ಐಗೂರು, ಆ. ೨೪: ಐಗೂರಿನ ಸರಕಾರಿ ಪ.ಪೂ. ಕಾಲೇಜು ಹಾಗೂ ಪ್ರೌಢಶಾಲಾ ಆವರಣದಲ್ಲಿ ಕಾಜೂರಿನ ದಿವಂಗತ ಕಾಳೇರಮ್ಮನ ಪಾಲಾಕ್ಷ ಅವರ ಜ್ಞಾಪಕಾರ್ಥವಾಗಿ ಅವರ ಪತ್ನಿ ಕಾಳೇರಮ್ಮನ ಸಾವಿತ್ರಿ ಮತ್ತು ಮಕ್ಕಳು ರೂ. ೧ ಲಕ್ಷ ವೆಚ್ಚದ ನೂತನ ಧ್ವಜಸ್ತಂಭವನ್ನು ನಿರ್ಮಿಸಿದ್ದು, ಉದ್ಘಾಟನೆ ನೆರವೇರಿತು. ಕಾಳೇರಮ್ಮನ ಸಾವಿತ್ರಿ ತಮ್ಮ ಪುತ್ರ ಅಂತರರಾಷ್ಟಿçÃಯ ಹಾಕಿಪಟು ಹಾಗೂ ಐಗೂರು ಗ್ರಾಮ.ಪಂ. ಮಾಜಿ ಅಧ್ಯಕ್ಷ ಕೆ.ಪಿ. ರಾಯ್, ಅಧ್ಯಾಪಕ ವೃಂದ ಮತ್ತು ಗಣ್ಯರ ಸಮ್ಮುಖದಲ್ಲಿ ನೂತನ ಧ್ವಜಸ್ತಂಬದ ಉದ್ಘಾಟನೆಯನ್ನು ನೆರವೇರಿಸಿದರು.

ಉದ್ಘಾಟನೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಸ್.ಎನ್. ಯೋಗೇಶ್ ಮಾತನಾಡಿ, ತಾಲೂಕಿನಾದ್ಯಂತ ಇರುವ ಎಲ್ಲಾ ಧ್ವಜಸ್ತಂಭಗಳಿಗಿAತ ಅಚ್ಚುಕಟ್ಟಾದ ಧ್ವಜಸ್ತಂಬಭವನ್ನು ನಿರ್ಮಿಸಿಕೊಟ್ಟ ಪಾಲಾಕ್ಷ ಅವರ ಕುಟುಂಬ ವರ್ಗವನ್ನು ಶ್ಲಾಘಿಸಿದರು. ಕಾಳೇರಮ್ಮನ ಸಾವಿತ್ರಿ, ನಿವೃತ್ತ ಉಪನ್ಯಾಸಕರಾದ ಡಿ.ಎಸ್. ಚಂಗಪ್ಪ, ಪ್ರಾಂಶುಪಾಲ ಉಮೇಶ್, ಮುಖ್ಯ ಶಿಕ್ಷಕ ಯಶ್ವಂತ್, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪ ಕಾರ್ಯಕ್ರಮದ ಕುರಿತು ಮಾತನಾಡಿದರು. ಶಿಕ್ಷಕರಾದ ಮಂಜುನಾಥ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ಕೃಷ್ಣಪ್ಪ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಎಸ್.ಎನ್. ಯೋಗೇಶ್, ಭರತ್ ಕುಮಾರ್, ಗ್ರಾಮ.ಪಂ. ಅಧ್ಯಕ್ಷ ಜಿ.ಕೆ. ವಿನೋದ್, ಎಸ್.ಡಿ. ಎಂ.ಸಿ. ಉಪಾಧ್ಯಕ್ಷೆ ಶ್ವೇತಾ, ಪಿ.ಕೆ. ರಾಯ್, ಹರೀಶ್ ಅಯ್ಯಣ್ಣ, ಗ್ರಾಮ ಪಂ. ಸದಸ್ಯ ಪ್ರಮೋದ್, ಕೃಷಿ ಪತ್ತಿನ ಹೊನ್ನಪ್ಪ, ನಿವೃತ ಉಪನ್ಯಾಸಕ ಚಂಗಪ್ಪ, ಪ್ರಾಂಶುಪಾಲ ಉಮೇಶ್, ಮುಖ್ಯ ಶಿಕ್ಷಕ ಯಶ್ವಂತ್, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪ, ಶಿಕ್ಷಕ ಮಂಜುನಾಥ್, ದಿನೇಶ್ ಶೆಟ್ಟಿ, ಪ.ಪೂ. ಕಾಲೇಜಿನ ಮತ್ತು ಪ್ರೌಢಶಾಲೆಯ ಎಲ್ಲಾ ಅಧ್ಯಾಪಕ ವೃಂದದವರು, ಅಡುಗೆ ಸಿಬ್ಬಂದಿಯವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.