ಸುಂಟಿಕೊಪ್ಪ, ಆ. ೨೫: ಮಾದಾಪುರ ರಸ್ತೆಯ ಶ್ರೀ ವೃಕ್ಷೆÆÃದ್ಭವ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಆ. ೨೬ ರಂದು ಪೂರ್ವಾಹ್ನ ೯.೪೫ ರಿಂದ ೧೦.೪೦ ರವರೆಗೆ ಸಲ್ಲುವ ತುಲಾ ಲಗ್ನದಲ್ಲಿ ದೇವಸ್ಥಾನದ ಆವರಣದಲ್ಲಿ ಗೌರಿ ಪ್ರತಿಷ್ಠಾಪನೆ ನಡೆಯಲಿವೆ.

ಆ. ೨೭ ರಂದು ಬುಧವಾರ ಮಧ್ಯಾಹ್ನ ೧೨ ಗಂಟೆಗೆ ಶ್ರೀ ಶಕ್ತಿ ಗಣಪತಿಗೆ ವಿಶೇಷಪೂಜೆ ಹಾಗೂ ಮಹಾ ಮಂಗಳಾರತಿ ನಡೆಯಲಿದೆ ಅಂದು ಸಂಜೆ ೫ಕ್ಕೆ ವಿವಿಧ ಪೂಜಾ ವಿಧಿವಿಧಾನಗಳ ನಂತರ ಹರದೂರು ಹೊಳೆಯಲ್ಲಿ ಗೌರಿಯನ್ನು ವಿಸರ್ಜಿಸಲಾಗುವುದೆಂದು ಶ್ರೀ ವೃಕ್ಷೆÆÃದ್ಭವ ಶಕ್ತಿ ಗಣಪತಿ ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಎ. ಲೋಕೇಶ್‌ಕುಮಾರ್ ತಿಳಿಸಿದ್ದಾರೆ.

ಕೊಡಗರಹಳ್ಳಿಯ ಶ್ರೀ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ೭ನೇ ವರ್ಷದ ಗೌರಿ ಗಣೇಶೋತ್ಸವದ ಮೂರ್ತಿಯನ್ನು ಪ್ರತಿಷ್ಠಾಪಿಸಿ ೩ ದಿನಗಳ ಕಾಲ ವಿಶೇಷಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ವರ್ಷವೂ ಆಯೋಜಿಸಿಕೊಂಡು ಬರಲಾಗುತ್ತಿರುವ ಕೊಡಗರಹಳ್ಳಿಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎನ್.ಡಿ. ದೇವಯ್ಯ ಅವರು ದಾನವಾಗಿ ನೀಡಿರುವ ಜಾಗದಲ್ಲಿ ೩ ದಿನಗಳ ಕಾಲ ಗೌರಿ ಗಣೇಶೋತ್ಸವ ತಾ.೨೭ರಂದು ಬುಧವಾರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಸಂಜೆ ೬ ಗಂಟೆಗೆ ಶ್ರೀ ಬೈತೂರಪ್ಪ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ, ತಾ.೨೮ರಂದು ೬ಕ್ಕೆ ಮಕ್ಕಳು ಹಾಗೂ ಸಾರ್ವಜನಿಕರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ, ತಾ.೨೯ರಂದು ಪೂಜೆಯ ನಂತರ ಮಹಾ ಮಂಗಳಾರತಿ, ಅನ್ನ ಸಂತರ್ಪಣೆ ನಡೆಯಲಿದ್ದು, ಸಂಜೆ ೩ಕ್ಕೆ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ಭವ್ಯ ಮಂmಪದಲ್ಲಿರಿಸಿ ಮೆರವಣಿಗೆ ನಂತರ ಕೊಡಗರಹಳ್ಳಿ ಸಮೀಪದ ಕೆರೆಯಲ್ಲಿ ವಿಸರ್ಜಿಸಲಾಗುವುದೆಂದು ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆದಕಲ್ ಗ್ರಾಮ ಪಂಚಾಯಿತಿಯ ಹೊರೂರು ಮಠ ಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಹೊರೂರು ಮಠದಲ್ಲಿ ತಾ. ೨೭ ರಂದು ಬೆಳಿಗ್ಗೆ ೬ಕ್ಕೆ ಗಣಪತಿ ಹೋಮದ ನಂತರ ಗೌರಿ ಗಣೇಶÀ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ತಾ. ೩೦ರ ವರೆಗೆ ಮಾಹಾ ಪೂe,ೆ ಮಂಗಳಾರತಿ ಪ್ರಸಾದ ವಿತರಣೆ ಕಾರ್ಯ ನಡೆಯಲಿದೆ. ತಾ.೩೧ರಂದು ಭಾನುವಾರ ವಿಶೇಷ ಪೂಜೆ, ಮಹಾಪೂಜೆ, ಮಂಗಳಾರತಿ, ಅನ್ನದಾನ ನಂತರ ಸಂಜೆ ಮೂರು ಗಂಟೆಯ ನಂತರ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ಹೊರೂರು ಮಠದ ಕೆರೆಯಲ್ಲಿ ವಿಸರ್ಜಿಸಲಾಗುವುದೆಂದು ಗೌರಿ ಗಣೇಶೋತ್ಸವ ಸೇವಾ ಸಮಿತಿಯ ದೇವಿಪ್ರಸಾದ್ ಕಾಯರ್‌ಮಾರ್, ಬಿ.ಕೆ. ನಾಗಪ್ಪ, ಕೃಷ್ಣಪ್ಪ, ಭರತ್ ಸೇರಿದಂತೆ ಅಧ್ಯಕ್ಷರು ಪದಾಧಿಕಾರಿಗಳು ತಿಳಿಸಿದ್ದಾರೆ.