ಶ್ರೀಮಂಗಲ, ಆ. ೨೩: ಕಲಾವಿದ ಉಳುವಂಗಡ ಲೋಹಿತ್ ಭೀಮಯ್ಯ ಅವರಿಗೆ ಪ್ರತಿಷ್ಠಿತ ಹ್ಯೂಮನ್ಟೇರಿಯನ್ ಎಕ್ಸಲೆನ್ಸ್ ಅವಾರ್ಡ್ ೨೦೨೫ ಅನ್ನು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ದಿಲ್ಲಿ ಐ ಕ್ಯಾನ್ ಫೌಂಡೇಶನ್ಸ್ ಮತ್ತು ನೀತಿ ಆಯೋಗದ ಜಂಟಿ ಆಶ್ರಯದಲ್ಲಿ ದೆಹಲಿಯ ದ್ವಾರಕ ರೆಡಿಷನ್ ಅಭಾ ಮಹಲ್‌ನಲ್ಲಿ ಲೋಕಸಭಾ ಸದಸ್ಯ ಕಮಜಿತ್ ಶೇರಾವತ, ರಾಜ್ಯಸಭಾ ಮಾಜಿ ಸದಸ್ಯ ಸಂತೋಷ ಬಗೋರ್ದಿರ, ಓ.ಏನ್.ಜಿ.ಎಂ ನಿರ್ದೇಶಕ ಜೋಹಾರಿ ಲಾಲ್, ಶ್ರೀ ರಾಮ್ ಯುನಿವರ್ಸಿಟಿಯ ಪ್ರಾಂಶುಪಾಲ ಶಿಮ್ರಿಯಾ ಕೌರ್ ಹಾಗೂ ಐಕಾನ್ ಫೌಂಡೇಷನ್ಸ್ ಅಧ್ಯಕ್ಷ ಗೌರಮ್ ಗೌತಮ್ ಪ್ರಶಸ್ತಿ ವಿತರಿಸಿದರು.
ಐಕಾನ್ ಫೌಂಡೇಷನ್ ವತಿಯಿಂದ ಸಮಾಜದಲ್ಲಿ ಬದಲಾವಣೆ ಮತ್ತು ಸಾಮಾಜಿಕ ಕಾರ್ಯದಲ್ಲಿ ತೊಡಗಿರುವರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕೆಲಸವನ್ನು ಕಳೆದ ೧೦ ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿ ಸುಮಾರು ೧೪೦ ಜನ ಸನ್ಮಾನಿತರಲ್ಲಿ ಕರ್ನಾಟಕ ರಾಜ್ಯದಿಂದ ಲೋಹಿತ್ ಭೀಮಯ್ಯ ಅವರನ್ನು ಹ್ಯುಮಾನಿಟೀರಿಯನ್ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.