ಮಡಿಕೇರಿ ಆ. ೨೫: ಮಡಿಕೇರಿಯ ಐತಿಹಾಸಿಕ ಓಂಕಾರೇಶ್ವರ ಮತ್ತು ಆಂಜನೇಯ ದೇವಾಲಯಗಳ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು. ಇಂದು ಓಂಕಾರೇಶ್ವರ ವ್ಯವಸ್ಥಾಪನ ಸಮಿತಿಯಿಂದ ಅವರನ್ನು ಭೇಟಿ ಮಾಡಿ ದೇವಾಲಯಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಾಯಿತು. ಈ ಕಾರ್ಯಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ನಡೆಸುವಂತೆ ಸಲಹೆಯಿತ್ತ ಜಿಲ್ಲಾಧಿಕಾರಿಯವರು ಶಾಸಕರೊಂದಿಗೂ ಚರ್ಚಿಸಿ ದೇವಾಲಯದ ಉಳಿಕೆ ಹಣವೂ ಸೇರಿದಂತೆ ಹಂತ ಹಂತವಾಗಿ ಸರಕಾರದ ನೆರವಿನೊಂದಿಗೆ ಕಾರ್ಯಗತಗೊಳಿಸುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು.

ಕೋಟೆ ಗಣಪತಿ ದೇವಾಲಯದಲ್ಲಿ ಯಾವದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪ್ರಾಚ್ಯ ವಸ್ತು ಇಲಾಖೆಯಿಂದ ಅನುಮತಿ ಪಡೆಯುವ ಅವಶ್ಯಕತೆ ಬಗ್ಗೆ ಸಮಿತಿಯ ಅಧ್ಯಕ್ಷ ಎ.ಸಿ. ದೇವಯ್ಯ ಗಮನಕ್ಕೆ ತಂದರು. ಅಲ್ಲಿ ಕೈಗೊಳ್ಳಬೇಆಕಾದ ಅಗತ್ಯ ಕಾರ್ಯಗಳ ಕುರಿತು ಲಿಖಿತ ವಿವರ ಮಾಹಿತಿ ಒದಗಿಸಿದರೆ ಜಿಲ್ಲಾಡಳಿತದಿಂದÀ ಪ್ರಾಚ್ಯ ವಸ್ತು ಇಲಾಖೆಗೆ ಪ್ರಸ್ತಾವನೆ ಕಳುಹಿಸಿ ಅನುಮತಿ ಪಡೆಯಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯಪಟ್ಟರು. ಅಲ್ಲದೆ, ಮಡಿಕೇರಿಯ ಓಂಕಾರೇಶ್ವರ ಸೇರಿದಂತೆ, ಭಾಗಮಂಡಲ ಭಗಂಡೇಶ್ವರ ಹಾಗೂ ಪಾಡಿ ಇಗ್ಗುತಪ್ಪ ದೇವಾಲಯಗಳಿಗೆ ದಿವಂಗತ ಡೋಲಿ ಸೇಟ್ ಅವರು ಮಹದೇವ ಪೇಟೆಯಲ್ಲಿನ ತಮ್ಮ ಆಸ್ತಿಯನ್ನು ವಿಲ್ ಬರೆದು ಕೊಟ್ಟಿರುವ ಬಗ್ಗೆ ದಾಖಲತಿ ಮೂಲಕ ಡಿಸಿಯವರ ಗಮನಕ್ಕೆ ತರಲಾಯಿತು. ಆ ಆಸ್ತಿ ಲಭ್ಯವಾದರೆ ಮಾರಾಟ ಮಾಡಿ ಮೂರೂ ದೇವಾಲಯಗಳ ಅಭಿವೃದ್ಧಿಗೆ ಬಳಸಿ ಕೊಳ್ಳಬಹು ದಾಗಿದೆ ಎಂದು ಸಮಿತಿ ಅಧ್ಯಕ್ಷರು ಗಮನಕ್ಕೆ ತಂದರು. ಈ ಸಂಬAಧ ಆಯಾ ದೇವಾಲಯ ನಿರ್ವಹಣಾಧಿಕಾರಿಗಳ ಮೂಲಕ ಪ್ರಯತ್ನ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಆಶ್ವಾಸÀನೆಯಿತ್ತರು.

ಸಮಿತಿಯಿಂದ ಜಿಲ್ಲಾಧಿಕಾರಿಯವರಿಗೆ ಈ ಸಂದರ್ಭ ಗೌರವ ಸಲ್ಲಿಸಲಾಯಿತು. ಸಮಿತಿ ಸದಸ್ಯರುಗಳಾದ ಎ. ಕುಶಾಲಪ್ಪ, ಪ್ರಕಾಶ್ ಆಚಾರ್ಯ, ವಿಶಾಲ್ ನಂದಕುಮಾರ್, ಸಂತೋಷ್ ಭಟ್, ಜಿ.ರಾಜೇಂದ್ರ ಹಾಗೂ ಕೆ. ಕವಿತಾ ಈ ಸಂದರ್ಭ ಹಾಜರಿದ್ದರು.