ಮಡಿಕೇರಿ, ಆ. ೧೫: ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಕೊಡಗು ಜಿಲ್ಲಾ ಸಮಿತಿಯ, ತಾಲೂಕು ಘಟಕವಾದ ಕುಶಾಲನಗರ ಚುಟುಕು ಸಾಹಿತ್ಯ ಪರಿಷತ್ತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೊಡಗು ಕನ್ನಡ ಭವನ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ತಿಳಿಸಿದ್ದಾರೆ.

ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕುಶಾಲನಗರ ತಾಲೂಕು ಘಟಕದ ಪದಾಧಿಕಾರಿಗಳು. ಗೌರವ ಅಧ್ಯಕ್ಷರಾಗಿ ಬೊಳ್ಳಜಿರ ಬಿ. ಅಯ್ಯಪ್ಪ, ಅಧ್ಯಕ್ಷರಾಗಿ ದಿನೇಶ್ ಚಾರಿ ಹೆಚ್.ಬಿ. ಉಪಾಧ್ಯಕ್ಷರಾಗಿ ಕೆ. ಶಾಂತಕುಮಾರ್ ಹಾಗೂ ಮಾಲಾದೇವಿ ಎನ್.ಕೆ, ಪ್ರಧಾನ ಕಾರ್ಯದರ್ಶಿಯಾಗಿ ಅಮೃತ ಕೆ.ವಿ., ಸಹಕಾರ್ಯದರ್ಶಿಯಾಗಿ ರಮೇಶ್ ಕೆ.ಆರ್., ಕೋಶಾಧಿಕಾರಿಯಾಗಿ ಬರಮಣ್ಣ ಟಿ. ಬೆಟ್ಟಗೇರಿ ಹಾಗೂ ನಿರ್ದೇಶಕರಾಗಿ ಚಂದ್ರಶೇಖರ್ ಕೆ.ಎಸ್., ಎಸ್.ಎಸ್. ಅಂಕಿತಾ, ಮಂಜುನಾಥ್, ಪ್ರಕಾಶ್, ಶಿಲ್ಪ ಎಸ್.ಹೆಚ್., ದೀಪಿಕಾ ಎಂ.ಎಸ್, ಬಸವರಾಜ್ ಹಾಗೂ ಮನು ಅವರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಕಾರ್ಯಕ್ರಮದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.