ಶಾಸಕರಿಗೆ ಬ್ರಹ್ಮಾಕುಮಾರಿಗಳ ಶ್ರೀರಕ್ಷೆ
ಗೋಣಿಕೊಪ್ಪ ವರದಿ: ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರಿಗೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವೀರಾಜಪೇಟೆ ಶಾಖೆಯ ಸಂಚಾಲಕಿ ಬಿ. ಕೆ ಕೋಮಲ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಶ್ರೀರಕ್ಷೆ ಕಟ್ಟಿದರು. ರಕ್ಷಾ ಬಂಧನದ ಸಂದೇಶ ನೀಡಿ, ರಾಜಸ್ಥಾನದಲ್ಲಿರುವ ಸಂಸ್ಥೆಯ ಪ್ರಧಾನ ಕೇಂದ್ರ ಮೌಂಟ್ ಅಬುವಿನಲ್ಲಿ ಸೆಪ್ಟೆಂಬರ್ ೧೨ ರಿಂದ ೧೫ ರವರೆಗೆ ನಡೆಯಲಿರುವ ರಾಷ್ಟಿçÃಯ ರಾಜಕೀಯ ವಿಭಾಗದ ಸಮಾವೇಶಕ್ಕೆ ಆಹ್ವಾನಿಸಲಾಯಿತು.ವೀರಾಜಪೇಟೆ ಕಾವೇರಿ ಕಾಲೇಜು
ವೀರಾಜಪೇಟೆ: ರಕ್ಷಾಬಂಧನದಲ್ಲಿ ಕಟ್ಟುವ ರಕ್ಷೆ ರಕ್ಷಣೆಯ ಸಂಕೇತವಾಗಿದೆ ಎಂದು ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ ಹೇಳಿದರು.
ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತೀಯ ಸಂಸ್ಕೃತಿಯಲ್ಲಿ ಆಚರಿಸುವ ಅತ್ಯಂತ ಮಹತ್ವದ ಹಬ್ಬಗಳಲ್ಲಿ ರಕ್ಷಾಬಂಧನವೂ ಪ್ರಮುಖ ಸ್ಥಾನ ಪಡೆದಿದೆ. ಸಹೋದರ ಸಹೋದರಿಯರ ನಡುವೆ ಬಾಂಧವ್ಯದ ಪ್ರತೀಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರೀ, ವಿಶ್ವಾಸ, ಸಹೋದರತೆ, ರಕ್ಷಣೆ ಮುಂತಾದವುಗಳನ್ನು ಬೆಳೆಸಿಕೊಳ್ಳುವಂತೆ ಈ ಹಬ್ಬವು ಕರೆ ನೀಡುತ್ತದೆ. ರಕ್ಷಾ ಬಂಧನ ಜಾತಿ, ಧರ್ಮ, ಭೇದ ಭಾವವನ್ನು ತೊಡೆದು ಹಾಕಿ ಎಲ್ಲರನ್ನು ಒಂದಾಗಿಸಿ ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು. ಕಾಲೇಜಿನ ಉಪನ್ಯಾಸಕಿ ಬಿ.ಯು .ಅಂಬಿಕಾ ಮಾತನಾಡಿದರು. ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿದರು. ಈ ಸಂದರ್ಭ ಕಾಲೇಜಿನ ಆಯ್ಕೆ ಸಂಚಾಲಕಿ ಪ್ರಿಯ ಮುದ್ದಪ್ಪ, ಕಾಲೇಜಿನ ಉಪನ್ಯಾಸಕ ವರ್ಗ ಆಡಳಿತಾತ್ಮಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.