ಸಿದ್ದಾಪುರ, ಆ. ೧೫: ಸಿದ್ದಾಪುರದ ಸರ್ಕಾರಿ ಮಲಯಾಳಂ ಶಾಲೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಚುಗಳನ್ನು ಯುವಕರು ವಿತರಣೆ ಮಾಡಿದರು.
ನೆಲ್ಲಿಹುದಿಕೇರಿಯ ಸಮಾಜಸೇವಕ ಕೆ.ಎಂ. ಬಶೀರ್ ಅವರ ಸಹಕಾರದೊಂದಿಗೆ ನಾಲ್ಕು ಬೆಂಚುಗಳನ್ನು ಶಿಕ್ಷಕರುಗಳ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿರುವ ಯುವಕರು ಸೇವಾ ಮನೊಭಾವದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯುವಕರ ಬಗ್ಗೆ ಶಿಕ್ಷಕರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜ ಸೇವಾ ಸಂಘಟನೆಯ ಪ್ರಮುಖರಾದ ಮಿಥುನ್, ಅರುಣ್, ಆಶಿಕ್, ಜಮಾಲ್, ಟೋನಿ, ಶಿವಶಂಕರ, ಜಾಗು, ಕುಶ, ದಿನೇಶ್, ಶಿವ, ಕಿರಣ್ ಸೇರಿದಂತೆ ಮತ್ತಿತರರು ಹಾಜರಿದ್ದರು.