕ್ಕಿನಿಂದ ನಿರಂತರ ತೇಜೊವಧೆ ಮಾಡಲಾಗುತ್ತಿದೆ. ಇವರಿಗೆ ಅಂತರರಾಷ್ಟಿçÃಯ ಮಟ್ಟದಿಂದ ಹಣಕಾಸಿನ ನೆರವು ದೊರಕುತ್ತಿದೆ. ಧರ್ಮ ಸಂರಕ್ಷಣೆಗೆ ನಾವೆಲ್ಲರೂ ಒಂದಾಗಬೇಕಾಗಿದೆ ಎಂದರು. ಎಸ್‌ಐಟಿ ತನಿಖೆಯ ಜೊತೆಗೆ ಎನ್‌ಐಎ ಹಾಗೂ ಇ.ಡಿ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ ಎಂದರು.

ಧಾರ್ಮಿಕ ಮುಖಂಡ ಅಗೋಳಿಕಜೆ ಧನಂಜಯ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು ಹಲವಾರು ವರ್ಷಗಳಿಂದ ಶ್ರೀ ಕ್ಷೇತ್ರದ ಮುಖಾಂತರ ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಇದನ್ನು ಸಹಿಸದ ಕೆಲವರು ಆರೋಪಗಳನ್ನು ಮಾಡುತ್ತಿದೆ. ತಿಮರೋಡಿ , ಮಟ್ಟಣ್ಣನವರ್, ಸಮೀರ್ ಸೇರಿದಂತೆ ಹಲವಾರು ಮಂದಿ ನಕಲಿ ಹೋರಾಟಗಾರರು ಶ್ರೀ ಕ್ಷೇತ್ರಕ್ಕೆ ಅವಮಾನ ಅಪಹಾಸ್ಯ ಮಾಡುತ್ತಿದ್ದು, ಮಂಜುನಾಥ ಮತ್ತು ೪ಏಳನೇ ಪುಟ ಮೊದಲ ಪುಟದಿಂದ) ಅಣ್ಣಪ್ಪ ದೈವ ಕ್ಷಮಿಸುವುದಿಲ್ಲ ಎಂದರು. ಧರ್ಮಸ್ಥಳ ಕ್ಷೇತ್ರದಿಂದ ಶಿಕ್ಷಣ, ಸಾಮೂಹಿಕ ವಿವಾಹ, ಮಹಿಳೆಯರ ಸಬಲೀಕರಣಕ್ಕೆ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ನೆರವು, ಕೆರೆಗಳ ಹೂಳೆತ್ತುವುದು, ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೆರವು ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಇದನ್ನು ಅರಿತುಕೊಳ್ಳಬೇಕು. ಸಾಕ್ಷಿ ಇಲ್ಲದೆ ಅಪಪ್ರಚಾರ ಮಾಡುವವರ ಬಗ್ಗೆ ಕ್ರಮ ಆಗಲಿದೆ ಎಂದರು. ಅಧ್ಯಕ್ಷತೆಯನ್ನು ಧರ್ಮಸ್ಥಳ ಭಕ್ತ ಮಂಡಳಿ ವೇದಿಕೆ ಅಧ್ಯಕ್ಷ ಮೋಹನ್ ವಹಿಸಿದ್ದರು. ಹಿಂದೂ ಸಂಘಟನೆ ಮುಖಂಡರಾದ ಪುದಿಯೊಕ್ಕಡ ರಮೇಶ್, ಸುರೇಶ್ ಮುತ್ತಪ್ಪ, ಧರ್ಮಸ್ಥಳ ಸಂಘದ ಪದಾಧಿಕಾರಿಗಳು ವಿವಿಧ ಸಂಘದ ಪ್ರಮುಖರು, ಧರ್ಮಸ್ಥಳ ಮಂಜುನಾಥ ಭಕ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಮೂರ್ನಾಡು ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಮೂರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಕುಶನ್ ರೈ, ಉಪಾಧ್ಯಕ್ಷೆ ರೇಖಾ ಬಿ.ಎಸ್ .ಉಪಸ್ಥಿತರಿದ್ದರು. ಹೀರಾ ಸುಬ್ಬಯ್ಯ ನಿರೂಪಿಸಿ, ಮೀನಾಕ್ಷಿ ಕೇಶವ ಸ್ವಾಗತಿಸಿದರು. ಸಜೀವ ವಂದಿಸಿದರು.