ಸೋಮವಾರಪೇಟೆ, ಆ. ೧೫: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸೋಮವಾರಪೇಟೆ ಘಟಕದ ವತಿಯಿಂದ ಸ್ವಾತಂತ್ರ‍್ಯ ದಿನಾಚರಣೆ ಪ್ರಯುಕ್ತ ನೇರುಗಳಲೆ ಸರ್ಕಾರಿ ಶಾಲೆಯ ನಾಲ್ಕನೇ ತರಗತಿಯಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾತಂತ್ರö್ಯ ಹೋರಾಟಗಾರರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಾಹಿತ್ಯ ವೇದಿಕೆಯ ತಾಲೂಕು ಅಧ್ಯಕ್ಷೆ ಶರ್ಮಿಳಾ ರಮೇಶ್, ಉಪಾಧ್ಯಕ್ಷ ಕೆ.ಪಿ. ಸುದರ್ಶನ್, ಮಹಿಳಾ ಉಪಾಧ್ಯಕ್ಷೆ ಪದ್ಮಾವತಿ, ನಿರ್ದೇಶಕಿ ಅರುಣ, ಶಾಲಾ ಶಿಕ್ಷಕರಾದ ರಮೇಶ್, ಗಣೇಶ್, ಹೇಮಲತ, ಶಶಿಕಲಾ ಉಪಸ್ಥಿತರಿದ್ದರು.